ಕರ್ನಾಟಕದಲ್ಲಿ ಭಾವಸಾರ ಕ್ಷತ್ರಿಯರ ಜನಸಂಖ್ಯೆ 18 ಲಕ್ಷ: ಶ್ರೀನಿವಾಸ ಪಿಸೆ

KannadaprabhaNewsNetwork |  
Published : Jun 02, 2025, 01:57 AM IST
ಕ್ಯಾಪ್ಷನ30ಕೆಡಿವಿಜಿ35 ದಾವಣಗೆರೆಯಲ್ಲಿ ಶ್ರೀ ಭಾವಸಾರ ಕ್ಷತ್ರಿಯ ಸಮಾಜ ದೈವ ಮಂಡಳಿಯಿಂದ ಆಯೋಜಿಸಿದ ಸಭೆಯಲ್ಲಿ  ಶ್ರೀನಿವಾಸ ಪಿಸೆ ಮಾತನಾಡಿದರು. | Kannada Prabha

ಸಾರಾಂಶ

ಕರ್ನಾಟಕದಲ್ಲಿ ಭಾವಸಾರ ಕ್ಷತ್ರಿಯ ಸಮಾಜ 18 ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ, ರಾಜ್ಯ ಸರ್ಕಾರ ಕೇವಲ 1.8 ಲಕ್ಷ ಜನಸಂಖ್ಯೆ ಇದೆ ಎಂದಿದೆ. ಈ ಮಾಹಿತಿ ತಪ್ಪು. ಬೆಂಗಳೂರಲ್ಲೇ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದೇವೆ. ಸಮೀಕ್ಷೆ ಸರಿಯಾಗಿ ನಡೆಸದೇ ಭಾವಸಾರ ಕ್ಷತ್ರಿಯ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಸಮಾಜ ರಾಜ್ಯಾಧ್ಯಕ್ಷ ಶ್ರೀನಿವಾಸ ಪಿಸೆ ಹೇಳಿದ್ದಾರೆ.

ದಾವಣಗೆರೆ: ಕರ್ನಾಟಕದಲ್ಲಿ ಭಾವಸಾರ ಕ್ಷತ್ರಿಯ ಸಮಾಜ 18 ಲಕ್ಷ ಜನಸಂಖ್ಯೆ ಹೊಂದಿದೆ. ಆದರೆ, ರಾಜ್ಯ ಸರ್ಕಾರ ಕೇವಲ 1.8 ಲಕ್ಷ ಜನಸಂಖ್ಯೆ ಇದೆ ಎಂದಿದೆ. ಈ ಮಾಹಿತಿ ತಪ್ಪು. ಬೆಂಗಳೂರಲ್ಲೇ 2 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿದ್ದೇವೆ. ಸಮೀಕ್ಷೆ ಸರಿಯಾಗಿ ನಡೆಸದೇ ಭಾವಸಾರ ಕ್ಷತ್ರಿಯ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಸಮಾಜ ರಾಜ್ಯಾಧ್ಯಕ್ಷ ಶ್ರೀನಿವಾಸ ಪಿಸೆ ಹೇಳಿದರು.

ನಗರದ ಮಹಾರಾಜ ಪೇಟೆಯ ಶ್ರೀ ವಿಠ್ಠಲ ಮಂದಿರದಲ್ಲಿ ಗುರುವಾರ ಶ್ರೀ ಭಾವಸಾರ ಕ್ಷತ್ರಿಯ ಸಮಾಜ ದೈವ ಮಂಡಳಿಯಿಂದ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕಡಿಮೆ ಜನಸಂಖ್ಯೆ ತೋರಿಸಿದಲ್ಲಿ ಹೈ ಕೋರ್ಟ್ ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.

ಅನ್ಯಾಯ ಕುರಿತು ಆಯೋಗಕ್ಕೆ ಮನವರಿಕೆ ಮಾತ್ರವಲ್ಲ, ನಿಖರ ಅಂಕಿ-ಅಂಶಗಳನ್ನು ದಾಖಲೆ ಸಮೇತ ನೀಡಲು ಜಿಲ್ಲಾವಾರು ಪ್ರವಾಸ ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಸಹಕಾರ ತುಂಬಾ ಮುಖ್ಯ. ಮಾತೃಭಾಷೆಯಲ್ಲಿ ಮರಾಠಿ ಎಂದು ನಮೂದಿಸಲಾಗಿದೆ. ಇದರಿಂದ ನಮ್ಮನ್ನು ಆ ವರ್ಗಕ್ಕೆ ಸೇರಿಸಲಾಗಿದೆ. ಹೀಗಾಗಿಯೂ ಸಂಖ್ಯೆ ಕ್ಷೀಣಿಸಿದೆ. ಈ ತಪ್ಪನ್ನು ಈಗಲೇ ಸರಿಪಡಿಸದಿದ್ದರೆ ಸಮಾಜಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯಗಳೂ ಸಿಗೋದಿಲ್ಲ ಎಂದ ಅವರು, ಜಾತಿ ಕಾಲಂನಲ್ಲಿ ಭಾವಸಾರ ಎಂದೇ ತಿದ್ದುಪಡಿಯಾಗಬೇಕಿದೆ ಎಂದರು.

ಸಮಾಜದ ಜಿಲ್ಲಾಧ್ಯಕ್ಷ ಮುಸಳೆ ರಘು, ಕಾರ್ಯದರ್ಶಿ ಈಶ್ವರ್ ರಾವ್ ಗುಜ್ಜರ್, ಮಾತನಾಡಿದರು. ಶಂಕರ್ ರಾವ್ ನವಲೆ, ವಾಗೀಶ ಗುಜ್ಜರ್, ಚಂದ್ರಕಾಂತ್ ವಾದೋನಿ, ಭರತೇಶ ಖಮಿತ್ಕರ್, ತರುಣ ಮಂಡಳದ ಅಧ್ಯಕ್ಷ ವಿನಾಯಕ ಟಿಕಾರೆ, ವಿನಯ್ ಜಿಂಗಾಡೆ, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಜಾತ ವಾದೋನೆ, ಕಸ್ತೂರಿ ಗುಜ್ಜರ್, ಸುಮಾ ಟಿಕಾರೆ ಹಾಗೂ ಸಮಾಜದ ಮುಖಂಡರು, ಸಮಾಜ ಬಾಂಧವರು ಭಾಗವಹಿಸಿದ್ದರು.

- - -

-30ಕೆಡಿವಿಜಿ35:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ : ಶ್ರೀ ಶ್ರೀ
ಒಳಮೀಸಲು ಹೆಚ್ಚಳ: ಸಿದ್ದು vs ಬೆಲ್ಲದ್‌ ಜಟಾಪಟಿ