ನೂತನ ಸುವರ್ಣ ಸೌಧ ಇಂದು ಉದ್ಘಾಟನೆ

KannadaprabhaNewsNetwork | Published : Oct 7, 2024 1:32 AM

ಸಾರಾಂಶ

ಲಕ್ಕವಳ್ಳಿ ಗ್ರಾಮಜ್ಯೋತಿ ಎಜುಕೇಶನಲ್ ಸೊಸೈಟಿಯಿಂದ ಸೊಸೈಟಿ ಆವರಣದಲ್ಲಿ ನಿರ್ಮಾಣಗೊಂಡಿರುವ ಸುವರ್ಣ ಸೌಧ ಉದ್ಘಾಟನೆ ಅ.7 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.ತಾಲೂಕಿನ ಲಕ್ಕವಳ್ಳಿ ಗ್ರಾಮದ ಗ್ರಾಮ ಜ್ಯೋತಿ ವಿದ್ಯಾಸಂಸ್ಥೆ 1963ರಲ್ಲಿ ವಿಧಾನ ಸಭಾ ಮಾಜಿ ಉಪಾಧ್ಯಕ್ಷ ದಿ. ಎಲ್.ಎಚ್.ತಿಮ್ಮಾಭೋವಿ ಯವರು ಸ್ಥಳೀಯ ದಾನಿಗಳ ಸಹಕಾರದಿಂದ ಕೂಲಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸ್ಥಾಪಿಸಿದ್ದು, ವಿದ್ಯಾಸಂಸ್ಥೆಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸಂಸ್ಥೆ ಆಡಳಿತ ಮಂಡಳಿ ನೂತನ ಆಡಳಿತ ಭವನ ಹೊಂದಿಕೊಂಡಂತೆ ಶಾಲಾ ಕೊಠಡಿಗಳು ನಿರ್ಮಾಣ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ, ತರೀಕೆರೆ

ಲಕ್ಕವಳ್ಳಿ ಗ್ರಾಮಜ್ಯೋತಿ ಎಜುಕೇಶನಲ್ ಸೊಸೈಟಿಯಿಂದ ಸೊಸೈಟಿ ಆವರಣದಲ್ಲಿ ನಿರ್ಮಾಣಗೊಂಡಿರುವ ಸುವರ್ಣ ಸೌಧ ಉದ್ಘಾಟನೆ ಅ.7 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.

ತಾಲೂಕಿನ ಲಕ್ಕವಳ್ಳಿ ಗ್ರಾಮದ ಗ್ರಾಮ ಜ್ಯೋತಿ ವಿದ್ಯಾಸಂಸ್ಥೆ 1963ರಲ್ಲಿ ವಿಧಾನ ಸಭಾ ಮಾಜಿ ಉಪಾಧ್ಯಕ್ಷ ದಿ. ಎಲ್.ಎಚ್.ತಿಮ್ಮಾಭೋವಿ ಯವರು ಸ್ಥಳೀಯ ದಾನಿಗಳ ಸಹಕಾರದಿಂದ ಕೂಲಿಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಸ್ಥಾಪಿಸಿದ್ದು, ವಿದ್ಯಾಸಂಸ್ಥೆಗೆ 50 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸಂಸ್ಥೆ ಆಡಳಿತ ಮಂಡಳಿ ನೂತನ ಆಡಳಿತ ಭವನ ಹೊಂದಿಕೊಂಡಂತೆ ಶಾಲಾ ಕೊಠಡಿಗಳು ನಿರ್ಮಾಣ ಮಾಡಲಾಗಿದೆ. ಇದರ ಉದ್ಘಾಟನೆಯನ್ನು ರಾಜ್ಯದ ಶಾಲಾ ಶಿಕ್ಷಣ,ಗ್ರಂಥಾಲಯ ಇಲಾಖೆ ಸಚಿವ ಮಧುಬಂಗಾರಪ್ಪ ನೇರವೇರಿಸಲಿದ್ದು, ಕ್ಷೇತ್ರದ ಶಾಸಕ ಜಿ.ಎಚ್ ಶ್ರೀನಿವಾಸ ಸಮಾರಂಭ ಉದ್ಘಾಟಿಸಲಿದ್ದಾರೆ. ಇಂಧನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಹಾಗೂ ಸೂಕ್ಷ್ಮ ಸಣ್ಣ ಮತ್ತು ಮದ್ಯಮ ಉದ್ಯಮಗಳ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಡಿ.ಎಸ್.ಸುರೇಶ್, ವಿಪ ಉಪ ಸಭಾಪತಿ ಪ್ರಾಣೇಶ, ವಿಪ ಸದಸ್ಯರಾದ ಸಿ.ಟಿ.ರವಿ, ಭೋಜೇಗೌಡರು , ಧನಂಜಯಸರ್ಜಿ, ಸ್ಥಳೀಯ ಸಂಸ್ಥೆ ಅಧ್ಯಕ್ಷ ಅಬ್ದುಲ್ ರೆಹಮಾನ್, ಉಪಾಧ್ಯಕ್ಷೆ ನಿರ್ಮಲ ಹಾಗೂ ಸದಸ್ಯರು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. ಲಕ್ಕವಳ್ಳಿ ಗ್ರಾಮಜ್ಯೋತಿ ಎಜುಕೇಶನಲ್ ಸೊಸೈಟಿ ಅಧ್ಯಕ್ಷ ಎಲ್.ಎನ್.ಸಂಜೀವ್ ಕುಮಾರ್ ಸಮಾರಂಭದ ಅಧ್ಯಕ್ಷತೆವಹಿಸುವರು.

ಪದಾಧಿಕಾರಿಗಳಾದ ಶ್ರೀಧರ್, ಬ್ರಹ್ಮರಾಜ್, ಪ್ರಕಾಶಾನಂದ,ರಾಜಶೇಖರ, ಎಸ್, ಕೃಷ್ಣ ಮೂರ್ತಿ,ಎಲ್.ಟಿ.ಹೇಮಣ್ಣ ಮತ್ತು ನಿರ್ದೇಶಕರು, ಸಂಸ್ಥೆಯ ಸದಸ್ಯರು, ಶಾಲಾ ಶಿಕ್ಷಕರ ವೃಂದ ಮತ್ತು ಸಿಬ್ಬಂದಿ ಭಾಗವಹಿಸುತ್ತಾರೆ.

6ಕೆಟಿಆರ್.ಕೆ.2ಃ

ತರೀಕೆರೆ ಸಮೀಪದ ಲಕ್ಕವಳ್ಳಿಯಲ್ಲಿ ಗ್ರಾಮಜ್ಯೋತಿ ಎಜುಕೇಶನಲ್ ಸೊಸೈಟಿಯಿಂದ ನಿರ್ಮಾಣವಾಗಿರುವ ಸುವರ್ಣ ಸೌಧ ನೂತನ ಅಡಳಿತ ಭವನ

Share this article