ಕಾಂಗ್ರೆಸ್‌ನಿಂದ ಮಹಿಳೆಯರ ಕಡೆಗಣನೆ ರಾಜ್ಯ ಸಂಪುಟದಲ್ಲಿ ಕಾಣುತ್ತಿದೆ: ಪೀಹಳ್ಳಿ ರಮೇಶ್

KannadaprabhaNewsNetwork |  
Published : Aug 10, 2026, 02:00 AM IST
9ಕೆಎಂಎನ್ ಡಿ21 | Kannada Prabha

ಸಾರಾಂಶ

ರಾಜ್ಯ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಆದ್ಯತೆ ಕೊಡದಿರುವುದು ಎದ್ದು ಕಾಣುತ್ತಿದೆ. ಜೊತೆಗೆ ನೀಟ್ ಅಕ್ರಮ ಎಸಗಿದ ಆರೋಪಿಗಳ ವಿರುದ್ಧ ಕೇಂದ್ರ ಸರ್ಕಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈಗ ಉತ್ತರ ಪ್ರದೇಶದಲ್ಲಿ 2 ಕೋಟಿ 85 ಲಕ್ಷ ಅರ್ಹರಲ್ಲದ ಮತದಾರರು ಮತ ಪಟ್ಟಿಯಿಂದ ಕೈಬಿಟ್ಟಿರುವುದು ಕಣ್ಣಾರೆ ಕಾಣಬಹುದು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರತಿ ಬಾರಿ ಕಾಂಗ್ರೆಸ್ ಪಕ್ಷ ಮಹಿಳೆಯರನ್ನು ಕಡೆಣಿಸುತ್ತಿದೆ ಎಂಬುದಕ್ಕೆ ಈಗಿನ ಸಚಿವ ಸಂಪುಟದಲ್ಲಿ ಕಾಣುತ್ತಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್ ದೂರಿದರು.

ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಎಸ್‌ಐಆರ್ ಕುರಿತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಹರ್‌ಘರ್ ತಿರಂಗಾ ಕುರಿತ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಕೇಂದ್ರದಲ್ಲಿ ಮಹಿಳಾ ಮೀಸಲಾತಿ ವಿಧೇಯಕವನ್ನು ಮಂಡಿಸುವಾಗ ವಿರೋಧಿಸಿರುವುದು ಕಾಂಗ್ರೆಸ್‌ನ ದ್ವಿಮುಖ ನೀತಿಗೆ ಕಾರಣವಾಗಿದೆ ಎಂದು ದೂರಿದರು.

ರಾಜ್ಯ ಕಾಂಗ್ರೆಸ್ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಆದ್ಯತೆ ಕೊಡದಿರುವುದು ಎದ್ದು ಕಾಣುತ್ತಿದೆ. ಜೊತೆಗೆ ನೀಟ್ ಅಕ್ರಮ ಎಸಗಿದ ಆರೋಪಿಗಳ ವಿರುದ್ಧ ಕೇಂದ್ರ ಸರ್ಕಾರ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈಗ ಉತ್ತರ ಪ್ರದೇಶದಲ್ಲಿ 2 ಕೋಟಿ 85 ಲಕ್ಷ ಅರ್ಹರಲ್ಲದ ಮತದಾರರು ಮತ ಪಟ್ಟಿಯಿಂದ ಕೈಬಿಟ್ಟಿರುವುದು ಕಣ್ಣಾರೆ ಕಾಣಬಹುದು ಎಂದರು.

ಪಟ್ಟಣದಲ್ಲಿ ಅರ್ಹ ಮತದಾರರನ್ನು ಗುರುತಿಸುವ ಕೆಲಸ ಮಾಡಿದ ನಮ್ಮ ಬಿಜೆಪಿಯ ಬಿಎಲ್‌ಎ-2ಗಳು ಪಟ್ಟಿಗೆ ಸೇರಿಸಲು ಬಹಳ ಶ್ರಮ ವಹಿಸಿದ್ದಾರೆ. ಅವರಿಗೂ ಅಭಿನಂದಿಸುತ್ತೇನೆ. ಈಗಾಗಲೇ ಮತದಾರರ ವಿಶೇಷ ಪರಿಸ್ಕರಣೆ ಮೂಲಕ ಕ್ಷೇತ್ರದಲ್ಲಿ ಮತದಾರರ ಗೈರು ಹಾಜರಿ 1453, ಇಲ್ಲಿಂದ ಬೇರೇಡೆಗೆ ಸ್ಥಳಾಂತರಗೊಂಡ ಮತದಾರರು 11, 815 ಇದ್ದಾರೆ. ಇನ್ನು 5564 ಮಂದಿ ಮರಣ ಹೊಂದಿದ್ದಾರೆ. ಕ್ಷೇತ್ರದಲ್ಲಿ ಎರಡು ಬಾರಿ ನೋಂದವಣೆಯಾಗಿರುವುದು ಮತದಾರರ ಸಂಖ್ಯೆ 2530 ಮಂದಿ ಆಗಿದ್ದು, ಈಗಾಗಲೇ ಇವೆಲ್ಲವೂ ವಿಶೇಷ ಮತದಾರರ ಪರಿಷ್ಕರಣೆಯಿಂದ ಕೈ ಬಿಡಲಾಗಿದೆ ಎಂದರು.

ಈ ವೇಳೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ, ಜಿಲ್ಲಾ ಕಾರ್ಯದರ್ಶಿ ರಾಶಿ ಸಿದ್ದರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಸಂತೋಷ, ಬಿಎಲ್‌ಓ-1 ಪ್ರಭಾಕರ್, ಹನಿಯಂಬಾಡಿ ಸಂತೋಶ್, ಎಸ್ಸಿ ಮೋರ್ಚಾ ಅಧ್ಯಕ್ಷ ಯತಿರಾಜ್, ಮಹಿಳಾ ಮೋರ್ಚಾ ಅಧ್ಯಕ್ಷೆ ಮಾನಸ, ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಪದಾಧಿಕಾರಿಗಳು ಕಾರ್ಯಕರ್ತ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಸೂಚನೆ ರದ್ದುಪಡಿಸದಿದ್ದರೆ ಬೃಹತ್‌ ಹೋರಾಟ ಅನಿವಾರ್ಯ: ಬಿ.ಬಿ. ನಿಂಗಯ್ಯ
ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ದಾವಣಗೆರೆಯಲ್ಲೇ ನಡೆಯಲಿ