ಬಿಜೆಪಿ ಸದಸ್ಯತ್ವ ಪಡೆದು ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು

KannadaprabhaNewsNetwork |  
Published : Sep 10, 2024, 01:32 AM IST
ಪಟ್ಟಣದ 19ನೇ ವಾರ್ಡ ನ ಮುರುಘರಾಜೇಂದ್ರ ಬಡಾವಣೆಯಲ್ಲಿ ಬಿಜೆಪಿ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಪುರಸಭಾ ಸದಸ್ಯ ಪಟ್ಲಿನಾಗರಾಜ್ | Kannada Prabha

ಸಾರಾಂಶ

ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಲು ನೋಂದಣಿ ಪ್ರಾರಂಭವಾಗಿದೆ. ಹೆಚ್ಚು ಹೆಚ್ಚು ಜನರು ಬಿಜೆಪಿ ಸದಸ್ಯತ್ವ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಾಗಿದೆ ಎಂದು ಪುರಸಭಾ ಸದಸ್ಯ ಪಟ್ಲಿ ನಾಗರಾಜ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಚನ್ನಗಿರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಪಟ್ಲಿ ನಾಗರಾಜ್‌

- - -

ಚನ್ನಗಿರಿ: ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಭಾರತೀಯ ಜನತಾ ಪಕ್ಷದ ಪ್ರಾಥಮಿಕ ಸದಸ್ಯತ್ವ ನೀಡಲು ನೋಂದಣಿ ಪ್ರಾರಂಭವಾಗಿದೆ. ಹೆಚ್ಚು ಹೆಚ್ಚು ಜನರು ಬಿಜೆಪಿ ಸದಸ್ಯತ್ವ ಪಡೆದು ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕಾಗಿದೆ ಎಂದು ಪುರಸಭಾ ಸದಸ್ಯ ಪಟ್ಲಿ ನಾಗರಾಜ್ ಹೇಳಿದರು.

ಭಾನುವಾರ ಪಟ್ಟಣದ 19ನೇ ವಾರ್ಡ್‌ನ ಮುರುಘ ರಾಜೇಂದ್ರ ಬಡಾವಣೆಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಭದ್ರತೆಗೆ ಬಿಜೆಪಿ ಆಡಳಿತ ಅವಶ್ಯಕವಾಗಿದೆ. ನರೇಂದ್ರ ಮೋದಿ ದಿಟ್ಟ ನಿರ್ಧಾರ ಮತ್ತು ದೇಶದ ಜನರ ಭವಿಷ್ಯಕ್ಕಾಗಿ ಅವರ ಯೋಜನೆಗಳಿಂದ ಪ್ರೇರೇಪಣೆಗೊಂಡ ಮತದಾರರು ಸ್ವಪ್ರೇರಣೆಯಿಂದ ಬಿಜೆಪಿ ಸದಸ್ಯತ್ವ ಪಡೆದುಕೊಳ್ಳುತ್ತಿದ್ದಾರೆ ಎಂದರು.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವು ಶೀಘ್ರದಲ್ಲಿಯೇ ಪತನಗೊಳ್ಳಲಿದೆ. ಯಾವ ಸಂದರ್ಭದಲ್ಲಿ ಬೇಕಾದರೂ ಮಧ್ಯಂತರ ಚುನಾವಣೆ ಬರಬಹುದು. ಬಿಜೆಪಿ ಕಾರ್ಯಕರ್ತರು ಯುದ್ಧಕ್ಕೆ ಸನ್ನದ್ಧರಾಗಿರಬೇಕು ಎಂದರು.

ಪಕ್ಷದ ಪ್ರಮುಖರಾದ ಆನಂದ್, ಹನುಮಂತ್ ಮಡಿವಾಳ್, ಯದುನಂದನ್, ಗಣೇಶ್, ಮೂರ್ತಿ, ಕೆ.ಪಿ.ಎಂ. ಲತಾ, ಗಣೇಶ್, ಹರೀಶ್, ಕಮಲಾ ಹರೀಶ್, ಚಿನ್ಮಯ್, ರುದ್ರೇಶ್, ಹರೀಶ್, ಮಂಜುಳಾ, ಬಡಾವಣೆ ನಿವಾಸಿಗಳು ಹಾಜರಿದ್ದರು.

- - -

-8ಕೆಸಿಎನ್‌ಜಿ5:

ಚನ್ನಗಿರಿ ಪಟ್ಟಣದ 19ನೇ ವಾರ್ಡ್‌ನ ಮುರುಘ ರಾಜೇಂದ್ರ ಬಡಾವಣೆಯಲ್ಲಿ ಪುರಸಭಾ ಸದಸ್ಯ ಪಟ್ಲಿ ನಾಗರಾಜ್ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಕ್ಯಾಲಿಗ್ರಫಿಗೆ ಲಭಿಸಿದ ಅಂತಾರಾಷ್ಟ್ರೀಯ ಪ್ರಶಸ್ತಿ
569 ಲೈಸೆನ್ಸ್‌ ಇ-ಹರಾಜಿಗೆ ಮುಂದಾದ ಅಬಕಾರಿ ಇಲಾಖೆ