ಕಲ್ಲುಕುಟಿಗರ ವೃತ್ತಿಗೆ ಸಿಗುವುದೇ ಭದ್ರತೆ

KannadaprabhaNewsNetwork |  
Published : Jun 24, 2024, 01:34 AM IST
೨೨ಟೇಕಲ್-೨ಬೆಟ್ಟದ ಮೇಲೆ ದೊಡ್ಡ, ದೊಡ್ಡ ಬಂಡೆಗಳನ್ನು ಯಂತ್ರೋಪಕರಣಗಳಿಂದ ತುಂಡು ಮಾಡಿರುವುದು. | Kannada Prabha

ಸಾರಾಂಶ

ಬೆಟ್ಟದಂಚಿನಲ್ಲಿ ಕಲ್ಲುಗಳಿದ್ದು ಇಲ್ಲಿ ಯಾರಿಗೂ ಸರ್ಕಾರ ಬೆಟ್ಟವನ್ನು ಹಂಚಿಕೆ ಮಾಡಿಕೊಂಡಿಲ್ಲ. ಆದರೆ ಕೆಲವು ಬಲಾಡ್ಯರು ಬೆಟ್ಟದಲ್ಲಿ ಬಂಡೆ ಇಲ್ಲಿಂದ ಇಲ್ಲಿಗೆ ನಂದು ಅಲ್ಲಿಂದ ನಿಂದು ಎಂದು ಹೇಳಿ ಅವರೇ ಮಾರ್ಕ್ ಮಾಡಿಕೊಂಡು ಗಣಿಗಾರಿಕೆ ಮಾಡುತ್ತಿದ್ದಾರೆ

ಕನ್ನಡಪ್ರಭ ವಾರ್ತೆ ಟೇಕಲ್ಭೂತಮ್ಮನ ಬೆಟ್ಟದ ಮಡಿಲು ಪ್ರಶಾಂತವಾಯಿತು. ಆದರೆ ಕಲ್ಲು ಕುಟಿಕರ ಜೀವನ ದುಸ್ತರವಾದ ಬಗ್ಗೆ ಹೇಳುವವರು ಕೇಳುವವರು ಯಾರೂ ಇಲ್ಲವಾಗಿದೆ, ಬಲಾಡ್ಯರ ಕೈಯಲ್ಲಿ ಇದ್ದ ಬೆಟ್ಟದ ಬಂಡೆಗಳ ದರ್ಬಾರು ಕಳೆದ ವಾರದಿಂದ ಕೆಲಸ, ಕಾರ್ಯವಿಲ್ಲದೆ ಸ್ಥಗಿತವಾಗಿದೆ. ಜೊತೆಗೆ ಕಲ್ಲುಕುಟಿಗರು ನಿರುದ್ಯೋಗಿಗಳಾಗಿದ್ದಾರೆ.ಇದಕ್ಕೆ ಜಿಲ್ಲಾಡಳಿತದ ಕಠಿಣ ಕ್ರಮ ಕಾರಣ. ಇತ್ತೀಚೆಗೆ ಹಳೆಪಾಳ್ಯ ಬಳಿ ಹಿಟಾಚಿ ಮೇಲೆ ಬಂಡೆ ಉರುಳಿ ಸ್ಥಳದಲ್ಲಿ ಒಬ್ಬ ಕಾರ್ಮಿಕ ಮೃತಪಟ್ಟಿದ್ದು, ಈ ಬಗ್ಗೆ ಪ್ರತಿ ಬಾರಿಯೂ ಇಂತಹ ಘಟನೆಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಇದಕ್ಕೆ ಸಂಪೂರ್ಣವಾದ ಕಡಿವಾಣ ಹಾಕಲು ಜಿಲ್ಲಾಡಳಿತ ಸಜ್ಜಾಗಿದೆ, ಈ ಹಿಂದೆ ಕೆಲವು ರಾಜಕೀಯ ಕಾರಣದಿಂದಲೂ ಸುಮಾರು ಮೂರು ತಿಂಗಳು ಹೆಚ್ಚು ಕಾಲ ನಿಲುಗಡೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.ಅರಣ್ಯ, ಕಂದಾಯ ಇಲಾಖೆ ಭೂಮಿ

