ಗುರುವಿನ ಸ್ಥಾನ ಪವಿತ್ರ, ಜವಾಬ್ದಾರಿಯುತ: ಮಾಜಿ ಸಚಿವ ಬಿ.ಸಿ. ಪಾಟೀಲ

KannadaprabhaNewsNetwork |  
Published : Jul 11, 2025, 01:47 AM IST
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ ಅವರು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು. | Kannada Prabha

ಸಾರಾಂಶ

ಗುರುವಿನ ಸ್ಥಾನ ಅತ್ಯಂತ ಪವಿತ್ರ ಮತ್ತು ಜವಾಬ್ದಾರಿಯುತವಾಗಿದೆ. ಗುರುಗಳು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತಾರೆ. ಗುರುಗಳನ್ನು ದೇವರೆಂದು ಪೂಜಿಸುವ ಪ್ರತಿಯೊಬ್ಬ ವ್ಯಕ್ತಿಗೂ ಮೀಸಲಿಡುವ ದಿನವೇ ಗುರುಪೂರ್ಣಿಮೆಯಾಗಿದೆ.

ಹಿರೇಕೆರೂರು: ಗುರುಪೂರ್ಣಿಮೆ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ. ಪ್ರತಿಯೊಬ್ಬರ ಸಾಧನೆಯಲ್ಲಿಗುರುವಿನ ಮಾರ್ಗದರ್ಶನ ಅತಿ ಅವಶ್ಯಕವಾಗಿದೆ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ತಿಳಿಸಿದರು.ಪಟ್ಟಣದ ಬಿ.ಸಿ. ಪಾಟೀಲ ಗೃಹ ಕಚೇರಿಯಲ್ಲಿ ಗುರುವಾರ ಗುರುಪೂರ್ಣಿಮೆ ನಿಮಿತ್ತ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.ಗುರುವಿನ ಸ್ಥಾನ ಅತ್ಯಂತ ಪವಿತ್ರ ಮತ್ತು ಜವಾಬ್ದಾರಿಯುತವಾಗಿದೆ. ಗುರುಗಳು ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತಾರೆ. ಗುರುಗಳನ್ನು ದೇವರೆಂದು ಪೂಜಿಸುವ ಪ್ರತಿಯೊಬ್ಬ ವ್ಯಕ್ತಿಗೂ ಮೀಸಲಿಡುವ ದಿನವೇ ಗುರುಪೂರ್ಣಿಮೆಯಾಗಿದೆ ಎಂದರು.ಬಿಜೆಪಿ ಮಂಡಲ ಅಧ್ಯಕ್ಷ ಸಂಜೀವಯ್ಯ ಕಬ್ಬಿಣಕಂಥಿಮಠ ಮಾತನಾಡಿ, ಗುರುವಿನ ಮಹತ್ವ ಸಾರುವ ಗುರುಪೂರ್ಣಿಮೆ ದಿನದಂದು ಬಿಜೆಪಿ ವತಿಯಿಂದ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಷ್ಯನ ಸಾಧನೆಯಲ್ಲಿ ಸಂತಸ ಕಾಣುವ ಗುರುಗಳ ಸ್ಮರಣೆ ಮಾಡುವ ಜತೆಗೆ ಅವರನ್ನು ಗೌರವಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ರಟ್ಟೀಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ದೇವರಾಜ ನಾಗಣ್ಣನವರ, ನಿವೃತ್ತ ಶಿಕ್ಷಕ ಎಚ್.ವಿ. ಬೆಟ್ಟಳ್ಳೇರ, ಶಿವಕುಮಾರ ತಿಪ್ಪಶೆಟ್ಟಿ, ನಿಂಗಾಚಾರಿ ಮಾಯಚಾರಿ, ಜಗದೀಶ ದೊಡ್ಡಗೌಡ್ರ, ಚನ್ನೇಶ ದೀವಿಗಿಹಳ್ಳಿ, ಬಸಮ್ಮ ಅಬಲೂರು, ಗೀತಾ ದಂಡಗೀಹಳ್ಳಿ, ಮುಖಂಡರಾದ ರವಿಶಂಕರ ಬಾಳಿಕಾಯಿ, ಗುರುಶಾಂತ ಎತ್ತಿನಹಳ್ಳಿ, ಹನುಮಂತಪ್ಪ ಕುರುಬರ, ಹರೀಶ ಕಲಾಲ್, ಪುಟ್ಟನಗೌಡ ಪಾಟೀಲ, ಬಿ.ಟಿ. ಚಿಂದಿ, ಹೊನ್ನಪ್ಪ ಸಾಲಿ, ಬಸವರಾಜ ಅರಕೇರಿ, ಜಿಲಾನಿ ಬಳಿಗಾರ, ಹನುಮಂತಪ್ಪಗಾಜೇರ ಸೇರಿದಂತೆ ನಿವೃತ್ತ ಶಿಕ್ಷಕರು, ಕಾರ್ಯಕರ್ತರು ಇದ್ದರು. ಬಿಜೆಪಿ ಕಚೇರಿಯಲ್ಲಿ ಗುರು ಪೂರ್ಣಿಮೆ

