ಕನ್ನಡಪ್ರಭ ವಾರ್ತೆ ಬೆಂಗಳೂರು
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳಾ ಮೀಸಲಿಗೆ ತಡೆವೊಡ್ಡಿದ ಕಾಂಗ್ರೆಸ್ ಕೋಟ್ಯಂತರ ಮಹಿಳೆಯರಿಗೆ ದ್ರೋಹ ಬಗೆದಿದೆ. ಮಹಿಳಾ ಮೀಸಲು ಮಸೂದೆಗೆ ಸೋಲಾಗಿದ್ದು, ಸಾಮಾನ್ಯ ವಿಚಾರ ಅಲ್ಲ. ಇದು ರಾಜಕೀಯ ಪಕ್ಷಗಳ ಪಿತೂರಿ, ನಿರ್ಲಕ್ಷ್ಯ, ಮಹಿಳಾ ವಿರೋಧಿ ಭಾವನೆಯ ಸ್ಪಷ್ಟ ಸಂಕೇತ ಎಂದು ಕಿಡಿಕಾರಿದರು.
ದೇಶದ ಇತಿಹಾಸದಲ್ಲೇ ಮಹಿಳೆಯರಿಗೆ ಅವರ ಹಕ್ಕನ್ನು ಸಂವಿಧಾನದತ್ತವಾಗಿ ಕೊಡುವ ಪ್ರಧಾನಿ ಮೋದಿ ಅವರ ತೀರ್ಮಾನಕ್ಕೆ ಕಾಂಗ್ರೆಸ್ ಬೆಂಬಲ ನೀಡದೆ ಕೋಟ್ಯಂತರ ಮಹಿಳೆಯರ ಕನಸುಗಳ ಮೇಲೆ ಹೊಡೆತ ನೀಡಿತು. ಇದು ಕೇವಲ ಮಸೂದೆಯ ವೈಫಲ್ಯ ಅಲ್ಲ. ಮಹಿಳೆಯರ ಹಕ್ಕು ನಿರ್ಲಕ್ಷಿಸುವ ಕಾಂಗ್ರೆಸ್ ಅನ್ನು ಜನ ಕ್ಷಮಿಸುವುದಿಲ್ಲ ಎಂದರು.ಮೀಸಲಾತಿ ಕಸಿದ ದ್ರೋಹಿ ಕಾಂಗ್ರೆಸ್:
ಕಾಂಗ್ರೆಸ್ ದೇಶಭಷ್ಟ ಆಗಲಿದೆ:
-ಕೋಟ್-
ಸಿದ್ದರಾಮಯ್ಯ ಕುತಂತ್ರಿ. ಈಗ ಅವರು ಅತಂತ್ರರಾಗಿದ್ದಾರೆ. ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಬಜೆಟ್‍ನಲ್ಲಿ ಏನೂ ತೋರಿಸದೆ ನಂತರ ಬೆಲೆ ಏರಿಕೆ ಮಾಡಿದರು. ಉಪ ಚುನಾವಣೆಗೆ ಕಾದು ಈಗ ಬೆಲೆ ಏರಿಕೆ ಮಾಡಿದ್ದಾರೆ
ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ, ಕ್ಷೇತ್ರ ಮರುವಿಂಗಡಣೆಗೆ ನಮ್ಮ ವಿರೋಧವಿದೆ. ರಾಜಕೀಯಕ್ಕಾಗಿ ಎರಡೂ ಮಸೂದೆಯನ್ನು ಒಟ್ಟಿಗೆ ತಂದಿದ್ದರಿಂದ ಮಸೂದೆ ವಿಫಲವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ. ಕ್ಷೇತ್ರ ಮರುವಿಂಗಡಣೆಗೆ ವಿರೋಧವಿದೆ. ಕ್ಷೇತ್ರ ಮರುವಿಂಗಡಣೆ ಮತ್ತು ಮಹಿಳಾ ಮೀಸಲಾತಿ ಮಸೂದೆ ಒಟ್ಟಿಗೆ ತಂದಿದ್ದರಿಂದ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಿದೆ. ಕೇಂದ್ರ ಸರ್ಕಾರ ಇದರಲ್ಲಿ ರಾಜಕೀಯ ಮಾಡಿದೆ ಎಂದು ಆರೋಪಿಸಿದರು.2023ರಲ್ಲೇ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಅಂಗೀಕಾರವಾಗಿದೆ. ಅದನ್ನೇ ಅವರು ಜಾರಿಗೆ ತರಬೇಕಿತ್ತು. ಆದರೆ ಸಾಂವಿಧಾನಿಕ ತಿದ್ದುಪಡಿ ತಂದಿದ್ದರಿಂದ ಅದು ವಿಫಲವಾಯಿತು. ಕ್ಷೇತ್ರ ಮರುವಿಂಗಡಣೆ ಮಸೂದೆ ಮಂಡಿಸದೆ ಮಹಿಳಾ ಮೀಸಲಾತಿ ಮಸೂದೆ ಮಂಡನೆಯಾಗಿದ್ದರೆ ಅಂಗೀಕಾರವಾಗುತ್ತಿತ್ತು ಎಂದು ವಿವರಿಸಿದರು.ರಾಜಣ್ಣ ಜೊತೆ ಚರ್ಚೆ: ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು, ‘ಸಿದ್ದರಾಮಯ್ಯ ಅವರು ಮೊದಲಿನಂತಿಲ್ಲ. ಪಕ್ಷ ನಿಷ್ಠರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರೂ ಅವರ ಪರ ಗಟ್ಟಿಯಾಗಿ ನಿಲ್ಲದೆ ಅಸಹಾಯಕರಾಗಿದ್ದಾರೆ’ ಎಂದು ಹೇಳಿಕೆ ನೀಡಿದ್ದಾರಲ್ಲ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ರಾಜಣ್ಣ ಅವರನ್ನು ಕರೆಸಿ ಶುಕ್ರವಾರ ಮಾತನಾಡಿದ್ದೇನೆ ಎಂದು ಸಿದ್ದರಾಮಯ್ಯ ಉತ್ತರಿಸಿದರು.