ಕನ್ನಡಪ್ರಭ ವಾರ್ತೆ ಭಾಲ್ಕಿ
ತಾಲೂಕಿನ ಜೈನಾಪುರ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರಾವಣ ಮಾಸ ಪವಿತ್ರವಾದದ್ದು. ಪ್ರತಿಯೊಬ್ಬರೂ ದೇವರಲ್ಲಿ ನಂಬಿಕೆ, ಶ್ರದ್ಧೆ ಇಟ್ಟು ಪೂಜೆ, ಜಪ, ತಪ ಮಾಡಬೇಕು. ಧರ್ಮ,ಸಂಸ್ಕೃತಿ,ಆಚಾರ,ಸಂಪ್ರದಾಯಗಳನ್ನು ಬದುಕಿನಲ್ಲಿ ಪಾಲಿಸಬೇಕು. ಮಹಾತ್ಮರು, ಮಠಾಧೀಶರು ನಡೆಸಿಕೊಡುವ ಪ್ರವಚನ ಆಲಿಸಿ ಪ್ರತಿಯೊಬ್ಬರು ತಮ್ಮ ಬದುಕು ಹಸನು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸಾನ್ನಿಧ್ಯ ವಹಿಸಿ ಮಾತನಾಡಿ, ಮನಸ್ಸು ವಿಕಾರಗಳಿಂದ ಹೊರಬಂದು ವಿಕಾಸಗೊಳ್ಳುವುದಕ್ಕೆ ಶರಣರ ವಚನಗಳು, ಪ್ರವಚನಗಳು ಸೋಪಾನವಾಗಿ ಕಾರ್ಯರ್ನಿಹಿಸುತ್ತವೆ. ಬಸವಾದಿ ಶರಣರು ವಿಶ್ವಕ್ಕೆ ನೀಡಿದ ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಪೂಜಿಸಿ ಪಠಣ ಮಾಡಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಪ್ರಮುಖರಾದ ಸಂಗಮೇಶ್ವರ ಜ್ಯಾಂತೆ, ಚಂದ್ರಶೇಖರ ಜ್ಯಾಂತೆ, ಗುಂಡಪ್ಪ ಬಿರಾದಾರ, ಬಾಪುರಾವ ದೇಶಮುಖ, ಸತೀಶ ದೇಶಮುಖ, ಸೋನು ದೇಶಮುಖ, ಮಲ್ಲಿಕಾರ್ಜುನ ಸಂಗಮೆ, ರವೀಂದ್ರ ಇಂಚೂರೆ, ವೀರೇಶ ರೆಡ್ಡಿ, ಮಲ್ಲಿಕಾರ್ಜುನ ಮರಕಲ್ಲೆ, ಶಿವಕಾಂತ ಮೂಲಗೆ, ಈಶ್ವರ ಮರಕಲ್ಲೆ, ವೀರಶೆಟ್ಟಿ ಪಾಟೀಲ್, ದೇವೀಂದ್ರ ಕರಂಜೆ ಮತ್ತಿತರರು ಇದ್ದರು. ಪ್ರವಚನದ ಕೊನೆಯಲ್ಲಿ ನಡೆದ ಜೈ ಜವಾನ್ ರೂಪಕ ನೆರೆದವರ ಗಮನ ಸೆಳೆಯಿತು.