ಘನತೆಯಿಂದ ಬದುಕುವ ಅವಕಾಶ: ತಾಪಂ ಇಒ

KannadaprabhaNewsNetwork |  
Published : Jan 27, 2025, 12:46 AM IST
ಪೋಟೋಎಂಬಿಬಿಎಸ್ ಅಧ್ಯಯಕ್ಕೆ ಆಯ್ಕೆಯಾದ ತನುಜಾ ಫಕೀರಪ್ಪ ಅವರನ್ನು ತಾಲೂಕಾಢಳಿತದಿಂದ ಗೌರವಿಸಲಾಯಿತು.   | Kannada Prabha

ಸಾರಾಂಶ

ಸಂವಿಧಾನದ ಮೂಲಕ ದೇಶದಲ್ಲಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಅವಕಾಶ ಕಲ್ಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕನಕಗಿರಿ

ನಮ್ಮ ದೇಶ ಸ್ವಾತಂತ್ರ‍್ಯ ಹೊಂದಿ ಇಂದು ಸುಸೂತ್ರವಾಗಿ ನಡೆಯಲು ಮಹಾತ್ಮಾ ಗಾಂಧೀಜಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರ ಎಂದು ತಾಪಂ ಇಒ ಕೆ.ರಾಜಶೇಖರ ಹೇಳಿದರು.

ತಾಪಂ ಆವರಣದಲ್ಲಿ ೭೬ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿದ ಅವರು ಭಾನುವಾರ ಮಾತನಾಡಿದರು. ೧೯೫೦ರ ಜ. ೨೬ರಂದು ನಮ್ಮ ಸಂವಿಧಾನ ಜಾರಿಗೆ ಬಂದಿದೆ. ಸಂವಿಧಾನದ ಮೂಲಕ ದೇಶದಲ್ಲಿ ಪ್ರತಿಯೊಬ್ಬರಿಗೂ ಘನತೆಯಿಂದ ಬದುಕುವ ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಈ ಶುಭ ದಿನದಂದು, ಸಂವಿಧಾನದ ನೈಜ ಆಶಯಗಳನ್ನು ಅರಿತು ಬಾಳೋಣ ಎಂದು ಕರೆ ನೀಡಿದರು.ಈ ವೇಳೆ ನರೇಗಾ ಸಹಾಯಕ ನಿರ್ದೇಶಕಿ ಶರಪೊನ್ನಿಸಾಬೇಗಂ, ಕಚೇರಿಯ ಸಿಬ್ಬಂದಿಯವರು, ಗ್ಯಾರಂಟಿ ಪ್ರಾಧಿಕಾರದ ಯೋಜನೆಗಳ ಸದಸ್ಯರು, ಕೆಡಿಪಿ ಸದಸ್ಯರು ಇದ್ದರು.ತಾಲೂಕಾಡಳಿತದಿಂದ ಸಾಧಕರಿಗೆ ಸನ್ಮಾನ:ಕನಕಗಿರಿ

೭೬ನೇ ಗಣರಾಜ್ಯೋತ್ಸವ ಹಿನ್ನೆಲೆ ತಾಲೂಕು ಆಡಳಿತವು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಗುರುತಿಸಿ ಗೌರವಿಸಿತು.

ರಾಜ್ಯ ಸಂಗೀತ ಅಕಾಡೆಮಿಯ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವಿರೂಪಾಕ್ಷರೆಡ್ಡಿ ಓಣಿಮನಿ, ರಾಜ್ಯ ಮಟ್ಟದ ಪ್ರಾಚ್ಯ ಪ್ರಜ್ಞೆ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ತಾಲೂಕಿನ ತಿಪ್ಪನಾಳ ಗ್ರಾಮದ ದೇವರಾಜ್, ಉತ್ತಮ ಸೆಕ್ಟರ್ ಅಧಿಕಾರಿಯಾಗಿ ಹೊರಹೊಮ್ಮಿದ ಪಟ್ಟಣದ ಸ.ಪ.ಪೂ. ಕಾಲೇಜಿನ ಉಪನ್ಯಾಸಕ ಶಿವಪುತ್ರಪ್ಪ ಗಳಪೂಜೆ ಹಾಗೂ ಪ್ರಸ್ತುತ ಸಾಲಿನಲ್ಲಿ ಎಂಬಿಬಿಎಸ್ ಅಧ್ಯಯನಕ್ಕೆ ಆಯ್ಕೆಯಾಗಿರುವ ತನುಜಾ ಫಕೀರಪ್ಪ, ವರುಣಕುಮಾರ ಸಣ್ಣ ಕನಕಪ್ಪ ಮತ್ತು ಪ್ರಜ್ಞಾ ಶರಣ ಬಸವರಾಜ ಹಾದಿಮನಿ ಅವರಿಗೆ ತಹಸೀಲ್ದಾರ ವಿಶ್ವನಾಥ ಮುರುಡಿ ಸನ್ಮಾನಿಸಿದರು.

ಪಿಐ ಪೈಜುಲ್ಲಾ, ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ,

ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಅಭಿಷೇಕ ಕಲುಬಾಗಿಲಮಠ, ಶರಣೇಗೌಡ, ಸಂಗಪ್ಪ ಸಜ್ಜನ, ರಾಜಸಾಬ ನಂದಾಪೂರ, ಅನಿಲ ಬಿಜ್ಜಳ, ಹನುಮಂತ ಬಸರಿಗಿಡ, ರಾಕೇಶ ಕಂಪ್ಲಿ, ಗ್ರಾಪಂ ಮಾಜಿ ಸದಸ್ಯ ಲಿಂಗಪ್ಪ ಪೂಜಾರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