ಟೇಕಲ್ ವ್ಯಾಪ್ತಿಯ ಭೂತಮ್ಮನ ಬೆಟ್ಟದಂಚಿನಲ್ಲಿ ಬಹುತೇಕ ಸ್ಥಳವು ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸುಪರ್ದಿಯಲ್ಲಿದ್ದು ಸುಮಾರು ವರ್ಷದಿಂದ ಹುಣಸೀಕೋಟೆ ಬಲ್ಲೇರಿ, ಉಳ್ಳೆರಹಳ್ಳಿ, ಜಂಗಾನಹಳ್ಳಿ, ಅನಿಗಾನಳ್ಳಿ ವೀರಕಪುತ್ರ, ಹಳೇಪಾಳ್ಯ, ಗ್ರಾಮಗಳಿಗೆ ಹೊಂದಿಕೊಂಡಂತೆ ಬೆಟ್ಟದ ಗುಡ್ಡದ ಕಲ್ಲುಗಳಿದ್ದು ಇಲ್ಲಿ ಯಾರಿಗೂ ಸರ್ಕಾರ ಬೆಟ್ಟವನ್ನು ಹಂಚಿಕೆ ಮಾಡಿಕೊಂಡಿಲ್ಲ. ಆದರೆ ಸ್ಥಳೀಯರು ಕೆಲವು ಬಲಾಡ್ಯರು ಬೆಟ್ಟದಲ್ಲಿ ಬಂಡೆ ಇಲ್ಲಿಂದ ಇಲ್ಲಿಗೆ ನಂದು ಅಲ್ಲಿಂದ ನಿಂದು ಎಂದು ಹೇಳಿ ಅವರೇ ಮಾರ್ಕ್ ಮಾಡಿಕೊಂಡು ಗಣಿಗಾರಿಕೆ ಮಾಡುತ್ತಿದ್ದಾರೆ. ಈ ಕಲ್ಲು ಬಂಡೆ ಗಣಿಗಾರಿಕೆಯಿಂದ ಶ್ರೀಮಂತರಾದವರು ಅದೆಷ್ಟೋ ಮಂದಿ. ಈ ವ್ಯಾಪ್ತಿಯಲ್ಲಿ ಬಂಡೆ ಕಲ್ಲುಗಳನ್ನು ಪುಡಿ ಮಾಡಲು ಕಲ್ಲುಕುಚ, ಸಹ ಚಪ್ಪಡಿ, ಜಲ್ಲಿ ಪುಡಿ ಮಾಡಲು ದೊಡ್ಡ ದೊಡ್ಡ ಯಂತ್ರೋಪಕರಣ ತಂದಿದ್ದಾರೆ. ಇಂತಹ ಯಂತ್ರೋಪಕರಣಗಳು ತಮಿಳುನಾಡು, ಆಂಧ್ರ ಕರ್ನಾಟಕದ ಯಾವ ಭಾಗದಲ್ಲಿಯೂ ನೋಡಲು ಸಾಧ್ಯವಿಲ್ಲ.ಸರ್ಕಾರಕ್ಕೆ ಆದಾಯ ಇಲ್ಲ

