ಅಕ್ಷರಸ್ಥರ ಸಂಖ್ಯೆಗಿಂತ ಅಪರಾಧಗಳ ಸಂಖ್ಯೆ ದ್ವಿಗುಣ

KannadaprabhaNewsNetwork |  
Published : Jul 01, 2025, 12:48 AM IST
ಜಜ್ಜ್ಜ | Kannada Prabha

ಸಾರಾಂಶ

ಅಕ್ಷರಸ್ಥರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಸಮಾಜದಲ್ಲಿ ಅದರ ದ್ವಿಗುಣದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದು ನಾಗರಿಕ ಸಮಾಜದಲ್ಲಿ ಕಳವಳಕಾರಿಯಾಗಿದೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಅಕ್ಷರಸ್ಥರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ, ಸಮಾಜದಲ್ಲಿ ಅದರ ದ್ವಿಗುಣದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುತ್ತಿರುವುದು ನಾಗರಿಕ ಸಮಾಜದಲ್ಲಿ ಕಳವಳಕಾರಿಯಾಗಿದೆ ಎಂದು ನ್ಯಾಯವಾದಿ ಎಫ್.ಎಸ್.ಸಿದ್ದನಗೌಡರ ಹೇಳಿದರು.

ಸಮೀಪದ ಆನಿಗೊಳ ಗ್ರಾಮದ ಶ್ರೀರಾಮಲಿಂಗೇಶ್ವರ ಸಭಾಭವನದಲ್ಲಿ ಕೆ.ಆರ್.ಸಿ.ಎಸ್.ಶಿಕ್ಷಣ ಸಂಸ್ಥೆಯ ಎ.ಬಿ.ಪಾಟೀಲ ಬಿಇಡಿ ಪ್ರಶಿಕ್ಷಣಾರ್ಥಿಗಳ ಎನ್.ಎಸ್.ಎಸ್ ವಿಶೇಷ ಶಿಬಿರದಲ್ಲಿ ಜರುಗಿದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದ ಸ್ವಾಸ್ಥ್ಯ ಸ್ವಚ್ಛವಾಗಿರಲು ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನ ಜ್ಞಾನ ಹೊಂದಿದಾಗ ಶಿಷ್ಟರನ್ನು ರಕ್ಷಣೆ ಮಾಡುವುದರೊಂದಿಗೆ ದುಷ್ಟರನ್ನು ಶಿಕ್ಷಿಸಿಬಹುದಾಗಿದೆ ಎಂದರು.ಸಂಸ್ಥೆಯ ‌ಪ್ರಾಚಾರ್ಯೆ ಡಾ.ಎಂ.ಬಿ.ತಲ್ಲೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಕಾನೂನಿನ ಜ್ಞಾನ ಹೊಂದುವುದರೊಂದಿಗೆ ಅವುಗಳ ಅನುಷ್ಠಾನಕ್ಕೆ ಯುವಕರು ಮುಂದಾಗಬೇಕು. ವಾಹನ ಸವಾರರಿಗೆ ಹೆಲ್ಮೇಟ್ ಇಲ್ಲದೆ ಪ್ರಯಾಣ ಬೆಳೆಸುವುದು ಅಪರಾಧ ಎಂದು ಗೊತ್ತಿದ್ದರು ಹಾಗೇ ಹೊಗುವುದು, ಗಲ್ಲಿ, ರಸ್ತೆಗಳಲ್ಲಿ ಗುಂಡಾಗರದಿ ಮಾಡಿ ತಮ್ಮ ಜೀವನದಲ್ಲಿ ಅಪರಾಧಿಗಳು ಎಂಬ ಹಣೆ ಪಟ್ಟಿ ಕಟ್ಟಿಕೊಂಡು ಸಮಾಜಘಾತುಗಳ ದುಷ್ಟಶಕ್ತಿಯಾಗುತ್ತಾರೆ. ಆದ್ದರಿಂದ‌ ಪ್ರತಿಯೊಬ್ಬರು ಕಾನುನಿನ ಜ್ಞಾನ ಪಡೆದು ಜನಸಮಾನ್ಯರಿಗೂ ಅದರ ಅರಿವು ಮೂಡಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಶಿಬಿರದ ಸಂಯೋಜಕರಾದ‌ ಡಾ.ಎಂ.ಎಸ್.ಗಡೆಣ್ಣವರ, ಸಹಸಂಯೊಜಕರಾದ ಎಸ್.ಎನ್.ತೋಟಗಿ ಶಿಬಿರದ ಸದಸ್ಯರಾದ ಶ್ರೀಶೈಲ‌ ಪರಂಡೆ, ವಿದ್ಯಾರ್ಥಿ ಪ್ರತಿನಿಧಿ ರಾಮಲಿಂಗಯ್ಯ ಸಾಲಿಮಠ ಹಾಗೂ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳು ಸಂಸ್ಥೆಯ ಸಿಬ್ಬಂದಿ ಇದ್ದರು.ಬಿಇಡಿ ವಿದ್ಯಾರ್ಥಿಗಳು ವೈದ್ಯಕೀಯ ಕಾನೂನು, ಬಾಲ ಕಾರ್ಮಿಕ, ಬಾಲ್ಯವಿವಾಹ ನಿಷೇಧ ಕಾಯ್ದೆ, ಮಕ್ಕಳ ಮತ್ತು ಮಹಿಳಾ ಕಾನೂನು, ಕಂದಾಯ, ಆಸ್ತಿಗಳ ಕಾಯ್ದೆ, ವೈಯಕ್ತಿಕ ಕಾನೂನುಗಳು ಹಾಗೂ ಮೋಟರ್‌ ವಾಹನ ಕಾಯ್ದೆಗಳ ಬಗ್ಗೆ ಸಾಮನ್ಯ ಜ್ಞಾನ ಹೊಂದಬೇಕು. ಇಲ್ಲದಿದ್ದರೇ ಸಮಾಜದಲ್ಲಿ ಅಪರಾಧಗಳು ಹೆಚ್ಷುತ್ತ ಸಮಾಜದ ಸ್ವಾಸ್ಥ್ಯಕ್ಕೆ ದಕ್ಕೆ ಬರುತ್ತದೆ.

-ಎಫ್.ಎಸ್.ಸಿದ್ದನಗೌಡರ, ನ್ಯಾಯವಾದಿ.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