ಶಿವಶರಣೆಯರ ಸಿದ್ಧಾಂತ ಯುವಪೀಳಿಗೆ ಬದುಕಿಗೆ ಮೆಟ್ಟಿಲು: ಸವಿತಾ ಮೂಡ್ನಾಕೂಡು

KannadaprabhaNewsNetwork |  
Published : Oct 02, 2026, 02:15 AM IST
30ಸಿಎಚ್‌ಎನ್‌53ಚಾಮರಾಜನಗರದ ಕರಿನಂಜನಪುರದ ಗುಬ್ಬಿ ತೋಟದಪ್ಪ ಮಹಿಳಾ ವಸತಿನಿಲಯದಲ್ಲಿ ನಡೆದ ಗೌರಮ್ಮ ಚಿಕ್ಕಮಾದಪ್ಪ ಹಾಗೂ ಮರಮ್ಮ ಸುಬ್ಬಯ್ಯ ಸ್ಮರಣಾರ್ಥ ನಡೆದ ದತ್ತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಇನ್ನೂ ಅನೇಕ ವಚನಕಾರ್ತಿಯರು ತಮ್ಮ ನಡೆ ನುಡಿ ಎಲ್ಲದರಲ್ಲೂ ಆದರ್ಶಪ್ರಾಯರಾಗಿದ್ದರು. ತಾವು ನಂಬಿದ್ದ ಸಿದ್ಧಾಂತಗಳಿಗೆ ಎಂದಿಗೂ ಚ್ಯುತಿ ತರಲಿಲ್ಲ. ನುಡಿದಂತೆ ನಡೆದರು. ಹಾಗಾಗಿಯೇ ಅವರು ಇಂದಿಗೂ ನಮಗೆ ಆದರ್ಶವಾಗಿದ್ದಾರೆ. ಇಂದಿನ ಹೆಣ್ಣು ಮಕ್ಕಳು ಅವರ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

12ನೇ ಶತಮಾನದ ಶಿವ ಶರಣೆಯರು ಪ್ರತಿಪಾದಿಸಿದ ಸಿದ್ಧಾಂತಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಪೀಳಿಗೆ ಅದನ್ನು ಅಧ್ಯಯನ ಮಾಡಿ ಭವಿಷ್ಯದ ಬದುಕಿಗೆ ಮೆಟ್ಟಿಲನ್ನಾಗಿಸಿಕೊಳ್ಳಬೇಕೆಂದು ಹರವೆ ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯ, ಸಾಹಿತಿ ಸವಿತಾ ಮೂಡ್ನಾಕೂಡು ಅಭಿಪ್ರಾಯಪಟ್ಟರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಕರಿನಂಜನಪುರದ ಗುಬ್ಬಿ ತೋಟದಪ್ಪ ಮಹಿಳಾ ವಸತಿನಿಲಯದಲ್ಲಿ ಗೌರಮ್ಮ ಚಿಕ್ಕಮಾದಪ್ಪ ಹಾಗೂ ಮರಮ್ಮ ಸುಬ್ಬಯ್ಯ ಸ್ಮರಣಾರ್ಥ ನಡೆದ ದತ್ತಿ ಕಾರ್ಯಕ್ರಮದಲ್ಲಿ 12ನೇ ಶತಮಾನದ ಶಿವಶರಣೆಯರು ಎಂಬ ವಿಷಯದ ಬಗ್ಗೆ ಮಾತನಾಡಿದರು.

