ರೈತರ ಮನೆ- ಮನದಲ್ಲಿ ದಾಖಲಾಗಿರುವ ಉಳುವ ಯೋಗಿಯ ನೋಡಲ್ಲಿ- ಅಂಕಣ ಬರಹಗಳು

KannadaprabhaNewsNetwork |  
Published : Jul 13, 2025, 01:18 AM ISTUpdated : Jul 13, 2025, 12:32 PM IST
farmer

ಸಾರಾಂಶ

ನಾನು ಕಳೆದ 25 ವರ್ಷಗಳಿಂದಲೂ ಕೂಡ "ಕನ್ನಡ ಪ್ರಭ "- ಪತ್ರಿಕೆಯನ್ನು ಕೊಂಡು ಓದುತ್ತೇನೆ. ಜೊತೆಗೆ ಅಲ್ಲಿ ಬರುವ ಅಪರೂಪದ ವಿಶೇಷತೆಗಳು, ಲೇಖನಗಳು, ,ಸಾಪ್ರಾಹಿಕ ಪ್ರಭ ಎಲ್ಲವನ್ನ ಕೂಡ ಸಂಗ್ರಹಿಸಿದ್ದೇನೆ

ನಾನು ಕಳೆದ 25 ವರ್ಷಗಳಿಂದಲೂ ಕೂಡ "ಕನ್ನಡ ಪ್ರಭ "- ಪತ್ರಿಕೆಯನ್ನು ಕೊಂಡು ಓದುತ್ತೇನೆ. ಜೊತೆಗೆ ಅಲ್ಲಿ ಬರುವ ಅಪರೂಪದ ವಿಶೇಷತೆಗಳು, ಲೇಖನಗಳು, ,ಸಾಪ್ರಾಹಿಕ ಪ್ರಭ ಎಲ್ಲವನ್ನ ಕೂಡ ಸಂಗ್ರಹಿಸಿದ್ದೇನೆ. ಜೊತೆಗೆ ಆಯಾ ದಿನಗಳಲ್ಲಿ ಬರುವ ವಿಶೇಷ ಸಂಚಿಕೆಗಳು, ದೀಪಾವಳಿ, ಯುಗಾದಿ ಇನ್ನಿತರ ಸಂಚಿಕೆಗಳನ್ನ ಕೂಡ ನನ್ನ ಸಂಗ್ರಹಾಲಯದಲ್ಲಿವೆ. ಇವುಗಳ ಜೊತೆಗೆ ಕನ್ನಡ ಪ್ರಭದಲ್ಲಿ ಆರ್ಥಿಕತೆಯ ಬೆನ್ನೆಲುಬಾದ ರೈತನ ಬಗ್ಗೆ ನಿರಂತರವಾಗಿ ಪ್ರಕಟವಾಗುತ್ತಾ ಬರುತ್ತಿರುವ ಜೊತೆಗೆ ದಾಖಲೆ ಮಾಡಿರುವ ಸಮಗ್ರ ಲೇಖನಗಳನ್ನು ಕೂಡ ಸಂಗ್ರಹಿಸಿದ್ದೇನೆ. ಅದರಲ್ಲೂ ರೈತರ ಬಗ್ಗೆ "ಕನ್ನಡಪ್ರಭ " ವಿಶೇಷ ಕಾಳಜಿ ವ್ಯಕ್ತಪಡಿಸುತ್ತಿದೆ. ಇದಕ್ಕೆ ಸಾಕ್ಷಿ ಅನ್ನದಾತನನ್ನು ಕುರಿತು ಮೂರನೆಯ ಬಾರಿಗೆ ಸತತ ನೂರೊಂದು ದಿನಗಳು ಪ್ರಕಟವಾದ ಸರಣಿ ಲೇಖನಗಳು.