ಬಹುತೇಕ ಇಲ್ಲ ಬಂಡೆ ಮಾಲೀಕರು ಕೋಲಾರ, ಮಾಲೂರು, ಬಂಗಾರಪೇಟೆ, ಬೆಂಗಳೂರು, ಟೇಕಲ್‌ನಲ್ಲಿ, ಐಷಾರಾಮಿ ಬಂಗಲೆಗಳನ್ನು ಕಟ್ಟಿರುವುದು ಎಲ್ಲರಿಗೂ ತಿಳಿದ ವಿಷಯವಾಗಿದೆ, ಭೂತಮ್ಮನ ಮಡಿಲು ಅಗೆದು ಅಗೆದು ಆಕೆಗೆ ಯಾವುದೇ ಶಾಂತಿ ಭದ್ರತೆ ಇಲ್ಲವಾಗಿದೆ. ಸರ್ಕಾರಕ್ಕೆ ಇದರಿಂದ ಆದಾಯ ಬರದಿದ್ದರೂ ಕ್ರಮ ಕೈಗೊಳ್ಳದೆ ಮೌನವಾಗಿದೆ. ಈಗ ಕಲ್ಲುಬಂಡೆಗಳನ್ನು ಒಡೆಯಲು ಯಂತ್ರೋಪಕರಣಗಳನ್ನು ಬಳಸಲಾಗುತ್ತಿದೆ. ಆದರೂ ಕೆಲವು ಕಲ್ಲು ಕುಟಿಕರು ತಮ್ಮ ಸಾಂಪ್ರದಾಯಿಕ ವೃತ್ತಿಯಲ್ಲಿ ಮುಂದುವರೆಸಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದೀಗ ಇಲ್ಲಿ ಸ್ಥಳೀಯರು ಅಲ್ಲದೆ ನೆರೆಯ ತಮಿಳುನಾಡು ಆಂಧ್ರ ಪ್ರದೇಶದಿಂದ ಕಾರ್ಮಿಕರನ್ನು ಕರೆತಂದು ಅವರಿಗೆ ಇಂತಿಷ್ಟು ಮುಂಗಡ ಹಣ ನೀಡಿ ಕಲ್ಲು ಕೆಲಸ ಮಾಡಿಸುತ್ತಾರೆ. ಅವರೆಲ್ಲಾ ಬಹುತೇಕ ಮಂದಿ ತಮ್ಮ ತಮ್ಮ ಗ್ರಾಮಗಳಿಗೆ ಹೊರಟು ಹೋಗಿದ್ದು ಬಂಡೆ ಮಾಲೀಕರು ಪೇಚಿಗೆ ಸಿಲುಕಿಸಿದೆ.ಪ್ರತಿದಿನವೂ ಕಲ್ಲುಗಳ ಸಾಗಣೆ ಚಪ್ಪಡಿ ಹೊತ್ತ ಹಾಗೂ ಕಲ್ಲು ಕೂಸುಗಳನ್ನು ಹೊತ್ತು ಸುಮಾರು ನೂರಕ್ಕೂ ಹೆಚ್ಚು ಲಾರಿಗಳು ತಮಿಳುನಾಡು, ಆಂಧ್ರ ಹಾಗೂ ಕರ್ನಾಟಕದ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ, ಕೊಳ್ಳೇಗಾಲ, ಚಿಕ್ಕಬಳ್ಳಾಪುರ ಇನ್ನೂ ಮುಂತಾದ ಕಡೆ ಪ್ರತಿದಿನ ಕಲ್ಲನ್ನು ಸಾಗಿಸುತ್ತಿದ್ದರು ಆದರೆ ಇದೀಗ ವಾರದಿಂದ ಎಲ್ಲವೂ ಬಂದ್ ಆಗಿದೆ.ಕಲ್ಲುಕುಟಿಗರಿಕೆ ಕಾಯಕಲ್ಪ

ಹಿಂದೆಯೂ ಹಲವಾರು ಬಾರಿ ದೊಡ್ಡ ಪ್ರಮಾಣದ ಬಂಡೆಗಳು ಸಿಡಿಸುವಾಗ ಎತ್ತುವಾಗ ಸುಮಾರು ಕಲ್ಲು ಕಾರ್ಮಿಕರು ಮರಣ ಹೊಂದಿರುವುದು ಇಲ್ಲಿ ಮೆಲುಕು ಹಾಕಬಹುದು, ಈಗ ಜಿಲ್ಲಾಡಳಿತ ಕಲ್ಲು ಗಣಿಕೆಯನ್ನು ನಿರ್ಬಂಧಿಸಿದೆ. ಆದರೆ ಯಾವುದೇ ತಪ್ಪು ಮಾಡದ ಕಲ್ಲುಕುಟಿಗರ ವೃತ್ತಿಗೆ ಧಕ್ಕೆಯಾಗಿದೆ. ಇದನ್ನೇ ನಂಬಿಕೊಂಡಿರುವ ಈ ವರ್ಗಕ್ಕೆ ಕಾಯಕಲ್ಪಿ ಕಲ್ಪಿಸಲು ಜಿಲ್ಲಾಡಳಿತ ಮುಂದಾಗಬೇಕಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