ವೈದ್ಯರಾಗಲು ಏಕೈಕ ಆಯ್ಕೆ ‘ಎಕ್ಸೆಲ್ ಗುರುವಾಯನಕೆರೆ’

KannadaprabhaNewsNetwork |  
Published : Aug 11, 2026, 01:45 AM ISTUpdated : Aug 11, 2026, 10:53 AM IST
Doctor Suspended

ಸಾರಾಂಶ

ವೈದ್ಯಕೀಯ ಪ್ರವೇಶದ ಹೆಬ್ಬಾಗಿಲು ‘ನೀಟ್’ ಪರೀಕ್ಷೆ. ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿ ವರ್ಷ ಈ ಪರೀಕ್ಷೆ ಎದುರಿಸುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸ್ವರೂಪ ಮತ್ತು ಕಠಿಣತೆಯ ಮಟ್ಟ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.

 ಗುರುವಾಯನಕೆರೆ : ವೈದ್ಯಕೀಯ ಪ್ರವೇಶದ ಹೆಬ್ಬಾಗಿಲು ‘ನೀಟ್’ ಪರೀಕ್ಷೆ. ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿ ವರ್ಷ ಈ ಪರೀಕ್ಷೆ ಎದುರಿಸುತ್ತಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸ್ವರೂಪ ಮತ್ತು ಕಠಿಣತೆಯ ಮಟ್ಟ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಧೃತಿಗೆಡದೆ ವಿದ್ಯಾರ್ಥಿಗಳಿಗೆ ಮತ್ತು ಆತಂಕದಲ್ಲಿರುವ ಅವರ ಪೋಷಕರಿಗೆ ದಾರಿ ದೀಪವಾಗಿ ನಿಂತಿರುವುದು ಗುರುವಾಯನಕೆರೆಯ ಪ್ರತಿಷ್ಠಿತ ‘ಎಕ್ಸೆಲ್ ನೀಟ್ ಅಕಾಡೆಮಿ’.

ವಿವಿಧ ಕಾರಣಗಳಿಂದ ಪಿಯುಸಿಯಲ್ಲಿರುವಾಗ ನೀಟ್‌ನಲ್ಲಿ ನಿರೀಕ್ಷಿತ ಅಂಕಗಳು ಬಾರದಿರುವ ವಿದ್ಯಾರ್ಥಿಗಳಿಗೆ ಒಂದು ವರ್ಷ ಪರ್ಯಂತ ಕ್ರಮಬದ್ಧವಾದ ನೀಟ್ ಕೋಚಿಂಗ್ ನೀಡುವುದೇ ನೀಟ್ ಲಾಂಗ್ ಟರ್ಮ್ ಯೋಜನೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಎಕ್ಸೆಲ್ ವಿದ್ಯಾ ಸಂಸ್ಥೆಯು ನೀಟ್ ಅಕಾಡೆಮಿ ಮೂಲಕ ವೈದ್ಯಕೀಯ ಸೀಟು ಆಕಾಂಕ್ಷಿಗಳಿಗೆ ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಡುತ್ತಿದೆ.

ಎಕ್ಸೆಲ್ ದಾಖಲೆ:

ಎಕ್ಸೆಲ್‌ನಿಂದ ಒಟ್ಟು 4 ಮಂದಿಗೆ ಭಾರತದ ಅತ್ಯುನ್ನತ ವೈದ್ಯಕೀಯ ಸಂಸ್ಥೆಯಾದ ಎಐಐಎಂಎಸ್‌, ಜೆಐಪಿಎಂಇಆರ್‌ನಲ್ಲಿ ಪ್ರವೇಶ ದೊರಕಿರುವುದಲ್ಲದೆ, ಕಳೆದ ಬಾರಿ 248 ವಿದ್ಯಾರ್ಥಿಗಳಿಗೆ ಭಾರತದ ಪ್ರತಿಷ್ಠಿತ ವೈದ್ಯಕೀಯ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶ ಲಭ್ಯವಾಗಿದೆ. ಈ ಬಾರಿಯೂ ಪರೀಕ್ಷೆ ಬರೆದ ವಿದ್ಯಾರ್ಥಿಗಳೆಲ್ಲ ವೈದ್ಯಕೀಯ ಕೋರ್ಸ್‌ಗೆ ಅರ್ಹತೆ ಪಡೆಯುವ ಜೊತೆಗೆ 470ರಷ್ಟು ವಿದ್ಯಾರ್ಥಿಗಳಿಗೆ ವೈದ್ಯಕೀಯ ಪ್ರವೇಶ ದೊರಕುವುದು ಖಚಿತವಾಗಿದೆ. ಮೌರ್ಯ ವೈ.ಡಿ. 720ರಲ್ಲಿ 673 ಅಂಕಗಳನ್ನು ಗಳಿಸಿ ರಾಷ್ಟ್ರ ಮಟ್ಟದಲ್ಲಿ 271ನೇ ರ್‍ಯಾಂಕ್ ಹಾಗೂ ಚಿನ್ಮಯಿ ಎಲ್.ಆರ್.ಗೌಡ 670 ಅಂಕಗಳೊಂದಿಗೆ ರಾಷ್ಟ್ರ ಮಟ್ಟದಲ್ಲಿ 331ನೇ ರ್‍ಯಾಂಕ್ ಪಡೆದು ಮಹತ್ವದ ಸಾಧನೆ ಮಾಡಿದ್ದಾರೆ.

