ಕೋಲಾರ ಜಿಲ್ಲೆ ಮತದಾರರ ಸಂಖ್ಯೆ 12,78,183

KannadaprabhaNewsNetwork | Published : Jan 24, 2024 2:02 AM

ಸಾರಾಂಶ

ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಂತೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಪುರುಷರು ೬,೩೨,೬೮೧ ಮಹಿಳೆಯರು ೬,೪೫,೫೦೨ ಸೇರಿದಂತೆ ಒಟ್ಟು ೧೨,೭೮,೧೮೩ರ ಮಂದಿ ಮತದಾರರಿದ್ದಾರೆ

ಕನ್ನಡಪ್ರಭ ವಾರ್ತೆ ಕೋಲಾರ

ಮುಂಬರಲಿರುವ ಲೋಕಸಭಾ ಚುನಾವಣೆ ಬಜೆಟ್ ಅಧಿವೇಶನ ಬಳಿಕ ಮುಹೂರ್ತ ನಿಗದಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪರಿಷ್ಕರಣೆ ಪೂರ್ಣಗೊಳಿಸಿದ್ದು ಒಟ್ಟು ೧೨,೭೮,೧೮೩ ಮಂದಿ ಮತದಾರರಿದ್ದಾರೆ ಎಂದು ಸಹಾಯಕ ವಿಭಾಗೀಯ ಅಧಿಕಾರಿ ವೆಂಕಟಲಕ್ಷ್ಮೀ ತಿಳಿಸಿದರು.

ಜಿಲ್ಲೆಯ ೬ ವಿಧಾನಸಭಾ ಕ್ಷೇತ್ರಗಳಂತೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗಿದ್ದು, ಪುರುಷರು ೬,೩೨,೬೮೧ ಮಹಿಳೆಯರು ೬,೪೫,೫೦೨ ಸೇರಿದಂತೆ ಒಟ್ಟು ೧೨,೭೮,೧೮೩ರ ಮಂದಿ ಮತದಾರರಿದ್ದಾರೆ ಎಂದರು.

6,12,352 ಪುರುಷ ಮತದಾರರು

ನಗರದ ಸಹಾಯಕ ಕಮೀಷನರ್ ಕಚೇರಿಯ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಮತದಾರರ ಅಂತಿಮ ಪಟ್ಟಿ ಪರಿಷ್ಕರಣೆ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿ, ೧೫ ಜನವರಿ ೨೦೨೩ ರಂದು ನಡೆದ ಮತದಾರರ ಪಟ್ಟಿಯಲ್ಲಿ ಪುರುಷರು ೬,೧೨,೩೫೨ ಹಾಗೂ ಮಹಿಳೆಯರಯ ೬,೧೭,೬೫೧ ಮತದಾರರು ಸೇರಿದಂತೆ ಒಟ್ಟು ೧೨,೩೦,೦೦೩ ಮತದಾರರು ಇದ್ದಾರೆ ಎಂದರು.

ಈ ಬಾರಿ ಹೆಚ್ಚುವರಿಯಾಗಿ ಸುಮಾರು ೧೮ ಸಾವಿರ ಮಂದಿ ಮತದಾರರ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಅಂತಿಮವಾಗಿ ನಡೆದ ಮತದಾರರ ಪರಿಷ್ಕರಣೆಯಲ್ಲಿ ಪುರುಷರು ೬,೩೨,೬೮೧ ಮತದಾರರು ಹಾಗೂ ಮಹಿಳೆಯರು ೬,೪೫,೫೦೨ ಮತದಾರರು ಇದ್ದು ಒಟ್ಟಾರೆಯಾಗಿ ೧೨,೭೮,೧೮೩ ಮತದಾರರ ಸಂಖ್ಯೆ ಇದೆ, ಸುಮಾರು ೪೦ ಸಾವಿರ ಮಂದಿ ಹೆಚ್ಚುವರಿಯಾಗಿದ್ದಾರೆ ಎಂದು ಹೇಳಿದರು.

೨೮,೩೪೯ ಹೊಸ ಮತದಾರರು

ಒಟ್ಟಾರೆಯಾಗಿ ಪ್ರಸಕ್ತ ಸಾಲಿನಲ್ಲಿ ಮಾಡಿದ ಮತದಾರರ ಪರಿಷ್ಕರಣೆಯಲ್ಲಿ ೨೮,೩೪೯ ಮಂದಿ ಸೇರ್ಪಡೆಯಾಗಿದ್ದು, ೧೯,೫೯೮ ಮಂದಿ ಮತದಾರರನ್ನು ತೆಗೆದು ಹಾಕಲಾಗಿದೆ. ಈ ಅಂಕಿ ಅಂಶಗಳಲ್ಲಿ ಶೇ.೧ ರಿಂದ ೨ರಷ್ಟು ವ್ಯತ್ಯಾಸಗಳಿರಬಹುದು. ಸರ್ಕಾರದ ಸೂಚನೆ ಮೇರೆಗೆ ಮತದಾರರ ಪರಿಷ್ಕರಣೆ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದರು.

ಇದಕ್ಕೂ ಮುನ್ನ ಸಾರ್ವಜನಿಕವಾಗಿ ಪ್ರತಿ ಮನೆ, ಮನೆಗೂ ಭೇಟಿ ನೀಡಿ ಮತದಾರರ ಸಮೀಕ್ಷೆ ಮಾಡಿ, ಮತಪಟ್ಟಿ ಪರಿಷ್ಕರಣೆ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿವಿಧ ರಾಜಕೀಯ ಪ್ರತಿನಿಧಿಗಳ ಸಭೆ ಕರೆದು ಅವರ ಸಲಹೆ, ಆಕ್ಷೇಪಣೆ, ಇತ್ಯಾದಿಗಳನ್ನು ಪಡೆದು ಮತದಾರರ ಪರಿಷ್ಕರಣೆ ಪಟ್ಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಈ ವೇಳೆ ಬಿಜೆಪಿಯ ರಾಜೇಶ್ ಸಿಂಗ್, ಕಾಂಗ್ರೆಸ್‌ನ ವೆಂಕಟಪತಪ್ಪ, ಸಿಪಿಎಂನ ವಿಜಯಕೃಷ್ಣ ಇದ್ದರು.

Share this article