ಫಲಿಸಿತು ಡಿಕೆಶಿ ಅಭಿಮಾನಿಗಳ ಪೂಜಾಫಲ

KannadaprabhaNewsNetwork |  
Published : May 31, 2026, 01:15 AM IST
1.ಈಶ್ವರ್ , ಮುಖಂಡರು, ಚಿಕ್ಕಸಾದೇನಹಳ್ಳಿ. (ಗಡ್ಡಬಿಟ್ಟ ಹರಕೆದಾರಿ) | Kannada Prabha

ಸಾರಾಂಶ

ರಾಮನಗರ: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಂಡ ಕಂಡ ದೇವರಲ್ಲಿ ಪ್ರಾರ್ಥನೆ, ಹರಕೆ ಹೊತ್ತಿದ್ದರು. ಅದೆಲ್ಲವೂ ಈಡೇರುವ ಕಾಲ ಸನಿಹಿತವಾಗಿದೆ.

ರಾಮನಗರ: 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಂಡ ಕಂಡ ದೇವರಲ್ಲಿ ಪ್ರಾರ್ಥನೆ, ಹರಕೆ ಹೊತ್ತಿದ್ದರು. ಅದೆಲ್ಲವೂ ಈಡೇರುವ ಕಾಲ ಸನಿಹಿತವಾಗಿದೆ.

ಕೆಪಿಸಿಸಿ ಅಧ್ಯಕ್ಷರೂ ಆಗಿದ್ದ ಡಿ.ಕೆ.ಶಿವಕುಮಾರ್ ಅವರು 2023ರ ವಿಧಾನಸಭಾ ಚುನಾವಣೆ ಫಲಿತಾಂಶದ ಬಳಿಕ ಮುಖ್ಯಮಂತ್ರಿ ಆಗಲಿದ್ದಾರೆಂಬ ಭಾರೀ ನಿರೀಕ್ಷೆ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿತ್ತು. ಆದರೆ, ಅದು ಫಲಿಸದಿದ್ದಾಗ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದ್ದರಲ್ಲದೆ, ಹರಕೆ ಹೊತ್ತಿಕೊಂಡಿದ್ದರು.

ಹಾರೋಹಳ್ಳಿ ತಾಲೂಕಿನ ಚಿಕ್ಕಸಾದೇನಹಳ್ಳಿಯ ಈಶ್ವರ್ ತಮ್ಮ ನಾಯಕನನ್ನು ಸಿಎಂ ಆಗಿ ನೋಡುವ ಕನಸು ಕಂಡು ಕಳೆದ ಮೂರು ವರ್ಷಗಳಿಂದ ತಲೆ ಕೂಡಲು ಮತ್ತು ಗಡ್ಡ ತೆಗೆಸದೆ ಹಾಗೆಯೇ ಬಿಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ಕಟಿಂಗ್ ಮತ್ತು ಶೇವಿಂಗ್ ಮಾಡಿಸದೆ ಶಪಥ ಮಾಡಿದ್ದರು.

ಡಿಕೆಶಿರವರು ಮುಖ್ಯಮಂತ್ರಿಯಾಗಿ ನೋಡುವವರಿಗೆ ಕೂದಲು–ಗಡ್ಡ ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ

ಈಶ್ವರ್, ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಾಲಯಕ್ಕೆ ತೆರಳಿ ತುಂಗಭದ್ರಾ ನದಿಯಲ್ಲಿ ಡಿಕೆಶಿರವರ ಭಾವಚಿತ್ರ ಹಿಡಿದುಕೊಂಡು ರಾಯರ ಬಳಿ ಹರಕೆ ಹೊತ್ತಿದ್ದರು.

ಅಲ್ಲದೆ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ತೆರಳಿ, ಅಲ್ಲಿನ ತ್ರಿವೇಣಿ ಸಂಗಮದ ಜಾಗದಲ್ಲಿಯೂ ಡಿಕೆಶಿಯವರ ಭಾವಚಿತ್ರವನ್ನು ಕೈಯಲ್ಲಿಡಿದು, ಮುಖ್ಯಮಂತ್ರಿಯಾಗುವ ಭಾಗ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ನಂತರ ಆದಿಚುಂಚನಗಿರಿಯ ಕಾಲಭೈರವೇಶ್ವರನಲ್ಲೂ ಈಶ್ವರ್ ಪ್ರಾರ್ಥಿಸಿದ್ದರು.

ಇನ್ನೊಂದೆಡೆ ರಾಮನಗರ ತಾಲೂಕಿನ ಪಾದರಹಳ್ಳಿ ಗ್ರಾಮದ ಮಹದೇವಯ್ಯ ನೆಚ್ಚಿನ ನಾಯಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲೆಂದು ಅವರ ಭಾವಚಿತ್ರ ಹಿಡಿದು ಶಬರಿ ಮಲೆ ಯಾತ್ರೆ ಮಾಡಿ ಪ್ರಾರ್ಥನೆ ಮಾಡಿಕೊಂಡಿದ್ದರು.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಗ್ರಾಮಸ್ಥರೊಂದಿಗೆ ಶಬರಿ ಮಲೆ ಯಾತ್ರೆ ಕೈಗೊಂಡಿದ್ದ ಮಹದೇವಯ್ಯರವರು ಡಿ.ಕೆ.ಶಿವಕುಮಾರ್ ರವರು ಭಾವಚಿತ್ರ ಹಿಡಿದು ಮೆಟ್ಟಿಲುಗಳನ್ನೇರಿ ಅಭಿಮಾನ ಮೆರೆದಿದ್ದರು.

