ಅಧಿಕಾರಿಗಳಿಗೆ ಜ್ಞಾನೋದಯವಾಗಲೇ ಇಲ್ಲ..ಕೊನೆಗೂ ಬಿದ್ದೇ ಹೋಯಿತು ಶಾಲೆಯ ಕಾಂಪೌಂಡ್ !

KannadaprabhaNewsNetwork |  
Published : Feb 28, 2024, 02:36 AM IST
32 | Kannada Prabha

ಸಾರಾಂಶ

ಅಧಿಕಾರಿಗಳಿಗೆ ಜ್ಞಾನೋದಯವಾಗಲೇ ಇಲ್ಲ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಅಧಿಕಾರಿಗಳಿಗೆ ಜ್ಞಾನೋದಯವಾಗಲೇ ಇಲ್ಲ. ಕೊನೆಗೂ ಬಿದ್ದೇ ಹೋಯ್ತು ಶಾಲೆಯ ಕಾಂಪೌಂಡ್!

ಜ್ಞಾನದೇಗುಲವಿದು.. ಧೈರ್ಯವಾಗಿ ಬನ್ನಿ! ಎಂಬ ಶೀರ್ಷಿಕೆಯಲ್ಲಿ ಶಾಲಾ ಕಾಂಪೌಂಡ್ ಬೀಳಬಹುದೆಂದು ಪಾಲಿಕೆಯನ್ನು ಕನ್ನಡಪ್ರಭ ಎಚ್ಚರಿಸಿತ್ತು. ಹತ್ತು ಅಡಿ ಎತ್ತರದ ಬೃಹತ್ ಕಾಂಪೌಂಡ್ ಅಪಾಯದಲ್ಲಿದೆ ಎಂದು ಫೆ. 22ರ ಸಂಚಿಕೆಯಲ್ಲಿ ವರದಿಯಾಗಿತ್ತು.

ಈ ವರದಿ ಪ್ರಕಟವಾಗಿ ಪಾಲಿಕೆ ಹಾಗೂ ಅಧಿಕಾರಿಗಳ ಗಮನಕ್ಕೆ ಬಂದರೂ ಇವರು ನಿದ್ರೆಯಿಂದ ಎಚ್ಚರಗೊಳ್ಳಲಿಲ್ಲ. ಧೈರ್ಯವಾಗಿ ಅಧಿಕಾರಿಗಳು ಬರಲೇ ಇಲ್ಲ!

ಇದರ ಪರಿಣಾಮವಾಗಿ ವರದಿ ಪ್ರಕಟವಾದ ಮೂರೇ ದಿನದಲ್ಲಿ ಅಂದರೆ ಫೆ. 25 ರಂದು ಶಾಲೆಯ ಕಾಂಪೌಂಡ್ ರಸ್ತೆಯ ಕಡೆಗೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಸರ್ಕಾರಿ ಶಾಲೆಗಳೆಂದರೆ ನಮ್ಮ ಸರ್ಕಾರಕ್ಕೆ ಮೊದಲಿನಿಂದಲೂ ನಿರ್ಲಕ್ಷ್ಯ, ನಾಗರೀಕರೆಂದರೆ ಸರ್ಕಾರಕ್ಕೆ ಅಲರ್ಜಿ!

ಶಾಲೆಯನ್ನು ಮುಚ್ಚಿ ಇದೇ ಶಾಲೆಯ ಜಾಗವನ್ನು ಒಂದು ಶಾಪಿಂಗ್ ಮಾಲ್ ಅಥವಾ ಯಾವುದೇ ವಾಣಿಜ್ಯೋದ್ಯಮಿಗಳಿಗೆ ನೀಡುವಂತಿದ್ದರೆ ಕೆಲವೇ ತಿಂಗಳಲ್ಲಿ ಈ ಪಾಳು ಜಾಗ ಸ್ವಚ್ಛವಾಗಿ ಅಮರಾವತಿಯಂತಾಗುತಿತ್ತು.

--

ಕೋಟ್

ಕುಸಿದ ಶಾಲೆಯ ಕಾಂಪೌಂಡನ್ನು ನೋಡಿ ಆಸುಪಾಸಿನ ನಾಗರಿಕರು ಪಾಲಿಕೆ ಹಾಗೂ ಅಧಿಕಾರಿಗಳನ್ನು ಶಪಿಸುತ್ತಿದ್ದಾರೆ. ಪಾಲಿಕೆ ಹಾಗೂ ಅಧಿಕಾರಿಗಳು ಸ್ವಯಂಪ್ರೇರಿತರಾಗಿ ನಿದ್ರೆಯಿಂದ ಎಚ್ಚರಗೊಳ್ಳದಿದ್ದರೂ ಸಾರ್ವಜನಿಕರು ಎಚ್ಚರಿಸಿದ ನಂತರವಾದರೂ ಎಚ್ಚರಗೊಳ್ಳಲು ಏನು ಅಡ್ಡಿ?

- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