ವಿದ್ಯಾರ್ಥಿಗಳ ಉನ್ನತಿಯೇ ಶಿಕ್ಷಕರ ಸಂತೋಷ

KannadaprabhaNewsNetwork |  
Published : Aug 18, 2025, 12:00 AM IST
ಹೊನ್ನಾಳಿ ಫೋಟೋ 17ಎಚ್.ಎಲ್.ಐ1.ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಾನುವಾರ  ಹಳೆ ವಿದ್ಯಾರ್ಥಿಗಳು ಸೇರಿ ತಮಗೆ ವಿದ್ಯೆ ಕಲಿಸಿದ ನಿವೃತ್ತ ಹಿರಿಯ ಶಿಕ್ಷಕರುಗಳಿಗೆ ಗುರುವಂದನಾ ಕಾರ್ಯಕ್ರಮ ಹಮ್ಮಿಕೊಂಡು ಸನ್ಮಾನಿಸಿ ಗೌರವಿಸಿದರು.   | Kannada Prabha

ಸಾರಾಂಶ

ಶಿಕ್ಷಕರಾದವರಿಗೆ ತಾನು ಕಲಿಸಿದ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆದು ಅತ್ಯುನ್ನತ ಸ್ಥಾನದಲ್ಲಿದ್ದಾಗ ಅತ್ಯಂತ ಸಂತೋಷ ಸಿಗುವುದು. ಈ ತೃಪ್ತಿ ಎಷ್ಟೇ ಹಣ, ಅಂತಸ್ತು ಸಿಕ್ಕರೂ ಲಭಿಸುವುದಿಲ್ಲ ಎಂದು ಸರ್ಕಾರಿ ಪ್ರೌಢಶಾಲೆ ನಿವೃತ್ತ ಶಿಕ್ಷಕ ಪಿ.ತೀರ್ಥಪ್ಪ ಅಭಿಪ್ರಾಯಪಟ್ಟಿದ್ದಾರೆ.

- ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ನಿವೃತ್ತ ಶಿಕ್ಷಕ ತೀರ್ಥಪ್ಪ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶಿಕ್ಷಕರಾದವರಿಗೆ ತಾನು ಕಲಿಸಿದ ವಿದ್ಯಾರ್ಥಿ ಉನ್ನತ ಶಿಕ್ಷಣ ಪಡೆದು ಅತ್ಯುನ್ನತ ಸ್ಥಾನದಲ್ಲಿದ್ದಾಗ ಅತ್ಯಂತ ಸಂತೋಷ ಸಿಗುವುದು. ಈ ತೃಪ್ತಿ ಎಷ್ಟೇ ಹಣ, ಅಂತಸ್ತು ಸಿಕ್ಕರೂ ಲಭಿಸುವುದಿಲ್ಲ ಎಂದು ಸರ್ಕಾರಿ ಪ್ರೌಢಶಾಲೆ ನಿವೃತ್ತ ಶಿಕ್ಷಕ ಪಿ.ತೀರ್ಥಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ದಶಕಗಳ ಹಿಂದಿನ ವಿದ್ಯಾರ್ಥಿಗಳು ಸೇರಿ ಭಾನುವಾರ ತಮಗೆ ಪಾಠ ಕಲಿಸಿ, ಜೀವನ ಮಾರ್ಗ ತೋರಿದ ಹಿರಿಯ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು ಅಂದಿನ ಶಿಕ್ಷಣ ವ್ಯವಸ್ಥೆ, ವಿದ್ಯಾರ್ಥಿಗಳ ಕುರಿತು ಮಾತನಾಡಿದರು. ಎ.ಡಿ.ಧರ್ಮಪ್ಪ, ಪಿ.ವಾಸಪ್ಪ ಎಂ. ಗೀತಾಕುಮಾರಿ, ಮನೋರಮಾ, ಎನ್.ಚಿದಂಬರ ರಾವ್, ಈಶ್ವರಾಚಾರ್ ಅವರನ್ನು ಹಳೇ ವಿದ್ಯಾರ್ಥಿಗಳು ಗೌರವಿಸಿದರು.

