ಮುಂಡಗೋಡ: ಉತ್ತರ ಕನ್ನಡದ ಅರಣ್ಯವಾಸಿಗಳ ಸಮಸ್ಯೆ ರಾಜ್ಯದ ಇನ್ನಿತರ ಜಿಲ್ಲೆಗಿಂತ ಭಿನ್ನವಾಗಿದ್ದು, ಜಿಲ್ಲೆಯ ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ವಾಸ್ತವ್ಯ ಮತ್ತು ಸಾಗುವಳಿಗೆ ಅನಿವಾರ್ಯವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ಅರಣ್ಯವಾಸಿಗಳಿಗೆ ಉಚಿತ ಜಿಪಿಎಸ್ ಮೇಲ್ಮನವಿ ಸ್ವೀಕೃತಿ ಪ್ರತಿಯನ್ನು ವಿತರಿಸಿ ಮಾತನಾಡಿದರು.
ತಾಲೂಕು ಅಧ್ಯಕ್ಷ ಶಿವಾನಂದ ಜೋಗಿ, ಯಲ್ಲಾಪುರ ಅಧ್ಯಕ್ಷ ಭೀಮಶಿ ವಾಲ್ಮೀಕಿ, ಸ್ವಾಮಿ ಹಿರೇಮಠ, ಮಹೇಶ ಉಪಸ್ಥಿತರಿದ್ದರು.ನಿಯಮ ಉಲ್ಲಂಘಿಸಿದ ಬೈಕ್ ಸವಾರರ ಮೇಲೆ ಕೇಸ್
ಮುಂಡಗೋಡ: ನಿಯಮ ಉಲ್ಲಂಘನೆ ಹಿನ್ನೆಲೆ ಶುಕ್ರವಾರ ಮುಂಡಗೋಡ ಪೊಲೀಸರು ದ್ವಿಚಕ್ರ ವಾಹನ ಸವಾರರ ಮೇಲೆ ಸುಮಾರು ೫೬ ಕೇಸ್ ದಾಖಲಿಸುವ ಮೂಲಕ ಬಿಸಿ ಮುಟ್ಟಿಸಿದರಲ್ಲದೇ ಈ ಮೂಲಕ ಜನಜಾಗೃತಿ ಮೂಡಿಸಿದರು.ಹೆಲ್ಮೆಟ್ ರಹಿತ ಪ್ರಯಾಣ, ಪರವಾನಗಿ ರಹಿತ ಬೈಕ್ ಚಾಲನೆ, ವಾಹನ ವಿಮೆ ಭರಿಸದೆ ಇರುವುದು ಹೀಗೆ ಹಲವು ಪ್ರಕರಣಗಳನ್ನು ದಾಖಲಿಸಲಾಯಿತು.ಕರ್ಕಶ ಧ್ವನಿ ಮಾಡುವ ಸೈಲೆನ್ಸರ್ ಹೊಂದಿದ ಬೈಕ್‌ಗಳ ಸೈಲೆನ್ಸರ್ ಬಿಚ್ಚಿ ಗಾಡಿಗಳಿಗೆ ದಂಡ ವಿಧಿಸಿದರು. ಅಪಘಾತ ಸಂಭವಿಸಿದರೆ ಪ್ರಮುಖವಾಗಿ ತಲೆಗೆ ಪೆಟ್ಟು ಬಿದ್ದು ಮೃತಪಡುವುದೇ ಹೆಚ್ಚು. ಹಾಗಾಗಿ ಇನ್ನು ಮುಂದೆ ಕಡ್ಡಾಯವಾಗಿ ಹೆಲ್ಟೆಟ್ ಧರಿಸಿ ಬೈಕ್ ಚಾಲನೆ ಮಾಡಬೇಕು. ಇಲ್ಲದಿದ್ದರೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಲಾಗುವುದೆಂದು ಹಲವು ಹಿರಿಯ ನಾಗರಿಕರಿಗೆ ಪಿಎಸ್ಐ ಪರಶುರಾಮ ಮಿರ್ಜಗಿ ಕಿವಿಮಾತು ಹೇಳಿ ಎಚ್ಚರಿಸಿದರು.ಈ ಸಂದರ್ಭದಲ್ಲಿ ಪಿಎಸ್ಐ ಪರಶುರಾಮ ಮಿರ್ಜಗಿ, ಸೋಮಶೇಖರ್ ಮೈತ್ರಿ, ಗಂಗಾಧರ್ ಹೊಂಗಲ್, ರಾಜೇಶ್ ನಾಯಕ್, ಲೋಕೇಶ್ ಮೆಸ್ತ ಹಾಗೂ ಗುರು, ಮಂಜುನಾಥ್ ಮುಂತಾದವರು ಸಾಥ್ ನೀಡಿದರು.