ಬ್ರಹ್ಮಾನಂದ ಶ್ರೀಗಳ ಆಶೀರ್ವಾದ ಪಡೆದ ಗಣ್ಯರು

KannadaprabhaNewsNetwork |  
Published : Aug 28, 2024, 12:47 AM IST
ಭಟ್ಕಳದ ಕರಿಕಲ್ ಧ್ಯಾನಮಂದಿರದಲ್ಲಿ ಚಾತುರ್ಮಾಸ ವ್ರತಾಚರಣೆಯಲ್ಲಿರುವ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಾದಪೂಜೆಯನ್ನು ಶಿರಸಿಯ ಶಾಸಕ ಭೀಮಣ್ಣ ನಾಯ್ಕ ನೆರವೇರಿಸಿ ಶ್ರೀಗಳ ಆಶೀರ್ವಾದ ಪಡೆದರು. | Kannada Prabha

ಸಾರಾಂಶ

ಶಾಸಕ ಭೀಮಣ್ಣ ನಾಯ್ಕ ದಂಪತಿ ಶಿರಸಿ ತಾಲೂಕು ಆರ್ಯ ಈಡಿಗ, ನಾಮಧಾರಿ, ಬಿಲ್ಲವ ಸಮಾಜದ ಪರವಾಗಿ ಸ್ವಾಮೀಜಿಗಳ ಪಾದಪೂಜೆ ನೆರೆವೇರಿಸಿ ಸ್ವಾಮೀಜಿಗಳಿಂದ ಮಂತ್ರಾಕ್ಷತೆಯನ್ನು ಪಡೆದರು.

ಭಟ್ಕಳ: ಇಲ್ಲಿನ ಕರಿಕಲ್ ಶ್ರೀರಾಮ ಧ್ಯಾನ ಮಂದಿರದಲ್ಲಿ ನಾಮಧಾರಿ ಸಮಾಜದ ಕುಲಗುರುಗಳು ಮತ್ತು ಉಜಿರೆಯ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳ ೩೮ನೇ ದಿನದ ಚಾತುರ್ಮಾಸ ಕಾರ್ಯಕ್ರಮದ ಪಾದಪೂಜೆ ಮತ್ತು ಸೇವೆ ಶಿರಸಿ ಭಾಗದ ನಾಮಧಾರಿ ಸಮಾಜದವರಿಂದ ನಡೆಯಿತು.

ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರ ನೇತೃತ್ವದಲ್ಲಿ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಶಿರಸಿಯಿಂದ ಸಾವಿರಕ್ಕೂ ಅಧಿಕ ಭಕ್ತರು ಮಠಕ್ಕೆ ಆಗಮಿಸಿ ಹೊರೆಕಾಣಿಕೆಯನ್ನು ನೀಡಿ ತಮ್ಮ ಒಂದು ದಿನದ ಸೇವೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿದರು.

ಶಾಸಕ ಭೀಮಣ್ಣ ನಾಯ್ಕ ದಂಪತಿ ಶಿರಸಿ ತಾಲೂಕು ಆರ್ಯ ಈಡಿಗ, ನಾಮಧಾರಿ, ಬಿಲ್ಲವ ಸಮಾಜದ ಪರವಾಗಿ ಸ್ವಾಮೀಜಿಗಳ ಪಾದಪೂಜೆ ನೆರೆವೇರಿಸಿ ಸ್ವಾಮೀಜಿಗಳಿಂದ ಮಂತ್ರಾಕ್ಷತೆಯನ್ನು ಪಡೆದರು.

