ಪೆಟ್ರೋಲ್‌ ಬಂಕ್‌ ಅಧಿಕೃತ ಜಾಗದಲ್ಲಿದೆ: ವೆಂಕಟರಮಣ ಹೆಗಡೆ ಸ್ಪಷ್ಟನೆ

KannadaprabhaNewsNetwork |  
Published : Dec 18, 2025, 02:45 AM IST
ಪೊಟೋ16ಎಸ್.ಆರ್‌.ಎಸ್‌1 (ಸುದ್ದಿಗೋಷ್ಠಿಯಲ್ಲಿ ಶ್ರೀಕುಮಾರ ಸಮೂಹ ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಹೆಗಡೆ ಮಾತನಾಡಿದರು.) | Kannada Prabha

ಸಾರಾಂಶ

ಅರಣ್ಯ ಇಲಾಖೆ ಜಾಗದವರು ತಮ್ಮ ಜಾಗದ ಸುತ್ತಲು ಕಾಲುವೆ ತೆಗೆದಿದ್ದಾರೆ. ಪೆಟ್ರೋಲ್‌ ಬಂಕ್‌ಗೆ ಯಾವುದೇ ಅಡ್ಡಿಪಡಿಸಿಲ್ಲ.

ಕನ್ನಡಪ್ರಭ ವಾರ್ತೆ ಶಿರಸಿ

ಇಸಳೂರಿನಲ್ಲಿರುವ ಶ್ರೀಕುಮಾರ ಸಮೂಹ ಸಂಸ್ಥೆಯ ಪೆಟ್ರೋಲ್‌ ಬಂಕ್‌ನವರು ಅರಣ್ಯ ಇಲಾಖೆ ಜಾಗ ಅತಿಕ್ರಮಿಸಿಕೊಂಡಿದ್ದಾರೆ ಎಂದು ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತರು ಎಂದು ಹೇಳಿಕೊಳ್ಳುವವರು ಸುಖಾಸುಮ್ಮನೆ ಅಪಪ್ರಚಾರ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆ ಜಾಗದವರು ತಮ್ಮ ಜಾಗದ ಸುತ್ತಲು ಕಾಲುವೆ ತೆಗೆದಿದ್ದಾರೆ. ಪೆಟ್ರೋಲ್‌ ಬಂಕ್‌ಗೆ ಯಾವುದೇ ಅಡ್ಡಿಪಡಿಸಿಲ್ಲ ಎಂದು ಶ್ರೀಕುಮಾರ ಸಮೂಹ ಸಂಸ್ಥೆಯ ಅಧ್ಯಕ್ಷ ವೆಂಕಟರಮಣ ಹೆಗಡೆ ಸ್ಪಷ್ಟಪಡಿಸಿದರು.

ಮಂಗಳವಾರ ನಗರದ ಜಿಲ್ಲಾ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪೆಟ್ರೋಲ್‌ ಬಂಕ್‌ ಸ್ಥಾಪಿಸಲು 16 ಇಲಾಖೆಯ ಅನುಮತಿ ಪತ್ರ ಅವಶ್ಯವಿದ್ದು, ಪೆಟ್ರೋಲ್‌ ಬಂಕ್‌ ನಿರ್ಮಾಣವಾಗುವ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ ನಡೆಸಿದ ನಂತರವೇ ಪೆಟ್ರೋಲ್‌ ಬಂಕ್‌ ಆರಂಭಿಸಬೇಕಾಗುತ್ತದೆ. ಸಂಸ್ಥೆಯಿಂದ ಹಣ ವಿನಿಯೋಗಿಸಿದರೂ, ಕೇಂದ್ರ ಸರ್ಕಾರದ ಪೆಟ್ರೋಲಿಯಂ ಖಾತೆ ಅಧಿನದಲ್ಲಿ ಬರುವುದರಿಂದ ಸಾರ್ವಜನಿಕರ ಆಸ್ತಿಯಾಗಿರುತ್ತದೆ ಎಂದರು.

ಪೆಟ್ರೋಲ್‌ ಬಂಕ್‌ ಅಧಿಕೃತ ಎನ್‌ಎ ಆದ ಜಾಗದಲ್ಲಿದ್ದು, ಅದರ ಎದುರಿನಲ್ಲಿರುವುದು ಅರಣ್ಯ ಇಲಾಖೆಯ ಜಾಗ. ಅವರ ಜಾಗಕ್ಕೆ ಅವರು ರಕ್ಷಣೆ ಮಾಡಿಕೊಂಡರೆ ನನ್ನ ಅಭ್ಯಂತರವಿಲ್ಲ. ಆ ಜಾಗದಲ್ಲಿ ಕಟ್ಟಡ, ಬೇಲಿ ಅಥವಾ ಬೇರೆ ಚುಟುವಟಿಕೆ ಮಾಡಿದ್ದರೆ ಅತಿಕ್ರಮಣವಾಗುತ್ತಿತ್ತು. ಅರಣ್ಯ ಇಲಾಖೆಯಿಂದ ಶ್ರೀಕುಮಾರ ಅವರು ಅತಿಕ್ರಮಣ ಮಾಡಿದ್ದಾರೆ ಎಂಬ ನೋಟಿಸ್ ನೀಡಿಲ್ಲ. ಅವರ ಜಾಗದಲ್ಲಿ ಗಟಾರ ಮಾಡಲಿ. ಜನಪ್ರತಿನಿಧಿಗಳ ಹೆಸರು ಹರಿಬಿಟ್ಟಿದ್ದಾರೆ. ಅರಣ್ಯ ಇಲಾಖೆ ಜಾಗದಲ್ಲಿ ಕಾಲುವೆ ನಿರ್ಮಾಣ ಮಾಡಿಕೊಂಡಿದ್ದಾರೆ. ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಪೆಟ್ರೋಲ್‌ ಬಂಕ್‌ ಪಕ್ಕದಲ್ಲಿರುವ ಸಂಸ್ಥೆಯ ಜಾಗದಲ್ಲಿ 10 ಸ್ನಾನ ಹಾಗೂ ಶೌಚಗೃಹ ನಿರ್ಮಾಣ ಮಾಡಲಾಗಿದ್ದು, ಪೆಟ್ರೋಲ್‌ ಬಂಕ್‌ನ ಎದುರಿನ ಖಾಲಿ ಸಾರ್ವಜನಿಕ ಬಸ್ಸುಗಳು ನಿಲುಗಡೆ ಮಾಡುತ್ತವೆಯೇ ಹೊರತು ಸಂಸ್ಥೆಯ ಬಸ್ಸುಗಳು ಖಾಯಂ ನಿಲುಗಡೆಯಾಗುವುದಿಲ್ಲ ಎಂದರು.

ಈ ಸಂದರ್ಭದಲ್ಲಿ ವಿನಾಯಕ ಹೆಗಡೆ ಹೆಗಡೆ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