ಸಮಸಮಾಜ ನಿರ್ಮಾಣ ವಚನಕಾರರ ಮೂಲ ಉದ್ದೇಶ: ಛಾಯಾಪತಿ

KannadaprabhaNewsNetwork |  
Published : Nov 26, 2024, 12:50 AM IST
್ಿಿ | Kannada Prabha

ಸಾರಾಂಶ

ಶೃಂಗೇರಿ, 12 ನೇ ಶತಮಾನದ ಆರಂಭದಲ್ಲಿ ಬಸವಣ್ಣನವರಿಂದ ಆರಂಭಗೊಂಡ ವಚನ ಚಳುವಳಿ ಸಾಮಾಜಿಕ ಕ್ರಾಂತಿ ಹುಟ್ಟಿಸಿತು. ಸಮ ಸಮಾಜ ನಿರ್ಮಾಣ ವಚನಕಾರರ ಮುಖ್ಯ ಉದ್ದೇಶವಾಗಿತ್ತು ಎಂದು ಕನ್ನಡ ಶಿಕ್ಷಕ ಎ. ಛಾಯಾಪತಿ ಹೇಳಿದರು.

ವಚನ ಸಾಹಿತ್ಯದ ಸೊಬಗು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಶೃಂಗೇರಿ

12 ನೇ ಶತಮಾನದ ಆರಂಭದಲ್ಲಿ ಬಸವಣ್ಣನವರಿಂದ ಆರಂಭಗೊಂಡ ವಚನ ಚಳುವಳಿ ಸಾಮಾಜಿಕ ಕ್ರಾಂತಿ ಹುಟ್ಟಿಸಿತು. ಸಮ ಸಮಾಜ ನಿರ್ಮಾಣ ವಚನಕಾರರ ಮುಖ್ಯ ಉದ್ದೇಶವಾಗಿತ್ತು ಎಂದು ಕನ್ನಡ ಶಿಕ್ಷಕ ಎ. ಛಾಯಾಪತಿ ಹೇಳಿದರು.

ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸಿರಿಗನ್ನಡ ವೇದಿಕೆ ಆಯೋಜಿಸಿದ್ದ ವಚನ ಸಾಹಿತ್ಯದ ಸೊಬಗು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ವಚನ ಚಳುವಳಿ ಬಡವ ಬಲ್ಲಿದ ಎಂಬ ಅಸಮಾನತೆಯನ್ನು ಜಾತಿ ಬೇಧವನ್ನು ನೀಗಿ , ಎಲ್ಲರಿಗೂ ಸಮಾನತೆ ಕಲ್ಪಿಸಿಕೊಡುವಲ್ಲಿ ತನ್ನ ಚಳುವಳಿ ರೂಪಿಸಿತು. ದೇವರು ಮನಸ್ಸಿನಲ್ಲಿದ್ದಾನೆ. ದೇಹವೇ ದೇಗುಲ, ಕಾಯಕವೇ ಕೈಲಾಸ ಎನ್ನುವುದು ಶರಣರ ತತ್ವವಾಗಿತ್ತು.

ತ್ರಿವಿದ ದಾಸೋಹ ಶರಣ ಚಳುವಳಿ ಬಹಳ ದೊಡ್ಡ ಆಶಯವಾಗಿತ್ತು. ವಚನಗಳ ಸಾರವನ್ನು ಅರ್ಥಮಾಡಿಕೊಂಡು ಅವುಗಳ ಧ್ಯೇಯವನ್ನು ಜೀವವನದಲ್ಲಿ ಅಳವಡಿಸಿಕೊಂಡರೆ ನಾವು ಪ್ರೀತಿಯಿಂದ ತುಂಬಿದಂತಹ ದ್ವೇಷ ಮುಕ್ತ ಸಮಾಜ ಮತ್ತು ದೇಶ ನಿರ್ಮಾಣ ಮಾಡಲು ಸಾಧ್ಯ ಎಂದರು.

ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಸದಸ್ಯ ಪಿ.ಬಿ ಶ್ರೀನಿವಾಸ್ , ಮಂಜುನಾಥ್, ಸಿರಿಗನ್ನಡ ವೇದಿಕೆ ಅಧ್ಯಕ್ಷ ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

25 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ಅಂಬೇಡ್ಕರ್ ಮೆಟ್ರಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ವಚನ ಸಾಹಿತ್ಯ ಸೊಬಗು ಕಾರ್ಯಕ್ರಮ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''