ಭೀಮಣ್ಣ ನಾಯ್ಕ ಅವರು ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ ವ್ರತಾಚರಣೆ ಕಾರ್ಯಕ್ರಮದ ಹಾಗೂ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಯಲ್ಲಾಪುರದ ನಾಮಧಾರಿ ಅಭಿವೃದ್ಧಿ ಸಂಘದದಿಂದ ಸ್ವಾಮಿಗಳ ಪಾದಪೂಜೆ ನಡೆಯಿತು. ಸಾವಿರಾರು ಭಕ್ತರು ಚಾತುರ್ಮಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಭೋಜನ ಸ್ವೀಕರಿಸಿದರು. ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಪ್ರಮುಖರಾದ ಪದ್ಮರಾಜ್ ಪೂಜಾರಿ, ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಕ್ರೀಡಾಪಟು ಅಕ್ಷತಾ ಪೂಜಾರಿ, ಸಿಗಂದೂರು ದೇವಸ್ಥಾನದ ಪ್ರಮುಖರಾದ ರವಿಕುಮಾರ, ಜಿಲ್ಲಾ ನಿವೃತ್ತ ಅರಣ್ಯ ಅಧಿಕಾರಿಗಳಾದ ಉದಯ ನಾಯ್ಕ, ಎಸ್.ವಿ. ನಾಯ್ಕ ಸೇರಿದಂತೆ ಸಿದ್ದಾಪುರ, ಕುಮಟಾ, ಹೊನ್ನಾವರ, ಭಟ್ಕಳ ಭಾಗದ ಭಕ್ತಾದಿಗಳು ಸ್ವಾಮೀಜಿಯವರಿಂದ ಮಂತ್ರಾಕ್ಷತೆ ಪಡೆದರು. ಸಂಜೆ ೬ ಗಂಟೆಗೆ ಯಕ್ಷಗಾನ ವೈಭವ ಕಾರ್ಯಕ್ರಮ ಪ್ರೇಕ್ಷಕರ ಮನರಂಜಿಸಿತು. ಇಂದು ಸತ್ಯಹರಿಶ್ಚಂದ್ರ ಯಕ್ಷಗಾನ ಪ್ರದರ್ಶನ

ಭಟ್ಕಳ: ತಾಲೂಕಿನ ಕರಿಕಲ್ ಶ್ರೀರಾಮ ಮಂದಿರದಲ್ಲಿ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಚಾತುರ್ಮಾಸ ವ್ರತ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನದ ಸಂಯೋಜನೆಯಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಆ. ೨೮ರಂದು ಸಂಜೆ ಪೌರಾಣಿಕ ಯಕ್ಷಗಾನ ಸತ್ಯಹರಿಶ್ಚಂದ್ರ ಪ್ರದರ್ಶನ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಮಧ್ಯಸ್ಥ ಗೋಳಿಕುಂಬ್ರಿ ತಿಳಿಸಿದ್ದಾರೆ.ಹಿಮ್ಮೇಳದಲ್ಲಿ ಭಾಗವತರಾಗಿ ಸರ್ವೇಶ್ವರ ಹೆಗಡೆ ಮೂರೂರು, ಗಣೇಶ್ ಯಾಜಿ ಇಡಗುಂಜಿ, ಮೃದಂಗ ಗಜಾನನ ಭಂಡಾರಿ ಬೊಳಗೆರೆ, ಚಂಡೆ ಗಜಾನನ ಹೆಗಡೆ ಸಾಂತೂರು ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಬಳ್ಕೂರು ಕೃಷ್ಣ ಯಾಜಿ, ಕೊಂಡದಕುಳಿ ರಾಮಚಂದ್ರ ಹೆಗಡೆ, ಅಶೋಕ್ ಭಟ್ ಸಿದ್ಧಾಪುರ, ಸುಬ್ರಹ್ಮಣ್ಯ ಹೆಗಡೆ ಯಲಗುಪ್ಪ, ಮಹಾಬಲೇಶ್ವರ ಭಟ್ ಇಟಗಿ, ಶ್ರೀಧರ ಭಟ್ ಕಾಸರಗೋಡು, ಮಾರುತಿ ನಾಯ್ಕ ಬೈಲಗದ್ದೆ, ಪ್ರಣಮ್ಯ ಭಟ್ ಭಂಡಿವಾಳ ಭಾಗವಹಿಸಲಿದ್ದು ವೇಷಭೂಷಣ ಲಕ್ಷ್ಮಣ ನಾಯ್ಕ ಮಂಕಿ ಅವರು ಸಹಕರಿಸಲಿದ್ದಾರೆ.

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