ಜಾನಪದ ಗೀತೆಗೆ ಸಂಬಂಧ ಬೆಸೆವ ಶಕ್ತಿ: ಡಾ.ಬಸವ ಮರುಳಸಿದ್ಧ ಶ್ರೀ

KannadaprabhaNewsNetwork |  
Published : Mar 22, 2026, 01:15 AM IST
 | Kannada Prabha

ಸಾರಾಂಶ

ಜಾನಪದ ಗೀತೆಗಳಿಗೆ ಪರಸ್ಪರ ಉತ್ತಮ ಸಂಬಂಧ ಬೆಸೆಯುವ ಶಕ್ತಿಯಿದೆ. ಬದುಕಿನ ಬವಣೆ ಹಾಗೂ ಜೀವನದ ನೋವು, ನಲಿವುಗಳನ್ನು ಸಮರ್ಥವಾಗಿ ನಿರ್ವಹಿಸಲು ಜಾನಪದ ಗೀತೆಗಳು ಪ್ರೇರಣಾದಾಯಕ ಎಂದು ಬಸವತತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಾನಪದ ಗೀತೆಗಳಿಗೆ ಪರಸ್ಪರ ಉತ್ತಮ ಸಂಬಂಧ ಬೆಸೆಯುವ ಶಕ್ತಿಯಿದೆ. ಬದುಕಿನ ಬವಣೆ ಹಾಗೂ ಜೀವನದ ನೋವು, ನಲಿವುಗಳನ್ನು ಸಮರ್ಥವಾಗಿ ನಿರ್ವಹಿಸಲು ಜಾನಪದ ಗೀತೆಗಳು ಪ್ರೇರಣಾದಾಯಕ ಎಂದು ಬಸವತತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ನಗರದ ಬಸವತತ್ವ ಪೀಠದಲ್ಲಿ ಶನಿವಾರ ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಸಂಭ್ರಮ ಹಾಗೂ ತಾಲೂಕು, ಮಹಿಳಾ ಹಾಗೂ ನಗರ ಘಟಕದ ಸೇವಾದೀಕ್ಷೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜಾನಪದ ಲೋಕಕ್ಕೆ ಜಿಲ್ಲೆಯ ಕಲಾವಿದರ ಕೊಡುಗೆ ಬಹಳಷ್ಟಿದೆ. ಸಾಂಸ್ಕೃತಿಕ ವೈಭವದ ಜಾನಪದವು ಮನುಷ್ಯನ ಜೀವನಕ್ಕೆ ಸ್ಪೂರ್ತಿ. ಇದೀಗ ಜಾನಪದ ಸೇವೆಯನ್ನು ಅಧಿಕಾರ ಎನ್ನದೇ, ಸೇವಾ ದೀಕ್ಷಾಯಡಿ ನೂತನ ಘಟಕ ಸ್ಥಾಪಿಸಿರುವುದು ಶ್ಲಾಘನೀಯ. ಮುಂದೆ ಜಾನಪದ ಮೂಲಬೇರನ್ನು ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಪೂರ್ವಿಕರ ಕಾಲದಲ್ಲಿ ವೇದಗಳು ಮುನ್ನೆಲೆಗೆ ಬರಲು ಜಾನಪದ ಸೊಗಡೇ ಮೂಲ ಕಾರಣವಾಗಿದೆ. ಇಂದು ವಿಳಾಸ ತಲುಪಲು ಗೂಗಲ್ ಮ್ಯಾಪ್‌ನ್ನು ಹೆಚ್ಚು ಬಳಸುತ್ತಿದ್ದೇವೆ. ಆದರೆ ಜಾನಪದ ಕಾಲಘಟ್ಟದಲ್ಲಿ ಗೀತೆಗಳು ವಿಳಾಸವನ್ನು ಹಾಡಿನ ಮೂಲಕವೇ ಲಭ್ಯವಾಗುತ್ತಿತ್ತು. ಅಲ್ಲದೇ ಗಂಡ-ಹೆಂಡತಿ ಸಂಬಂಧವನ್ನು ಜಾನಪದ ಸಾಹಿತ್ಯದಲ್ಲಿ ಸುಂದರ ಅಡಕಗೊಳಿಸಲಾಗಿದೆ ಎಂದು ತಿಳಿಸಿದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಮ ನುಷ್ಯ ಟಿವಿ, ಸಿನಿಮಾ ಲೋಕಕ್ಕೆ ಹೆಚ್ಚು ಆಕರ್ಷಕನಾಗುತ್ತಿದ್ದಾನೆ. ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆ ಜನಿಸಿದ ಜಾನಪದ ಪರಂಪರೆಗೆ ಇಂದಿನ ಯುವಜನತೆ ಹೆಚ್ಚು ಬಲಗೊಳಿಸಬೇಕು. ಆ ನಿಟ್ಟಿನಲ್ಲಿ ಜಾನಪದ ಕಲೆ, ಸಾಹಿತ್ಯ ಬೆಳೆಸಲು ಪಣ ತೊಡಬೇಕು ಎಂದರು.

ಮನುಷ್ಯ ಹುಟ್ಟಿನಿಂದಲೇ ಜಾನಪದ ಸೊಗಡು ಜನಿಸಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಜಾನಪ ದ ಭಾರತೀಯ ಸಂಸ್ಕೃತಿಯ ಮೂಲ ಬೇರು ಹಾಗೂ ಬದುಕಿನ ಜೀವಾಳ. ಅನಕ್ಷರಸ್ಥ ಕಾಲದಲ್ಲಿ ಬಾಯಿಂದ ಬಾಯಿಗೆ ಹರಡಿದ ಜಾನಪದ ಗೀತೆಗಳು, ಕಾಲಕ್ರಮೇಣ ಅನುಕರಣೆಯಿಂದ ಉಳಿದಿವೆ. ರಾಜ್ಯದಲ್ಲೇ ಜಾನ ಪದ ಗೊಂಬೆಯಾಟ ನೃತ್ಯವು ಉನ್ನತ ಸ್ಥಾನ ಪಡೆದುಕೊಂಡಿದೆ ಎಂದರು.

