ಪ್ರಾಮಾಣಿಕತೆ, ಸಹಕಾರದಿಂದ ಸಂಘದ ಪ್ರಗತಿ ಸಾಧ್ಯ

KannadaprabhaNewsNetwork |  
Published : Sep 02, 2025, 01:01 AM IST
ಪೋಟೋ- 1ಜಿಎಲ್ಡಿ3ಗುಳೇದಗುಡ್ಡದಲ್ಲಿ ಸಾಲೇಶ್ವರ ಸಹಕಾರಿ ಸಂಘದ ವಾರ್ಷಿಕ ಸಭೆಯನ್ನು ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಉದ್ಘಾಟಿಸಿದರು. | Kannada Prabha

ಸಾರಾಂಶ

ಶೇರುದಾರರ, ಗ್ರಾಹಕರ ಸಹಕಾರದಿಂದ ಶ್ರೀ ಸಾಲೇಶ್ವರ ಪತ್ತಿನ ಸಹಕಾರಿ ಸಂಘ ಉತ್ತಮ ಪ್ರಗತಿ ಸಾಧಿಸಿದೆ. ನಿರ್ದೇಶಕ ಮಂಡಳಿಯ ಪ್ರಾಮಾಣಿಕತೆ, ಪರಸ್ಪರ ಸಹಕಾರ, ಕಾಳಜಿ ಇವೆಲ್ಲವುದರ ಫಲವಾಗಿ ಸಂಘ ₹1 ಕೋಟಿ ಲಾಭ ಗಳಿಸಿದೆ. ಮುಂಬರುವ ದಿನದಲ್ಲಿ ಸಂಘ ₹100 ಕೋಟಿ ದುಡಿಯುವ ಬಂಡವಾಳ ಹೊಂದುವ ಗುರಿ ಹೊಂದಲಾಗಿದೆ ಎಂದು ಸಂಘದ ಅಧ್ಯಕ್ಷ ಚಂದ್ರಕಾಂತ ಶೇಖಾ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಶೇರುದಾರರ, ಗ್ರಾಹಕರ ಸಹಕಾರದಿಂದ ಶ್ರೀ ಸಾಲೇಶ್ವರ ಪತ್ತಿನ ಸಹಕಾರಿ ಸಂಘ ಉತ್ತಮ ಪ್ರಗತಿ ಸಾಧಿಸಿದೆ. ನಿರ್ದೇಶಕ ಮಂಡಳಿಯ ಪ್ರಾಮಾಣಿಕತೆ, ಪರಸ್ಪರ ಸಹಕಾರ, ಕಾಳಜಿ ಇವೆಲ್ಲವುದರ ಫಲವಾಗಿ ಸಂಘ ₹1 ಕೋಟಿ ಲಾಭ ಗಳಿಸಿದೆ. ಮುಂಬರುವ ದಿನದಲ್ಲಿ ಸಂಘ ₹100 ಕೋಟಿ ದುಡಿಯುವ ಬಂಡವಾಳ ಹೊಂದುವ ಗುರಿ ಹೊಂದಲಾಗಿದೆ ಎಂದು ಸಂಘದ ಅಧ್ಯಕ್ಷ ಚಂದ್ರಕಾಂತ ಶೇಖಾ ಹೇಳಿದರು.

ಪಟ್ಟಣದ ಶ್ರೀ ಸಾಲೇಶ್ವರ ಪತ್ತಿನ ಸಹಕಾರಿ ಸಂಘದ 21ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ 2013ರಲ್ಲಿಯೇ ರಾಜ್ಯ ಮಟ್ಟದಲ್ಲಿಯೇ ಅತ್ಯುತ್ತಮ ಸಹಕಾರಿ ಸಂಘವೆಂದು ಪ್ರಶಸ್ತಿ ಪಡೆದಿದೆ. ಈಗ ಗ್ರಾಹಕರ ವಿಶ್ವಾಸ ಗಳಿಸಿ ಉತ್ತಮ ಪ್ರಗತಿ ಸಾಧಿಸುತ್ತಿದೆ. ಶೇರುದಾರರಿಗೆ ಶೇ.12ರಷ್ಟು ಡಿವಿಡೆಂಡ್ ನೀಡಲು ಸಂಘ ನಿರ್ಧರಿಸಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 3, 243 ಜನ ಶೇರುದಾರ ಸದಸ್ಯರನ್ನು ಹೊಂದಿದೆ. ₹2 ಕೋಟಿ 31 ಲಕ್ಷ ಶೇರು ಬಂಡವಾಳ, ₹4 ಕೋಟಿ 75 ಲಕ್ಷ ನಿಧಿಗಳನ್ನು ಹೊಂದಿದೆ. ₹67 ಕೋಟಿ 94 ಲಕ್ಷ ಠೇವಣಿಗಳು ಹಾಗೂ ₹75 ಕೋಟಿ 1 ಲಕ್ಷ ದುಡಿಯುವ ಬಂಡವಾಳ ಹೊಂದಿದೆ ಎಂದರು.ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿದ ಸಂಘದ ಸದಸ್ಯ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಉತ್ತಮ ಸಾಲಗಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಗದ್ಗುರು ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಹಕರು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿಸಿ ಸಂಘದ ಬೆಳವಣಿಗೆಗೆ ಕೈ ಜೋಡಿಸಬೇಕು. ಸಂಘ 25 ವರ್ಷ ಪೂರೈಸುವ ಸಂದರ್ಭದಲ್ಲಿ 25 ಶಾಖೆಗಳನ್ನು ಹೊಂದಲಿ ಎಂದು ಹಾರೈಸಿದರು.ಸಂಘದ ಉಪಾಧ್ಯಕ್ಷ ಸಂಗನಬಸಪ್ಪ ಚಿಂದಿ, ನಿರ್ದೇಶಕರಾದ ಪ್ರಕಾಶ ವಾಳದವುಂಕಿ, ಸಚ್ಚಿದಾನಂದ ತೊಗರಿ, ಬಸವರಾಜ ತೊಗರಿ, ಶ್ರೀಕಾಂತ ಭಾವಿ, ಗಂಗಾಧರ ಮದ್ದಾನಿ, ಮಲ್ಲಿಕಾರ್ಜುನ ಸಾರಂಗಿ, ಸಂಗನಬಸಪ್ಪ ಪಾಗಿ, ಮಂಜುನಾಥ ರಾಜನಾಳ, ಭಾಗ್ಯಾ ಉದ್ನೂರ, ನಾಗವೇಣಿ ಬಂಕಾಪೂರ, ಸಂಘದ ಪ್ರಧಾನ ವ್ಯವಸ್ಥಾಪಕ ರಮೇಶ ಜಿಡಗಿ, ಅಶೋಕ ಹೆಗಡೆ, ಮಲ್ಲಿಕಾರ್ಜುನ ಧರಣಿ, ಬಸವರಾಜ ಹೆಗಡೆ, ನಾಗೇಶಪ್ಪ ಪಾಗಿ ಇದ್ದರು.

PREV

Recommended Stories

ನ.14ರಿಂದ 20ರಿಂದ ರಾಜ್ಯದಲ್ಲಿ ಸಹಕಾರ ಸಪ್ತಾಹ
ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