ಕನ್ನಡಪ್ರಭ ವಾರ್ತೆ ಹನೂರು
ತಾಲೂಕಿನ ಇಂಡಿಗನತ್ತ, ಮೆಂದರೆ ಗ್ರಾಮಕ್ಕೆ ಸಮುದಾಯ ಮುಖಂಡರನ್ನು ಪೊಲೀಸರು ಭೇಟಿ ಮಾಡಿ ಅವರಿಗೆ ಧೈರ್ಯ ತುಂಬಿದರು.ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಏ.26ರಂದು ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಇಂಡಿಗನತ್ತ ಗ್ರಾಮದ 200 ರಿಂದ 250 ಜನರ ಮೇಲೆ ಪ್ರಕರಣ ದಾಖಲಾಗಿದೆ. ಗ್ರಾಮದಲ್ಲಿ ಕೆಲವರು ಮನೆಗಳಿಗೆ ಬೀಗ ಜಡಿದು ಜೈಲು ಪಾಲಾಗಿದ್ದರೆ, ಕೆಲವರು ಮಕ್ಕಳು, ಮಹಿಳೆಯರನ್ನು ಬಿಟ್ಟು ಬಂಧನ ಭೀತಿಯಿಂದ ತಲೆಮರಿಸಿಕೊಂಡಿದ್ದಾರೆ. ಈ ಹಿನ್ನಲೆ ಗ್ರಾಮದಲ್ಲಿರುವ 20ಕ್ಕೂ ಹೆಚ್ಚು ಮಕ್ಕಳು ಹಾಗೂ ಮಹಿಳೆಯರು ಮತ್ತು ವಯೋವೃದ್ಧರು ಹಸಿವಿನಿಂದ ಬಳಲುತ್ತಿದ್ದಾರೆ. ಜಾನುವಾರುಗಳು ಸಹ ನೀರು ಮೇವಿಲ್ಲದೆ ಕಂಗಾಲಾಗಿವೆ. ತಾತ್ಕಾಲಿಕವಾಗಿ ಗ್ರಾಮದಲ್ಲಿರುವ ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಯೋವೃದ್ಧರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮುಂದಾಗಿದ್ದೇವೆ. ಗ್ರಾಮದಲ್ಲಿ ನಡೆದಿರುವ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದು ನಿವಾಸಿಗಳಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ.ಮೆಂದರೆ ಗ್ರಾಮಕ್ಕೆ ಮುಖಂಡರ ಭೇಟಿ:
ಇಂಡಿಗನತ್ತ ಹಾಗೂ ಮೆಂದರೆ ಗ್ರಾಮ ಜನತೆ ತಲ ತಲಾಂತರದಿಂದ ವಾಸ ಮಾಡುತ್ತಿರುವ ಮೂಲ ನಿವಾಸಿಗಳಾಗಿದ್ದು ಚುನಾವಣೆ ಸಂದರ್ಭದಲ್ಲಿ ನಡೆದಿರುವ ಗಲಭೆ ಪ್ರಕರಣದಿಂದ ಹಲವರ ಮೇಲೆ ಪ್ರಕರಣ ದಾಖಲಾಗಿದೆ. ತಪ್ಪು ಮಾಡಿರುವವರು ಶಿಕ್ಷೆಗೆ ಗುರಿಯಾಗುತ್ತಾರೆ. ಉಳಿದಂತಹ ಜನರಿಗೆ ಮತ್ತು ಗಲಭೆಯಲ್ಲಿ ಹಲ್ಲೆಯಿಂದ ಭಯ ಭೀತರಾಗಿರುವ ಮೆಂದರೆ ನಿವಾಸಿಗಳಿಗೆ ಸಮುದಾಯದ ಮುಖಂಡರು ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸುವುದಾಗಿ ಸಹ ಗ್ರಾಮಸ್ಥರಿಗೆ ಭರವಸೆ ನೀಡಿದರು.ಗಲಭೆಯಿಂದ ನಲುಗಿದ ಎರಡು ಗ್ರಾಮಗಳು
ಏ.26ರಂದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಚುನಾವಣಾ ಬಹಿಷ್ಕಾರ ಮಾಡಿರುವ ಗ್ರಾಮದಲ್ಲಿ ನಡೆದ ಗಲಭೆಯಿಂದ ಎರಡು ಗ್ರಾಮದ ನಿವಾಸಿಗಳು ಭಯ ಭೀತರಾಗಿದ್ದಾರೆ. ಇದರಿಂದಾಗಿ ಸಮುದಾಯದ ಮುಖಂಡರು ಗ್ರಾಮಕ್ಕೆ ತೆರಳಿ ಎರಡು ಗ್ರಾಮಗಳ ನಿವಾಸಿಗಳ ಜೊತೆ ಪ್ರತ್ಯೇಕವಾಗಿ ಮಾತನಾಡಿ ಶಾಂತಿ ಸಮನ್ವಯದಿಂದ ಗ್ರಾಮಸ್ಥರು ಇರಬೇಕೆಂದು ಎರಡು ಗ್ರಾಮಸ್ಥರಿಗೂ ಧೈರ್ಯ ತುಂಬಿದ್ದಾರೆ.ಘಟನೆಗೆ ಖಂಡನೆ:ಮಲೆ ಮಾದೇಶ್ವರ ಬೆಟ್ಟದ ತಪಲಿನಲ್ಲಿ ಬರುವ ಕುಗ್ರಾಮದಲ್ಲಿ ವಾಸಿಸುತ್ತಿರುವ ನಿವಾಸಿಗಳು ಮೊದಲಿನಿಂದಲೂ ಸಹ ಕಾರಯ್ಯ ಬಿಲ್ಲಯ್ಯರ ಮಕ್ಕಳು ಹೀಗಾಗಿ ಗ್ರಾಮದಲ್ಲಿ ಸೋದರರಂತೆ ಇದ್ದಂತ ಗ್ರಾಮದಲ್ಲಿ ನಡೆದ ಗಲಭೆಯಿಂದ ದಾಯಾದಿಗಳಂತೆ ಆಗಿದ್ದಾರೆ.
ಗ್ರಾಮದಲ್ಲಿ ಶಾಂತಿ ನೆಲೆಸಲು ಸಮುದಾಯದ ಮುಖಂಡರು ಎಲ್ಲರನ್ನು ವಿಶ್ವಾಸಕ್ಕೆ ಪಡೆದು ನಡೆದಿರುವ ಘಟನೆಗೆ ವಿಷಾದ ವ್ಯಕ್ತಪಡಿಸಿ ಇನ್ನು ಮುಂದೆ ಗ್ರಾಮಗಳಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಮುಂಜಾಗ್ರತ ಕ್ರಮವಾಗಿ ಕ್ರಮ ಕೈಗೊಳ್ಳಲು ಎರಡು ಸಮುದಾಯಗಳ ಹಿರಿಯ ಮುಖಂಡರು ಸಭೆ ಸೇರಿ ಒಮ್ಮತದಿಂದ ತೀರ್ಮಾನ ಕೈಗೊಳ್ಳಲು ಇಲ್ಲಿನ ಜನತೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಸಮುದಾಯ ಹಿರಿಯ ಮುಖಂಡರಾದ ಪುಟ್ಟಣ್ಣ, ಮಾದೇಶ್, ಮಾದಯ್ಯ, ಮಹೇಶ್, ನಾಗ, ಅಣ್ಣಯ್ಯ, ಮಹೇಶ್ ಇನ್ನಿತರ ಮುಖಂಡರು ಇದ್ದರು.