ಜಾನಪದ ಸೊಗಡಾದ ಡೊಳ್ಳು ಕುಣಿತ, ವೀರಗಾಸೆ, ಕೋಲಾಟ ಪ್ರೇಕ್ಷಕರನ್ನು ಮನರಂಜಿಸಲಿದೆ. ಈ ಸೊಗಡಿನಲ್ಲಿ ಮೊದಲು ಪುರುಷರದ್ದೇ ಹೆಚ್ಚು ಪಾತ್ರವಿತ್ತು. ಇದೀಗ ಮಹಿಳೆಯರು ಜಾನಪದ ನೃತ್ಯಗಳಲ್ಲಿ ರಾಷ್ಟç ಮಟ್ಟದಲ್ಲಿ ಸ್ಪರ್ಧಿಸುವ ಮೂಲಕ ಜಾನಪದ ಸಂಪತ್ತನ್ನು ಹೆಚ್ಚಿಸಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ್ ಮಾತನಾಡಿ, ಜಾನಪದ ಮೂಲ ಬೇರನ್ನು ಹಸಿರಾಗಿಸಲು ಈ ವೇದಿಕೆ ಸಹಕಾರಿ. ಒಂದು ಕಾಲದಲ್ಲಿ ಜಾನಪದ ವೃಕ್ಷ ಒಣಗುವ ಸ್ಥಿತಿಯಲ್ಲಿತ್ತು. ಆದರೆ ಜಾನಪದ ಸಾಹಿತಿಗ ಗಳಾದ ಕೆ.ಆರ್.ಲಿಂಗಪ್ಪ, ಚನ್ನಬಸಪ್ಪನವರ ನೇತೃತ್ವದಲ್ಲಿ ಸಮ್ಮೇಳನ ನಡೆಸಿ ಜಾನಪದ ಸಂಪತ್ತು ಉಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಸ್ಕೃತಿಯನ್ನು ಬೆಳೆಸಬೇಕು ಎಂದರು.

ಪ್ರಸ್ತುತ ಜಿಲ್ಲಾಧಿಕಾರಿ ಕಟ್ಟಡ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಅಲ್ಲದೇ ಗ್ರಂಥಾಲಯ ಹಾಗೂ ಲೋಕೋಪಯೋಗಿ ಇಲಾಖೆ ಬ್ರಿಟಿಷರ ಕಾಲದಲ್ಲಿ ಉಳಿದಿರುವ ಕಟ್ಟಡಗಳು. ಹೀಗಾಗಿ ಹಳೇ ಜಿಲ್ಲಾಧಿಕಾರಿ ಕಚೇರಿಯನ್ನು ಜಾನಪದ ಹಿನ್ನೆಲೆ, ಪೂರ್ವಿಕರ ಶಿಲಾನ್ಯಾಸವುಳ್ಳ ವಸ್ತು ಸಂಗ್ರಹವಾಗಿಸಿದರೆ, ಮುಂದಿನ ಪೀ ಳಿಗೆ ಹಾಗೂ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ನಾಡೋಜ ಎಚ್.ಎಲ್.ನಾಗೇಗೌಡರು ಮೂಲ ಜಾನಪದವನ್ನು ಗುರುತಿಸಿ, ಸಂಗ್ರಹಿಸಿ ಪ್ರಕಟಿಸಿರುವುದರ ಜತೆಗೆ ಜಾನಪದ ಅಧ್ಯ ಯನಕ್ಕೆಂದೆ ಕರ್ನಾಟಕ ಜಾನಪದ ಪರಿಷತ್ತು ಎಂಬ ಕೇಂದ್ರವನ್ನು ಆರಂಭಿಸಿದ್ದರು. ಸಾಹಿತ್ಯ ಕ್ಷೇತ್ರದಲ್ಲಿ ಮಾಡಿದಷ್ಟೇ ಮಹತ್ವದ ಕೆಲಸವನ್ನು ನಾಗೇಗೌಡರು ಜಾನಪದ ಕ್ಷೇತ್ರದಲ್ಲೂ ಮಾಡಿದ್ದಾರೆ ಎಂದರು.

ಸಾಂಸ್ಕೃತಿಕ ಚಿಂತಕ ಡಾ.ಜೆ.ಪಿ.ಕೃಷ್ಣೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸಚಿನ್‌ಸಿಂಗ್, ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ರೈತ ಮುಖಂಡ ಗುರುಶಾಂತಪ್ಪ, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಿತಾ ಸತ್ಯನಾರಾಯಣ್, ಲಯನ್ಸ್ ಅಧ್ಯಕ್ಷ ಸಿ.ಎನ್.ಕುಮಾರ್, ನೈಟಿಂಗೇಲ್ ನರ್ಸಿಂಗ್ ಕಾಲೇಜು ಸಂಸ್ಥಾಪಕಿ ಶಶಿಕಲಾ ನಾಯ್ಕ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವಕುಲದ ಒಳಿತಿಗೆ ಪ್ರಾರ್ಥಿಸುವುದು ಅವಶ್ಯ: ಶಾಸಕ ಪ್ರದೀಪ್ ಈಶ್ವರ್
ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುವೆ