ಮಲ್ಲಯ್ಯ ಪೋಲಂಪಲ್ಲಿ
ಸರಳ ಸಜ್ಜನಿಕೆಯ ಸಾಮಾಜಿಕ ಕಳಕಳಿಯುಳ್ಳ, ರೈತರ ಏಳಿಗೆಗಾಗಿ ಮಿಡಿಯುತ್ತಿದ್ದ, ಇತಿಹಾಸ ಸಂಶೋಧಕ, ಚಿಂತಕ, ಪರಿಸರ ಪ್ರೇಮಿ, ಹಿರಿಯ ನ್ಯಾಯವಾದಿ ಭಾಸ್ಕರರಾವ್ ಕುಲಕರ್ಣಿ ಮುಡುಬೂಳ ಬಹುಮುಖ ಪ್ರತಿಭೆ ಹೊಂದಿದ್ದರು.
ಸ್ವತ: ಕೃಷಿಕರಾಗಿದ್ದ ಭಾಸ್ಕರರಾವ್ ಅವರಿಗೆ ಕೃಷಿ ಕ್ಷೇತ್ರದ ಬಗ್ಗೆ ಹಾಗೂ ಸಮಸ್ಯೆಗಳ ಅರಿವಿತ್ತು. ರೈತರ ದುಗಡಗಳನ್ನು ಸೂಕ್ಷ್ಮವಾಗಿ ಗ್ರಹಿಸುತ್ತಿದ್ದ ಅವರು, ಅತ್ಯಂತ ಕರಾರುವಕ್ಕಾಗಿ ಪ್ರಸ್ತುತ ಪಡಿಸುತ್ತಿದ್ದರು. ಅತ್ಯುತ್ತಮ ವಾಗ್ಮಿಯೂ ಆಗಿದ್ದ ಭಾಸ್ಕರರಾವ್ ಅವರ ಮಾತುಗಳನ್ನು ಕೇಳಲು ಜನರೂ ಇಷ್ಟಪಡುತ್ತಿದ್ದರು.ಸಂಘ ಪರಿವಾರದಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಭ್ರಷ್ಟಾಚಾರ ನಿರ್ಮೂಲನೆಗಾಗಿ ಅಣ್ಣ ಹಜಾರೆ ಅವರು ನಡೆಸಿದ್ದ ಅಮರಣಾಂತ ಉಪವಾಸ ಸತ್ಯಾಗ್ರಹದ ಭಾಗವಾಗಿ ಯಾದಗಿರಿ ಜಿಲ್ಲೆಯಲ್ಲಿಯೂ ಹೋರಾಟ ನಡೆಸಿದ್ದರು. ಸಮಾಜದ ಬದಲಾವಣೆ ಅವರ ಪ್ರಮುಖ ಧ್ಯೇಯವಾಗಿತ್ತು.
ಮಿಡಿದ ಹೃದಯ: ರೈತ ಆತ್ಮಹತ್ಯೆ ಕುರಿತು ತೀವ್ರತರನಾದ ಬೇಸರವಿತ್ತು. ಅವರಿಗೆ ನ್ಯಾಯಯುತವಾಗಿ ಸೌಲಭ್ಯಗಳು ದೊರೆತರೆ ಅನ್ನದಾತರು ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಸರ್ಕಾರ ಚುನಾವಣೆಯಲ್ಲಿ ಭರವಸೆ ಕೊಟ್ಟ ಹಾಗೆ ಗೆದ್ದು ಬಂದ ಮೇಲೆ ಅದನ್ನು ಈಡೇರಿಸಿದ್ದರೆ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಬರುತ್ತಿರಲಿಲ್ಲ ಎನ್ನುವುದು ಅವರ ವಾದವಾಗಿತ್ತು.
ಸಂಶೋಧನಾ ಕೇಂದ್ರ:
ಇದರ ಭಾಗವಾಗಿ ಸುರಪುರ ಅರಸು ಮನೆತನದ ದೇಶ ಭಕ್ತಿಯನ್ನು ಪ್ರಸ್ತುಪಡಿಸುತ್ತದೆ. ಭಾಸ್ಕರರಾವ್ ಅವರ ಅವಿರತ ಪರಿಶ್ರಮದ ಫಲವಾಗಿ ರಾಜಾ ವೆಂಕಟಪ್ಪ ನಾಯಕರ ಸಮಾಧಿ ಗುರುತಿಸಿ ಸಂಶೋಧನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ದೆಹಲಿಯ ಚಳುವಳಿಯ ಹೋರಾಟದ ಅಂಗವಾಗಿ ನಗರದಲ್ಲಿ ವಿವಿಧ ರೈತ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರನ್ನು ಒಳಗೊಂಡಂತೆ ಸುಮಾರು 100ಕ್ಕೂ ಹೆಚ್ಚು ಟ್ರ‍್ಯಾಕ್ಟರ್ ಮತ್ತು ಎತ್ತಿನ ಬಂಡಿಯೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದ ರೈತ ನಾಯಕ.
ದೆಹಲಿಯ ರೈತ ಹೋರಾಟದಲ್ಲಿ ಸಾವನ್ನಪ್ಪಿದ ರೈತರ ಚಿತಾಭಸ್ಮವನ್ನು ತರಿಸಿ ಕೃಷ್ಣಾ ನದಿಯಲ್ಲಿ ವಿಧಿವಿಧಾನದೊಂದಿಗೆ ಅಸ್ಥಿ ವಿಸರ್ಜಿಸಿದ್ದನ್ನು ನೋಡಿದರೆ ಅವರಿಗೆ ರೈತರ ಬಗ್ಗೆ ಇರುವ ಗೌರವವನ್ನು ತೋರ್ಪಡಿಸುತ್ತದೆ. ಇಂಥಹ ಮಹಾನ್ ಚೇತನ ಅಗಲಿದ್ದು, ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ.
ಕೋಟ್-1 : ಸರಳ ಸಜ್ಜನಿಕೆ ವ್ಯಕ್ತಿತ್ವ. ಕಠಿಣ ಪರಿಶ್ರಮ ಮತ್ತು ಹಿಡಿದ ಕೆಲಸ ಪೂರ್ಣಗೊಳಿಸುವಂತಹ ವ್ಯಕ್ತಿತ್ವ. ಇತಿಹಾಸ, ಶಿಕ್ಷಣ, ಕೃಷಿ, ನೀರಾವರಿ, ಸಂಶೋಧನೆ ಬಗ್ಗೆ ಅಪಾರಜ್ಞಾನ ಇರುವ ಭಾಸ್ಕರ್ ರಾವ್ ಮುಡಬೂಳ ಅವರ ಅಕಾಲಿಕ ನಿಧನದಿಂದ ಈ ಭಾಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ಕರುಣಿಸಲಿ. :
-ಕರುಣೇಶ್ವರ ಸ್ವಾಮೀಜಿ, ಕೃಷ್ಣಾ ಬೀಮ ಸಂಗಮದ ಸಂಗಮನಾಥ ದೇವಸ್ಥಾನದ ಪೀಠಾಧಿಪತಿ.-
24ವೈಡಿಆರ್15 : ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಭಾಸ್ಕರರಾವ್ ಮುಡಬೂಳ. (ಸಂಗ್ರಹ ಚಿತ್ರ)---000---