 ಈಗಿನ "ಉಳುವ ಯೋಗಿಯ ನೋಡಲ್ಲಿ " ಸರಣಿ ಲೇಖನಗಳು ರೈತರಿಗಷ್ಟೇ, ಕೃಷಿ ಅಧಿಕಾರಿಕಷ್ಟೇ ಅಲ್ಲದೆ, ಪ್ರತಿಯೊಬ್ಬ ಸಾಮಾನ್ಯ ಓದುಗ ವರ್ಗದವರಿಗೂ ಸೂಜಿಗಲ್ಲಿನಂತೆ ಸೆಳೆದಿದೆ. ಈ ಲೇಖನಗಳನ್ನು ಓದಿದ ನಂತರ ಜೊತೆಗೆ ರೈತರ ಬಗ್ಗೆ ಅಪಾರ ಗೌರವ ಹೆಚ್ಚುವಂತೆ ಮಾಡಿಸಿದೆ. ಪ್ರತಿ ಲೇಖನದಲ್ಲೂ ಕೂಡ ಒಬ್ಬೊಬ್ಬ ರೈತರ ಸಾಧನೆಗಳ ಒಳ- ಹೊರಗನ್ನು ತೆರೆದಿಟ್ಟಿದ್ದಾರೆ. ಸರಣಿ ಲೇಖನದಲ್ಲಿ ರೈತರ ಸಾಧನೆಯನ್ನ ತೆರೆದಿಡುವುದರ ಜೊತೆಗೆ ಅವರು ಯಾವ ಯಾವ ಬೆಳೆಗಳಲ್ಲಿ ಏನೆಲ್ಲ ಕಮಗಳನ್ನು ವಹಿಸಿದರು ಅವರ ಅಧಿಕ ಇಳುವರಿಗೆ ಏನೆಲ್ಲ ಸವಲತ್ತುಗಳನ್ನು ಪಡೆದರು ಈ ನಡುವೆ ಯಾವ ರೀತಿಯಲ್ಲಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ, ಅವರ ಬದುಕು, ಬವಣೆ, ಸಾಧನೆಯ ದೃಷ್ಟಿ ಯನ್ನು ಬೀರಿದ್ದಾರೆ. ಇದು ಪ್ರತಿಯೊಬ್ಬ ರೈತರಿಗೂ ಸಲ್ಲಿಸಿದ ಶ್ರೇಷ್ಠ ಗೌರವ ಆಗಿದೆ. ಜೊತೆಗೆ ಸಾವಯವ ಕೃಷಿ, ಇಲಾಖೆಗಳಲ್ಲಿ ಅವರು ಪಡೆದುಕೊಂಡ ಮಾರ್ಗದರ್ಶನ ವೈವಿಧ್ಯಮಯ ಬೆಳೆಗಳ ಹೂರಣವನ್ನ ತೆರೆದಿಟ್ಟಿದ್ದಾರೆ. ಕೃಷಿಗೆ ಪೂರಕವಾದ ಹಲವು ಅಧಿಕಾರಿಗಳನ್ನು ಕೂಡ ಸಂದರ್ಶನ ಮಾಡಿದ್ದಾರೆ. ನಿಜಕ್ಕೂ ಇದು ಕನ್ನಡಪ್ರಭದ ವಿಶೇಷ ಮೈಲುಗಲ್ಲಿನಲ್ಲಿ ಒಂದು.

ಈ ಲೇಖನಗಳನ್ನು ಓದಿ ಹಲವು ರೈತರು ತಮ್ಮ ಕೃಷಿ ಬೆಳೆಗಳಲ್ಲೂ ಕೂಡ ಅಳವಡಿಸಿಕೊಂಡಿದ್ದು ಮತ್ತೊಂದು ದಾಖಲೆ. ಇರುವಷ್ಟು ಹೊಲಗದ್ದೆಗಳಲ್ಲಿ ವೈವಿಧ್ಯಮಯ ಬೆಳೆಗಳನ್ನ ಬೆಳೆದು, ಅಧಿಕ ಇಳುವರಿ ಪಡೆದ ಅನೇಕ ರೈತರು ಕೂಡ ಈ ನಿಟ್ಟಿನಲ್ಲಿ ಅಭಿನಂದನಾರ್ಹರು. ಪತ್ರಿಕೆಯ ಓದುಗರಿಗೆ ಇದೊಂದು ವಿಶಿಷ್ಟ ಕೊಡುಗೆಯಾಗಿದೆ. ಈ ಸರಣಿ ಅಂಕಣ ಪ್ರಕಟವಾದ ನಂತರ ಕನ್ನಡ ಪ್ರಭದ ಓದುಗರ ಸಂಖ್ಯೆಯೂ ಕೂಡ ಹೆಚ್ಚಾಗಿದ್ದು ಮತ್ತೊಂದು ವಿಶೇಷ. ಏಕೆಂದರೆ ಅನೇಕ ರೈತರು ಕನ್ನಡಪ್ರಭವನ್ನು ಕೊಳ್ಳುವುದನ್ನು ಹಲವು ಪತ್ರಿಕಾ ಅಂಗಡಿಗಳಲ್ಲಿ ಗಮನಿಸಿದ್ದೇನೆ. ಜೊತೆಗೆ ರೈತರು ಪತ್ರಿಕೆಗಳನ್ನ ಸಂಗ್ರಹಿಸಿಕೊಂಡಿದ್ದಾರೆ. ಇದಕ್ಕಾಗಿ ''''''''ಕನ್ನಡಪ್ರಭ''''''''ದ ಪ್ರಧಾನ ಸಂಪಾದಕರಾದ ರವಿ ಹೆಗಡೆ, ಸರಣಿಯ ಲೇಖಕರಾದ ಅಂಶಿ ಪ್ರಸನ್ನಕುಮಾರ್ ಅವರಿಗೆ ವಿಶೇಷ ಅಭಿನಂದನೆಗಳು. ಈ ರೀತಿಯ ಸರಣಿ ನಿರಂತರವಾಗಿ ಮತ್ತಷ್ಟು ರೈತರ ಸಾಧನೆಗಳನ್ನ ಬಿಂಬಿಸಲಿ ಎಂದು ಓದುಗರ ಆಶಯ. 

- ಕಾಳಿಹುಂಡಿ ಶಿವಕುಮಾರ್, ಲೇಖಕ , ಮೈಸೂರು.

PREV
Read more Articles on

Latest Stories

ಅಂಗನವಾಡಿ ಮಕ್ಕಳ ಅನುಕೂಲಕ್ಕಾಗಿ 'ಅಪಾರ್‌ ಐಡಿ': ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿ
ರಾಜ್ಯದ 14 ಜಿಲ್ಲೆಗಳಲ್ಲಿ 2 ದಿನ ಭಾರೀ ಮಳೆ
ಲಾಕ್ಡೌನ್ನಿಂದ ಹುಟ್ಟಿ, ಕಪೆಕ್ನಿಂದ ಬೆಳೆದು ನಿಂತ ಉದ್ಯಮ