ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪಟ್ಟಣದ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ನಡೆಯುತ್ತಿರುವ ನವರಾತ್ರಿ ದಸರಾ ಉತ್ಸವದ 6ನೇ ದಿನದ ದೇವಿ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸೃಷ್ಟಿಯನ್ನು ರೂಪಿಸುವ, ಜೀವಜಗತ್ತಿಗೆ ಚೈತನ್ಯ ನೀಡುವ ಜಗನ್ಮಾತೆಯೇ ಪರಾಶಕ್ತಿ. ಮಹಿಳೆ ಕೇವಲ ಒಂದು ಕುಟುಂಬದ ಆಧಾರವಲ್ಲ. ಇಡೀ ಸಮಾಜದ ಪ್ರಗತಿ ಮತ್ತು ಸೃಜನಶೀಲತೆಯ ಶಕ್ತಿಯಾಗಿದ್ದಾಳೆ. ತನ್ನ ಜೀವನದಲ್ಲಿ ತಾಯಿ, ಮಗಳು, ಸಹೋದರಿ, ಪತ್ನಿ ಸೇರಿ ಅನೇಕ ಪಾತ್ರ ನಿರ್ವಹಿಸುವ ಮಹಿಳೆಯ ಬದುಕಿನಲ್ಲಿ ದೇವಿಯ ವಿವಿಧ ಸ್ವರೂಪ ಕಾಣಬಹುದು. ಆಕೆಯಲ್ಲಿನ ಧೈರ್ಯ, ಕರುಣೆ, ತಾಳ್ಮೆ, ಜ್ಞಾನ ಮತ್ತು ಸಮರ್ಪಣಾ ಮನೋಭಾವಗಳು ದುರ್ಗೆ, ಲಕ್ಷ್ಮಿ ಹಾಗೂ ಸರಸ್ವತಿಯ ರೂಪಗಳನ್ನು ನೆನಪಿಸುತ್ತವೆ ಎಂದರು.
ಸಾಲೋಟಗಿಯ ಸಂಗಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ನಾ ಎನ್ನುವುದು ನರಕಕ್ಕೆ ಸಮಾನವಾದರೆ, ನಾವು ಎನ್ನುವುದು ಸ್ವರ್ಗಕ್ಕೆ ಸಮಾನವಾಗಿದೆ. ನಾನು ಎಂಬ ಅಹಂಕಾರ ಮನುಷ್ಯನನ್ನು ಅವನತಿಯತ್ತ ಕೊಂಡೊಯ್ಯುತ್ತದೆ. ಅಹಂಕಾರವನ್ನು ತೊರೆದಾಗ ಮಾತ್ರ ಮಾನಸಿಕ ನೆಮ್ಮದಿ ಮತ್ತು ಜೀವನದಲ್ಲಿ ನಿಜವಾದ ಸಂತೋಷ ದೊರೆಯಲು ಸಾಧ್ಯ ಎಂದು ಹೇಳಿದರು.ನಂತರ ಬ್ರಾಹ್ಮಣ, ಬಣಜಿಗ, ಆರ್ಯವೈಶ್ಯ ಹಾಗೂ ಭಗೀರಥ ಸಮಾಜಗಳ ಪೂಜ್ಯರಿಗೆ ಪುಷ್ಪಾರ್ಪಣೆ ಮಾಡಿ ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ನವರಾತ್ರಿ ಉತ್ಸವದ ಧಾರ್ಮಿಕ ಸಂಭ್ರಮದ ನಡುವೆ ವಿವಿಧ ಸಮಾಜಗಳ ಗಣ್ಯರನ್ನು ಗೌರವಿಸಿದ ಕಾರ್ಯಕ್ರಮ ಪರಸ್ಪರ ಗೌರವ ಮತ್ತು ಸಾಮಾಜಿಕ ಸೌಹಾರ್ದದ ಸಂದೇಶ ಸಾರಿತು.