ಹಳೆಯ ವಿದ್ಯಾರ್ಥಿಗಳ ಪೈಕಿ ಪ್ರಸ್ತುತ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ಎಚ್.ಬಿ.ಮಂಜಪ್ಪ ಮಾತನಾಡಿ, ಮನುಷ್ಯ ಜೀವನದಲ್ಲಿ ಬಂದು ಹೋದ ಹಲವಾರು ಘಟನೆ, ಅಥವಾ ವ್ಯಕ್ತಿಗಳನ್ನು ಮರೆಯಬಹುದು. ಆದರೆ ತನಗೆ ಪಾಠ ಹೇಳಿಕೊಟ್ಟು ಜೀವನ ಮಾರ್ಗ ತೋರಿಸಿದ ಶಿಕ್ಷಕರನ್ನು ಎಂದಿಗೂ ಮರೆಯಲಾರ ಎಂದರು.

ಭದ್ರಾವತಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆಗಿರುವ ನಾಗೇಂದ್ರಪ್ಪ ಮಾತನಾಡಿದರು. ವಿಧಾನ ಸೌಧದಲ್ಲಿ ಉನ್ನತ ಹುದ್ದೆಯಲ್ಲಿರುವ ನರಸಿಂಹಪ್ಪ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ವೈದ್ಯ ಡಾ. ವಿರೂಪಾಕ್ಷಪ್ಪ, ರಾಜಾಸ್ತಾನ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ.ಇಟಗಪ್ಪ, ಶಿವಮೊಗ್ಗ ಜಿಲ್ಲಾ ಖಜಾನೆ ಅಧಿಕಾರಿ ಲಕ್ಷ್ಮೀಶ್, ಹೊನ್ನಾಳಿ ಎಸ್.ಸಿ.ಆರ್.ಜೆ.ಸಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ನರಸಿಂಹಪ್ಪ ಸೇರಿದಂತೆ ಬೇರೆ ಕಡೆಗಳಲ್ಲಿ ಶಿಕ್ಷಕರಾಗಿ, ಇತರೆ ಕೆಲಸಗಳಲ್ಲಿರುವ ಅನೇಕ ಮಹಿಳೆಯರು ಕೂಡ ತಮ್ಮ ಹಿರಿಯ ಗುರುಗಳ ಕುರಿತು ಮಾತನಾಡಿದರು.

ನಿವೃತ್ತರಾಗಿದ್ದು, ದಿವಂಗತರಾಗಿರುವ 8 ಹಿರಿಯ ಶಿಕ್ಷಕರ ಗೌರವಾರ್ಥ ಮೌನಾಚರಣೆ ಮಾಡಲಾಯಿತು. ಹಳೆ ವಿದ್ಯಾರ್ಥಿಗಳಾದ ಸತ್ತಿಗೆ ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು.

ವಕೀಲ ಚಂದ್ರಪ್ಪ ಮಡಿವಾಳ ಸ್ವಾಗತಿಸಿದರು. ಕತ್ತಿಗೆ ನಾಗರಾಜ್, ಡಿ.ಎಸ್. ರಾಜು, ಹರಿಯಾಣ ಮಂಜು, ಎಲ್‌ಐಸಿ ರಮೇಶ್, ಹೊಸಕೇರಿ ಸುರೇಶ್, ಪಟ್ಟಣಶೆಟ್ಟಿ ಪರಮೇಶ್, ಮಹಮ್ಮದ್ ಗೌಸ್, ಮಾಜಿ ಸೈನಿಕ ವಾಸಪ್ಪ, ಶಶಿಕಲಾ, ಲಲಿತಾ ಭಾರ್ಗವ್‌ ಮತ್ತಿತರರು ಇದ್ದರು.

- - -

-17ಎಚ್.ಎಲ್.ಐ1.ಜೆಪಿಜಿ:

ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಹಳೇ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ ನಡೆಯಿತು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