ಇನ್ನು ಕಳೆದ ನವೆಂಬರ್ ನಲ್ಲಿ ಯುವ ಮುಖಂಡ ಸುನಿಲ್ ರವರು ಬಿಳಗುಂಬ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ದ ಜಲಸಿದ್ದೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಡಿಕೆಶಿ ಫೋಟೋ ಇರಿಸಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಲಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ್ದರು. ಆನಂತರ ದೇವಸ್ಥಾನದ ಆವರಣದಲ್ಲಿ ಅನ್ನಸಂತರ್ಪಣೆ ನಡೆಸಿದ್ದರು.

ಈಗ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿ.ಕೆ.ಶಿವಕುಮಾರ್ ಅವರ ಅಭಿಮಾನಿಗಳ ಎಲ್ಲಾ ಪ್ರಾರ್ಥನೆಗಳು ಫಲಿಸಿವೆ.

ಕೋಟ್ ...............

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳಕ್ಕೆ ತೆರಳಿದೆ. ಅಲ್ಲಿನ ತ್ರಿವೇಣಿ ಸಂಗಮದಲ್ಲಿ ಸಾಹೇಬರ ಭಾವಚಿತ್ರವನ್ನು ಕೈಯಲ್ಲಿಡಿದು, ಮುಖ್ಯಮಂತ್ರಿಯಾಗುವ ಭಾಗ್ಯ ಕರುಣಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದೆ. ನಂತರ ಆದಿಚುಂಚನಗಿರಿಯ ಕಾಲಭೈರವೇಶ್ವರನಲ್ಲೂ ಪ್ರಾರ್ಥಿಸಿದ್ದೆ. ಪ್ರಾರ್ಥನೆ ಫಲ‌ ಕೊಟ್ಟಿದೆ.

- ಈಶ್ವರ್, ಮುಖಂಡರು, ಚಿಕ್ಕಸಾದೇನಹಳ್ಳಿ (ಗಡ್ಡಬಿಟ್ಟ ಹರಕೆದಾರಿ)

ಕೋಟ್ .... ........

ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳನ್ನು ಡಿ.ಕೆ.ಶಿವಕುಮಾರ್ ಅವರು ಪ್ರೀತಿಯಿಂದ ಕಾಣುತ್ತಾರೆ. ಅವರ ಸಂಘಟನಾ ಚತುರತೆ ನನಗೆ ಸ್ಫೂರ್ತಿ, ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕೆಂದು ಶಬರಿಮಲೆ ಯಾತ್ರೆ ಮಾಡಿ ಹರಕೆ ಹೊತ್ತಿದ್ದೆ. ಅಯ್ಯಪ್ಪನ ಆಶೀರ್ವಾದಿಂದ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸುತ್ತಿರುವುದನ್ನು ಕಣ್ತುಂಬಿಕೊಳ್ಳಲು ಕಾತುರವಾಗಿದ್ದೇನೆ.

-ಮಹದೇವು, ಪಾದರಹಳ್ಳಿ, (ಶಬರಿ ಮಲೆ ಹರಕೆ ಹೊತ್ತವರು)

ಕೋಟ್ ................

ನಮ್ಮ‌ ನಾಯಕರಾದ ಡಿ.ಕೆ.ಶಿವಕುಮಾರ್ ಅವರು ಹಲವು ಸವಾಲುಗಳನ್ನು ಮೆಟ್ಟಿ ಕೊನೆಗೂ ಮುಖ್ಯಮಂತ್ರಿ ಹುದ್ದೆ ಏರಲಿದ್ದಾರೆ. ಅವರ ಪದಗ್ರಹಣಕ್ಕೆ ಕ್ಷಣಗಣನೆ ಶುರುವಾಗಿದೆ. ನನಗೆ ಇದಕ್ಕಿಂತ ದೊಡ್ಡ ಸಂತಸ ಮತ್ತೊಂದಿಲ್ಲ.

- ಸುನಿಲ್, ಯುವ ಮುಖಂಡ (ಜಲಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಪೂಜೆ ಹರಕೆ ಮಾಡಿದವರು)

30ಕೆಆರ್ ಎಂಎನ್ 1,2,3.ಜೆಪಿಜಿ

1.ಈಶ್ವರ್ , ಮುಖಂಡರು, ಚಿಕ್ಕಸಾದೇನಹಳ್ಳಿ. (ಗಡ್ಡಬಿಟ್ಟ ಹರಕೆದಾರಿ)

2.ಮಹದೇವು, ಪಾದರಹಳ್ಳಿ,( ಶಬರಿ ಮಲೆ ಹರಕೆ ಹೊತ್ತವರು).

3.ಸುನಿಲ್, ಯುವ ಮುಖಂಡ( ಜಲಸಿದ್ದೇಶ್ವರಸ್ವಾಮಿ ಬೆಟ್ಟದಲ್ಲಿ ಪೂಜೆ ಹರಕೆ ಮಾಡಿದವರು)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಪುಟ ರಚನೆಗೆ ಕಸರತ್ತು-20 ರಿಂದ 25 ಸಚಿವರಿಗೆ ಕೊಕ್
ಇಂದು ಹೊಸ ಸಿಎಂ ಆಯ್ಕೆ