ಹಾವೇರಿ: ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳ ಪಾದಪೂಜೆ ಮಾಡುವ ಮೂಲಕ ಬಿಜೆಪಿ ಜಿಲ್ಲಾಧ್ಯಕ್ಷ ವಿರುಪಾಕ್ಷಪ್ಪ ಬಳ್ಳಾರಿ ಗುರುಪೂರ್ಣಿಮೆ ಆಚರಿಸಿದರು.ಈ ವೇಳೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಹರ ಮುನಿದರೂ ಗುರು ಕಾಯುವ ಎಂಬ ನಾಣ್ಣುಡಿ ಇಂದಿಗೂ ಚಾಲ್ತಿಯಲ್ಲಿದೆ. ಅದರಂತೆ ಗುರುಸ್ಥಾನದಲ್ಲಿರುವವರ ನಿತ್ಯ ಸ್ಮರಣೆ ನಮ್ಮಲ್ಲಿ ಹರಿದು ಬಂದಿರುವ ಉನ್ನತ ಸಂಸ್ಕಾರದ ಪ್ರತೀಕ. ವ್ಯಕ್ತಿ ಎಷ್ಟೇ ದೊಡ್ಡವನಾದರೂ ತಾನು ಹತ್ತಿ ಬಂದ ಮೆಟ್ಟಿಲುಗಳನ್ನು ಮರೆಯಬಾರದು ಎಂದರು.

ನಂತರ ಮಾತನಾಡಿದ ವಿರುಪಾಕ್ಷಪ್ಪ ಬಳ್ಳಾರಿ, ಅಬ್ದುಲ್ ಕಲಾಂ ವ್ಯಾಖ್ಯಾನದಂತೆ ಗುರು ಪೂರ್ಣಿಮೆ ದಿನದಂದು ಗುರುವಿನ ಅರ್ಥದಲ್ಲಿ ಅನೇಕ ಮನೋಭಾವನೆಗಳು ಭಾರತದ ಪರಪರೆಯಲ್ಲಿ ಇರುವದರಿಂದ ಭಾರತದಲ್ಲಿ ಗುರುವಿನ ಸ್ಮರಣೆ ಹಾಗೂ ಪೂಜಾ ವಿಧಾನಗಳು ಇಂದು ಜೀವಂತವಾಗಿವೆ. ಒಂದು ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಿನ ಸ್ಮರಣೆ ಮಾಡುವುದು ನನಗೆ ಅತೀವ ಸಂತೋಷ ತಂದಿದೆ. ನಮ್ಮೆಲ್ಲ ಕಾರ್ಯಕರ್ತರ ಭವಿಷ್ಯ ಉಜ್ವಲವಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಹಾವೇರಿ ವಿಧಾನಸಭಾ ಕ್ಷೇತ್ರದ ಮುಖಂಡ ಗವಿಸಿದ್ದಪ್ಪ ದ್ಯಾಮಣ್ಣನವರ, ಮಾಜಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಹಾವೇರಿ ಗ್ರಾಮೀಣ ಮಂಡಲ ಅಧ್ಯಕ್ಷ ಬಸವರಾಜ ಕಳಸೂರ, ಜಿಲ್ಲಾ ಸಹ ಚುನಾವಣಾ ಅಧಿಕಾರಿ ಎನ್.ಎಂ. ಈಟೇರ, ಗ್ರಾಮೀಣ ಮಂಡಲ ಚುನಾವಣಾ ಅಧಿಕಾರಿ ಕೃಷ್ಣಾ ಸುಣಗಾರ, ಮುಖಂಡರಾದ ನಾಗೇಂದ್ರ ಕಡಕೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ, ವೆಂಕಟೇಶ ನಾರಾಯಣ ಮತ್ತು ಮಂಡಲ ಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

PREV