ಅಕ್ಕಮಹಾದೇವಿ, ಆಯ್ದಕ್ಕಿ ಲಕ್ಕಮ್ಮ ಇನ್ನೂ ಅನೇಕ ವಚನಕಾರ್ತಿಯರು ತಮ್ಮ ನಡೆ ನುಡಿ ಎಲ್ಲದರಲ್ಲೂ ಆದರ್ಶಪ್ರಾಯರಾಗಿದ್ದರು. ತಾವು ನಂಬಿದ್ದ ಸಿದ್ಧಾಂತಗಳಿಗೆ ಎಂದಿಗೂ ಚ್ಯುತಿ ತರಲಿಲ್ಲ. ನುಡಿದಂತೆ ನಡೆದರು. ಹಾಗಾಗಿಯೇ ಅವರು ಇಂದಿಗೂ ನಮಗೆ ಆದರ್ಶವಾಗಿದ್ದಾರೆ. ಇಂದಿನ ಹೆಣ್ಣು ಮಕ್ಕಳು ಅವರ ಆಲೋಚನೆಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ವೀರಶೈವ ಲಿಂಗಾಯತ ನೌಕರ ಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಯುವಕರನ್ನು ಕೇಂದ್ರೀಕರಿಸಿಕೊಂಡು ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ಉತ್ತಮ ಬೆಳವಣಿಗೆ. ಅವರು ವಿದ್ಯಾವಂತರಾದರಷ್ಟೆ ಸಾಲದು. ಸಮಾಜದಲ್ಲಿ ಸತ್ಪ್ರಜೆಯಾಗಲು ಇಂತಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಶ್ಯಕತೆ ಇದೆ ಎಂದು ತಿಳಿಸಿದರು.

ದತ್ತಿದಾನಿಗಳಾದ ಚಿನ್ನಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಅದನ್ನು ಮುಟ್ಟಲು ಶ್ರಮವಹಿಸಿ ಅಧ್ಯಯನ ಶೀಲರಾಗಬೇಕೆಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಿ.ಕೆ. ರವಿಕುಮಾರ್, ಪಾಶ್ಚಾತ್ಯ ಸಂಸ್ಕೃತಿ ನಮ್ಮ ಯುವಕರ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅವರು ಸಂಸ್ಕೃತಿ ಹೀನರಾಗುವ ಮೊದಲು ಎಚ್ಚರಿಕೆ ವಹಿಸಿ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ಅವರನ್ನು ಸಂಸ್ಕೃತಿವಂತರಾಗಿ ಮಾಡಲು ಶ್ರಮಿಸಬೇಕು ಎಂದು ತಿಳಿಸಿದರು.

ತಮ್ಮ ಪ್ರಕೃತಿ- ಸಂಸ್ಕೃತಿ ಯುವಕರ ಜೀವನದ ಅವಿಭಾಜ್ಯ ಅಂಗವಾಗಿದ್ದು ಅದನ್ನು ರಕ್ಷಿಸಿ ಬೆಳೆಸುವಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಶ್ರಮಿಸುತ್ತಿದೆ. ಇದಕ್ಕಾಗಿ ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದರಿಂದ ಯುವಕರನ್ನು ಸಮಾಜದ ಮುಂಚೂಣಿಗೆ ತಂದು ನಾಯಕತ್ವದ ಗುಣಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಆರ್.ಎಸ್. ಲಿಂಗರಾಜು, ಬಸವರಾಜು, ಅರುಣ, ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಪುಟ್ಟಮಲ್ಲಪ್ಪ, ನಿರ್ದೇಶಕ ಕೆಂಪನಪುರದ ಮಹದೇವಸ್ವಾಮಿ, ನಿವೃತ್ತ ಪ್ರಾಚಾರ್ಯರಾದ ಶಿವಸ್ವಾಮಿ, ಗುತ್ತಿಗೆದಾರ ನಂಜುಂಡಸ್ವಾಮಿ, ದತ್ತಿದಾನಿಗಳಾದ ಚಿನ್ನಸ್ವಾಮಿ, ವಿಜಯ ಚಿನ್ನಸ್ವಾಮಿ, ಮುಖಂಡರಾದ ಗುರುಮಲ್ಲಪ್ಪ, ನಿಲಯ ಪಾಲಕಿ ದಾಕ್ಷಾಯಿಣಿ ಹಾಗೂ ನಿಲಯದ ವಿದ್ಯಾರ್ಥಿನಿಯರು ಹೆಚ್ಚು ಸಂಖ್ಯೆಯಲ್ಲಿ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿರಿಯ ನಾಗರಿಕರು ಸಮಾಜದ ಅಮೂಲ್ಯ ಆಸ್ತಿ: ವೇದಮೂರ್ತಿ ಬಿ.ಎಸ್.
ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