‘ಜನ ಸ್ನೇಹಿ’ ಆಡಳಿತ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆ ರೂಪಿಸಿರುವ ನೂತನ ಕಾರ್ಯಕ್ರಮ ‘ಮನೆ ಮನೆಗೆ ಪೊಲೀಸ್’ ಕುರಿತ ಕಿರು ಹೊತ್ತಿಗೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದ್ದಾರೆ.
ಈ ಕಾರ್ಯಕ್ರಮದಡಿ ಜನರ ಸಮಸ್ಯೆ ಆಲಿಸಲು ಮನೆ ಬಾಗಿಲಿಗೆ ಪೊಲೀಸರು ತೆರಳಲಿದ್ದಾರೆ. ಪ್ರಸ್ತುತ ಜನರ ದೂರುಗಳಿಗೆ ಮಾತ್ರ ಪೊಲೀಸರು ಪ್ರತಿಕ್ರಿಯಿಸಿ ಕ್ರಮ ಜರುಗಿಸುತ್ತಿದ್ದಾರೆ. ಆದರೆ ಇನ್ಮುಂದೆ ಪೊಲೀಸರೇ ಜನರ ಬಳಿಗೆ ತೆರಳುವುದರಿಂದ ನೊಂದವರಿಗೆ ತ್ವರಿತವಾಗಿ ನ್ಯಾಯ ಸಿಗಲಿದೆ ಎಂದು ಡಿಜಿಪಿ ಡಾ.ಎಂ.ಸಲೀಂ ಹೇಳಿದ್ದಾರೆ.ಈ ಕಾರ್ಯಕ್ರಮದಿಂದ ಆಗುವ ಬದಲಾವಣೆಗಳ ನಿರೀಕ್ಷೆ ಹೀಗಿದೆ.
2. ಸಮುದಾಯ ಪೊಲೀಸ್ ವ್ಯವಸ್ಥೆ ಮೂಲಕ ಪೊಲೀಸ್ ಮತ್ತು ಜನರ ನಡುವೆ ವಿಶ್ವಾಸ ಮೂಡಿಸುವುದು.
5. ಜನರಲ್ಲಿ ಪೊಲೀಸರ ಕುರಿತ ಭಯವು ಹೋಗಿ ಸ್ನೇಹ ಮೂಡಬಹುದು.
8. ನಾಗರಿಕರು ಮತ್ತು ಪೊಲೀಸರು ಜವಾಬ್ದಾರಿ ಹಂಚಿಕೊಳ್ಳುವ ಮೂಲಕ ಉತ್ತಮ ವ್ಯವಸ್ಥೆ ನಿರ್ಮಾಣವಾಗುತ್ತದೆ.
10. ವಿಪತ್ತುಗಳು ಅಥವಾ ತುರ್ತು ಸಂದರ್ಭದಲ್ಲಿ ಜನ ಸಹಕಾರದ ಮೂಲಕ ಪೊಲೀಸರು ಶೀಘ್ರದಲ್ಲಿ ಸಿಗಲಿದ್ದಾರೆ.