ಕೃಷಿಯನ್ನು ಉಪಕಸುಬಾಗಿ ಮಾಡಿಕೊಳ್ಳುವ ಅನಿವಾರ್‍ಯತೆ ಎದುರಾಗಿದೆ: ರಮೇಶ್‌ ಬಂಡಿಸಿದ್ದೇಗೌಡ

KannadaprabhaNewsNetwork |  
Published : Oct 18, 2026, 02:45 AM IST
17ಕೆಎಂಎನ್ ಡಿ25 | Kannada Prabha

ಸಾರಾಂಶ

ಈ ಹಿಂದೆ ನಮ್ಮ ಪೂರ್ವಿಕರು ಕೇವಲ ಒಂದು ಒಂದು ಬೆಳೆಗಳಿಗೆ ಸೀಮಿತವಾಗದೆ, ತೆಂಗು, ಬಾಳೆ, ಅಡಕೆ, ಭತ್ತ, ಕಬ್ಬು, ಕುರಿ, ಕೋಳಿ, ಮೇಕೆ, ಹಸು ಸಾಕಾಣಿಕೆ ಮಾಡುವ ಮೂಲಕ ಸಮಗ್ರ ಕೃಷಿ ಮಾಡಿ ತಮ್ಮ ಜೀವನೋಪಾಯಕ್ಕೆ ಬೇಕಾಗಿದ್ದ ಅಗತ್ಯತೆಗಳನ್ನು ಪೂರೈಸಿಕೊಳ್ಳುತಿದ್ದರು

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ನಾವು ಇಂದು ಕೃಷಿಯನ್ನು ಉಪಕಸುಬಾಗಿ ಮಾಡಿಕೊಳ್ಳುವ ಅನಿವಾರ್ಯತೆ ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಶ್ರೀರಂಗ ವೇದಿಕೆಯಲ್ಲಿ ಶ್ರೀರಂಗಪಟ್ಟಣ ದಸರಾ ಅಂಗವಾಗಿ ಆಯೋಜಿಸಲಾಗಿದ್ದ ರೈತ ದಸರಾವನ್ನು ಉದ್ಘಾಟಿಸಿ ಮಾತನಾಡಿ, ರೈತರು ಜೀವನಾಧಾರಿತ ಕೃಷಿ ಕಸುಬನ್ನು ಮುಂದುವರೆಸುತ್ತಿದ್ದು, ತಮ್ಮ ಜೀವನದ ನಡುವೆ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸೇರಿದಂತೆ ಇತರೆ ಸಮಸ್ಯೆಗಳಲ್ಲಿ ಬೆರೆತು ಹೋಗಿ ಕೃಷಿಯನ್ನು ಉಪಕಸುಬಾಗಿ ಮಾಡಿಕೊಳ್ಳದೆ ಕಾರಣ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರು.

ಈ ಹಿಂದೆ ನಮ್ಮ ಪೂರ್ವಿಕರು ಕೇವಲ ಒಂದು ಒಂದು ಬೆಳೆಗಳಿಗೆ ಸೀಮಿತವಾಗದೆ, ತೆಂಗು, ಬಾಳೆ, ಅಡಕೆ, ಭತ್ತ, ಕಬ್ಬು, ಕುರಿ, ಕೋಳಿ, ಮೇಕೆ, ಹಸು ಸಾಕಾಣಿಕೆ ಮಾಡುವ ಮೂಲಕ ಸಮಗ್ರ ಕೃಷಿ ಮಾಡಿ ತಮ್ಮ ಜೀವನೋಪಾಯಕ್ಕೆ ಬೇಕಾಗಿದ್ದ ಅಗತ್ಯತೆಗಳನ್ನು ಪೂರೈಸಿಕೊಳ್ಳುತಿದ್ದರು. ಹೀಗಾಗಿ ಸಮಗ್ರ ಕೃಷಿ ಬಿಟ್ಟು, ಕೇವಲ ಒಂದು ಬೆಳೆಗಳಿಗೆ ಸೀವಿತವಾಗಿದ್ದೇವೆ. ಪ್ರಸ್ತುತ ರೈತರು ಕೃಷಿಯನ್ನು ಉಪಕಸುಬಾಗಿ ಮಾಡಿಕೊಳ್ಳುವ ಅನಿವಾರ್‍ಯತೆ ಎದುರಾಗಿದೆ ಎಂದು ಸಲಹೆ ನೀಡಿದರು.

ವಿ.ಸಿ ಫಾರಂನ ಬೇಸಾಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಡಿ.ಎಸ್ ಪ್ರಭುದೇವ್ ಮಾತನಾಡಿ, ಕೃಷಿಯಲ್ಲಿ ಸಮರ್ಪಕ ನೀರಿನ ನಿರ್ವಹಣೆ ಅತ್ಯಗತ್ಯ ಪ್ರಸ್ತುತ ಹವಾಮಾನ ವೈಪರಿತ್ಯದಿಂದಾಗಿ ಸಮರ್ಪಕ ಮಳೆಯಾಗಲದಲ್ಲೂ ಬರಗಾಲ ಎದುರಿಸುವ ಪರಿಸ್ಥಿತಿ ನಿರ್ಮಾವಾಗಿದೆ ಎಂದರು.

ಐಎಎಚ್‌ವಿಬಿ ಬೆಂಗಳೂರಿನ ಹಿರಿಯ ವಿಜ್ಞಾನಿ ಡಾ.ಶಂಕರ್, ಸಿಎಸ್‌ಆರ್‌ಟಿಐನ ಹಿರಿಯ ವಿಜ್ಞಾನ ಡಾ. ಶಿವಕುಮಾರ್ ಮಾತನಾಡಿದರು. ಇದೇ ವೇಳೆ ಸಮಗ್ರ ಕೃಷಿಯಲ್ಲಿ ಸಾಧನೆಗೈದ ರೈತ ಮಹಿಳೆಯರು ಮತ್ತು ಪ್ರಗತಿಪರ ಕೃಷಿ ಸಾಧಕರನ್ನು ಸನ್ಮಾನಿಸಲಾಯಿತು.

ಈ ವೇಳೆ ಪಂಚಗ್ಯಾರಂಟಿ ಅನುಷ್ಠಾನ ಯೋಜನೆ ತಾಲೂಕು ಅಧ್ಯಕ್ಷ ಎಂ.ಎಲ್ ದಿನೇಶ್, ತಾಲೂಕು ಜಂಟಿ ಕೃಷಿ ನಿರ್ದೇಶಕ ಜಯಸ್ವಾಮಿ, ಉಪ ಕೃಷಿ ನಿರ್ದೇಶಕಿ ಸುಶ್ಮ, ಸಹಾಯಕ ಕೃಷಿ ನಿರ್ದೇಶಕಿ ಪ್ರಯದರ್ಶಿನಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಸಿ.ಆರ್ ಕೃಷ್ಣ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸಹಾಯಕ ನಿರ್ದೇಶಕ ಡಾ. ಪ್ರವೀಣ್, ತಹಸೀಲ್ದಾರ್ ಚೇತನಾ ಯಾದವ್, ತಾ.ಪ ಇಒ ಚಂದ್ರು ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏಷ್ಯನ್ ಪ್ಯಾರಾ ಗೇಮ್ಸ್‌ಗೆ ಬಳ್ಳಾರಿಯ ಗೋಪಿಚಂದ್ ಲಿಂಗುಟ್ಲ ಆಯ್ಕೆ
ಪಡಿತರ ಚೀಟಿದಾರರ ಇ-ಕೆವೈಸಿ ಗಡುವು ವಿಸ್ತರಿಸಿ