650ಕ್ಕಿಂತ ಅಧಿಕ ಅಂಕ ಗಳಿಸಿದವರು 2 ವಿದ್ಯಾರ್ಥಿಗಳು, 600ಕ್ಕಿಂತ ಅಧಿಕ 7 ವಿದ್ಯಾರ್ಥಿಗಳು, 550ಕ್ಕಿಂತ ಹೆಚ್ಚು 33 ವಿದ್ಯಾರ್ಥಿಗಳು ಪಡೆದುಕೊಂಡರೆ, 95ಕ್ಕಿಂತ ಹೆಚ್ಚು ಅಂಕ ಗಳಿಸಿದವರು 303 ವಿದ್ಯಾರ್ಥಿಗಳು.

ಎಕ್ಸೆಲ್ ಸೂತ್ರಗಳು:

ಎಕ್ಸೆಲ್ ನೀಟ್ ಅಕಾಡೆಮಿಯು ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಜ್ಜುಗೊಳಿಸಲು ಐದು ಪ್ರಮುಖ ಶೈಕ್ಷಣಿಕ ಸೂತ್ರಗಳನ್ನು ಅಳವಡಿಸಿಕೊಂಡಿದೆ.

ಪರಿಣತ, ಹಿರಿಯ ಶ್ರೇಣಿಯ ಪ್ರಾಧ್ಯಾಪಕ ವೃಂದ:ಎಕ್ಸೆಲ್ ಅಕಾಡೆಮಿಯ ಅತಿ ದೊಡ್ಡ ಹಿರಿಮೆ ಅಧ್ಯಾಪಕ ವೃಂದ. ದೇಶದ ವಿವಿಧ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳ ಕಾಲ ಬೋಧನಾ ಅನುಭವ ಹೊಂದಿರುವ, ನೀಟ್ ಪರೀಕ್ಷೆಯ ಸೂಕ್ಷ್ಮತೆ ಹಾಗೂ ರಾಷ್ಟ್ರೀಯ ಪಠ್ಯಕ್ರಮದ ಆಳ-ಅಗಲಗಳನ್ನು ಅರಿತಿರುವ ಹಿರಿಯ ಶ್ರೇಣಿಯ ವಿಷಯ ತಜ್ಞರು ಇಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

ಅಚ್ಚುಕಟ್ಟಾದ ಶೈಕ್ಷಣಿಕ ಯೋಜನೆ:

ಸಂಸ್ಥೆಯು ವರ್ಷದ ಆರಂಭದಲ್ಲೇ ಅತ್ಯಂತ ವ್ಯವಸ್ಥಿತವಾದ ಅಕಾಡೆಮಿಕ್ ಪ್ಲ್ಯಾನ್‌ಗಳನ್ನು ಸಿದ್ಧಪಡಿಸುತ್ತದೆ. ದಿನನಿತ್ಯದ ತರಗತಿಗಳು, ವಾರಾಂತ್ಯದ ಅಣಕು ಪರೀಕ್ಷೆ, ನಿತ್ಯದ ಟೆಸ್ಟ್, ಪಠ್ಯಕ್ರಮದ ಸಮಯೋಚಿತ ವಿಂಗಡಣೆ ಮತ್ತು ಯಾವುದೇ ಒತ್ತಡವಿಲ್ಲದೆ ಇಡೀ ಸಿಲೆಬಸನ್ನು ನಿಗದಿತ ಸಮಯಕ್ಕಿಂತ ಮೊದಲೇ ಪೂರ್ಣಗೊಳಿಸುವುದು ಇಲ್ಲಿನ ಹೆಗ್ಗಳಿಕೆ.

