ತ್ರಿಪದಿ ಮೂಲಕ ಸಮಾಜದ ಓರೆಕೋರೆ ತಿದ್ದಿದ ಸರ್ವಜ್ಞ

KannadaprabhaNewsNetwork |  
Published : Feb 21, 2026, 03:15 AM IST
ಜಿಲ್ಲಾಡಳಿತದಿಂದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ | Kannada Prabha

ಸಾರಾಂಶ

ಸಮಾಜದ ಓರೆಕೋರೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ತೀಕ್ಷ್ಣವಾದ ತ್ರಿಪದಿಗಳ ಮೂಲಕ ಜನಮಾನಸದಲ್ಲಿ ಹಾಗೂ ಜನರಾಡುವ ಭಾಷೆಯಲ್ಲಿ ಅತ್ಯಂತ ಸರಳವಾಗಿ ತಿಳಿಸಿದ ದಾರ್ಶನಿಕ ಸಂತ ಕವಿ ಸರ್ವಜ್ಞ ಅವರು ಕರ್ನಾಟಕದ ಹೆಮ್ಮೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಸಮಾಜದಲ್ಲಿನ ಅಂಕು- ಡೊಂಕುಗಳನ್ನು ನೇರ-ನಿಷ್ಠುರ ಆದರ್ಶ ವಿಚಾರಗಳನ್ನು ಹಾಗೂ ಸತ್ಯನುಡಿಗಳನ್ನು ತ್ರಿಪದಿಗಳ ಮೂಲಕ ಸಾರಿ, ಸಮಾಜದ ಓರೆಕೋರೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ತೀಕ್ಷ್ಣವಾದ ತ್ರಿಪದಿಗಳ ಮೂಲಕ ಜನಮಾನಸದಲ್ಲಿ ಹಾಗೂ ಜನರಾಡುವ ಭಾಷೆಯಲ್ಲಿ ಅತ್ಯಂತ ಸರಳವಾಗಿ ತಿಳಿಸಿದ ದಾರ್ಶನಿಕ ಸಂತ ಕವಿ ಸರ್ವಜ್ಞ ಅವರು ಕರ್ನಾಟಕದ ಹೆಮ್ಮೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಹೇಳಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತ್ರಿಪದಿಗಳಲ್ಲಿ ತತ್ವಾದರ್ಶದ ಆಶಯದ ಹೊಳಹುಗಳನ್ನು ಕಾಣಬಹುದಾಗಿದ್ದು, ತ್ರಿಪದಿ ಸಾರವನ್ನು ಅರಿತುಕೊಂಡು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ. ತನ್ನ ತ್ರಿಪದಿಗಳಲ್ಲಿ ಕೃಷಿ, ಕುಟುಂಬ, ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಮೂರೇ ಸಾಲಿನಲ್ಲಿ ಸಂದೇಶ ಕೊಡುವ ತ್ರಿಪದಿಗಳನ್ನು ರಚಿಸಿ ಸರಳವಾಗಿ ಮತ್ತು ವಿಶಾಲಾರ್ಥ ಹೊಂದಿರುವ ಹಾಗೂ ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಜೀವನದ ತತ್ವಗಳನ್ನು ಸಾರ ತ್ರಿಪದಿಗಳಲ್ಲಿ ಕಾಣಬಹುದಾಗಿದೆ. ಅಲ್ಲಿ ಆತ್ಮಶುದ್ಧಿ, ನೈತಿಕ ಬದುಕಿನ ಮಹತ್ವವನ್ನು ಪ್ರತಿಪಾದಿಸಲಾಗಿದೆ. ಹೊರಗಿನ ಆರ್ಭಟಕ್ಕಿಂತ ಒಳಮನಸ್ಸಿನ ಶುದ್ಧತೆಯೇ ಮುಖ್ಯ ಎಂಬ ಸಂದೇಶವನ್ನು ಅವರು ಸಾರಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಚಂದ್ರಕಾಂತ ಕುಂಬಾರ ಮಾತನಾಡಿ, ಸಂತ ಕವಿ ಸರ್ವಜ್ಞ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ ಅದನ್ನು ಎಲ್ಲರೂ ಸ್ಮರಿಸಬೇಕು. ಸರ್ಕಾರವು ಮಹಾನ್ ವ್ಯಕ್ತಿ, ದಾರ್ಶನಿಕರ ಜಯಂತಿ ಆಚರಣೆಯ ಮೂಲಕ ಮಹನೀಯರ ತತ್ವಾದರ್ಶ ತಿಳಿದುಕೊಂಡು ಜೀವನದ ಸಾರ್ಥಕ್ಯ ಹೊಂದೋಣ ಎಂದರು.

ಸಂಗಪ್ಪ ಕುಂಬಾರ ಉಪನ್ಯಾಸ ನೀಡಿ, ಸರ್ವಜ್ಞ ಕವಿ ಸಮಾಜದಲ್ಲಿ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಹೇಗೆ ಬಿತ್ತಿದರು ಎಂಬುದನ್ನು ಉದಾಹರಣೆಗಳೊಂದಿಗೆ ವಿವರಿಸಿ, ಸರ್ವಜ್ಞನ ವಚನಗಳಲ್ಲಿ ವ್ಯಕ್ತಿತ್ವದ ವಿಕಾಸ, ನೈತಿಕ ಶಿಸ್ತು ಹಾಗೂ ಸಮಾಜಮುಖಿ ಜೀವನದ ತತ್ವಗಳು ಸ್ಪಷ್ಟವಾಗಿ ಕಾಣುತ್ತವೆ. ಆರೋಗ್ಯ, ಜೀವನಶೈಲಿ, ಮಿತಾಹಾರ, ಸದಾಚಾರ ಇತ್ಯಾದಿ ವಿಷಯಗಳನ್ನು ಅವರು ತ್ರಿಪದಿಗಳಲ್ಲಿ ಸುಲಭವಾಗಿ ಹೇಳಿರುವುದು ಅವರ ವೈಶಿಷ್ಟ್ಯ ಎಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಸೋಮಲಿಂಗ ಕುಂಬಾರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಮೆರವಣಿಗೆ:

ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಚಾಲನೆಗೊಂಡು ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮದೊಂದಿಗೆ ಸಮಾವೇಶಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಸಮಾನತೆಗೆ ಶ್ರಮಿಸಿದವರು ಸರ್ವಜ್ಞ
ಬಿಎಲ್‌ಡಿಇ ಡೀಮ್ಡ್ ವಿವಿ ಕುಲಪತಿಯಾಗಿ ಡಾ.ಅರುಣ ಅಧಿಕಾರ ಸ್ವೀಕಾರ