ವಿಶೇಷ ಸಂಶಯ ನಿವಾರಣಾ ಅವಧಿ:

ಕೆಲವು ಸಲ ತರಗತಿಗಳಲ್ಲಿ ವಿದ್ಯಾರ್ಥಿಗಳು ತಮ್ಮ ಸಂಶಯಗಳನ್ನು ಕೇಳಲು ಹಿಂಜರಿಯುತ್ತಾರೆ. ಇದನ್ನು ಮನಗಂಡ ಎಕ್ಸೆಲ್ ಸಂಸ್ಥೆಯು ಪ್ರತಿದಿನ ಪ್ರತ್ಯೇಕವಾಗಿ ‘ಡೌಟ್ ಕ್ಲಿಯರ್ ಸೆಷನ್ಸ್’ಗಳನ್ನು ಆಯೋಜಿಸುತ್ತದೆ. ಇಲ್ಲಿ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಮುಖಾಮುಖಿಯಾಗಿ ತಮ್ಮ ಶೈಕ್ಷಣಿಕ ಸಂದೇಹಗಳನ್ನು ಪರಿಹರಿಸಿಕೊಳ್ಳಬಹುದು.

ನಿಯಮಿತ ಮಾದರಿ ಪರೀಕ್ಷೆ, ಸೂಕ್ಷ್ಮ ವಿಶ್ಲೇಷಣೆ:

ನಿರಂತರ ಪರೀಕ್ಷೆಗಳೇ ಯಶಸ್ಸಿನ ರಹದಾರಿ. ಎಕ್ಸೆಲ್‌ನಲ್ಲಿ ಕಟ್ಟುನಿಟ್ಟಾದ ಮತ್ತು ನಿಯಮಿತವಾಗಿ ರಾಷ್ಟ್ರೀಯ ಮಟ್ಟದ ಮಾದರಿ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಸಮಯದ ನಿರ್ವಹಣೆ ಮತ್ತು ಪರೀಕ್ಷಾ ಭಯವನ್ನು ಹೋಗಲಾಡಿಸುತ್ತದೆ.

ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಕಾಣುವ ಕನಸುಗಳನ್ನು ಎಕ್ಸೆಲ್ ಸಂಸ್ಥೆ ಈಡೇರಿಸಲು ಸದಾ ಬದ್ಧವಾಗಿದೆ ಎನ್ನುವ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಅವರ ಕಾಳಜಿ ಪೋಷಕರಿಗೆ ಧೈರ್ಯ ತುಂಬುತ್ತದೆ.

ಉಚಿತ ಕೋಚಿಂಗ್, ಶುಲ್ಕ ರಿಯಾಯಿತಿ:

ಈ ಬಾರಿಯ ನೀಟ್ ಪರೀಕ್ಷೆಯಲ್ಲಿ 450ಕ್ಕಿಂತ ಹೆಚ್ಚು ಅಂಕ ಹಾಗೂ ದ್ವಿತೀಯ ಪಿಯು ಪಿಸಿಬಿಯಲ್ಲಿ ಶೇ.97 ಅಂಕ ಗಳಿಸಿದವರಿಗೆ ಸಂಪೂರ್ಣ ಉಚಿತ ಕೋಚಿಂಗ್ ನೀಡಲು ಅಕಾಡೆಮಿ ನಿರ್ಧರಿಸಿದೆ. ಉಳಿದಂತೆ ಪ್ರತಿಭಾವಂತರಿಗೆ ಶುಲ್ಕದಲ್ಲಿ ರಿಯಾಯಿತಿ ದೊರಕಲಿದೆ.

ಹೆಚ್ಚಿನ ಮಾಹಿತಿ ಹಾಗೂ ಪ್ರವೇಶಾತಿಗಾಗಿ ಸಂಪರ್ಕಿಸಿ:

ಎಕ್ಸೆಲ್ ನೀಟ್ ಅಕಾಡೆಮಿ, ಗುರುವಾಯನಕೆರೆ, ಧರ್ಮಸ್ಥಳದ ಹತ್ತಿರ, ಬೆಳ್ತಂಗಡಿ ತಾಲೂಕು, ಮಂಗಳೂರು (ದ.ಕ.) ದೂರವಾಣಿ ಸಂಖ್ಯೆ: 8867242769/ 9880899769.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ವನವೈಭವ : ಅರಣ್ಯ ಇಲಾಖೆಗೆ ಸೈಂಟಿಸ್ಟ್‌ ಸ್ಟಾಫ್‌ನಿಂದ ಹೊಸ ವರ್ಚಸ್ಸು
ಮುಂದುವರಿದ ಮಳೆ: ಸಿಡಿಲಿಗೆ ರೈತ ಬಲಿ