ಗ್ರಾಮಸ್ಥರಿಂದ ಪ್ರತಿಭಟನೆ ರದ್ದು

KannadaprabhaNewsNetwork | Published : Jan 5, 2025 1:31 AM

ಸಾರಾಂಶ

ಕಕ್ಕಬ್ಬೆಯ ಖಾಸಗಿ ರೆಸಾರ್ಟ್‌ವೊಂದರಿಂದ ಕಲುಷಿತ ನೀರು ತೋಡಿಗೆ ಸೇರುತ್ತಿದ್ದು ಇದರಿಂದ ಗ್ರಾಮವಾಸಿಗಳು ಕೊಳಚೆ ನೀರು ಬಳಸುವಂತಾಗಿದೆ. ಈ ಹಿನ್ನೆಲೆ ಪ್ರತಿಭಟನೆಗೆ ನಿರ್ಧರಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಜಲ ಮಲಿನಗೊಳಿಸುವಂತಹ ರೆಸಾರ್ಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಕಕ್ಕಬೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಮರಂದೋಡ, ಯಾವಕಾಪಾಡಿ ಗ್ರಾಮದ ಗ್ರಾಮಸ್ಥರು ಮತ್ತು ಪಂಚಾಯಿತಿ ಸದಸ್ಯರು ಶನಿವಾರ ಪ್ರತಿಭಟನೆಗೆ ನಿರ್ಧರಿಸಿದ್ದರು. ಈ ಬಗ್ಗೆ ಸ್ಥಳೀಯ ಕಕ್ಕಬೆ ಗ್ರಾ.ಪಂ.ಅಧಿಕಾರಿಗಳು, ಸದಸ್ಯರು ಹಾಗೂ ಚುನಾಯಿತ ಪ್ರತಿನಿಧಿಗಳು ರೆಸಾರ್ಟ್ ಮಾಲೀಕರೊಂದಿಗೆ ಮಾತುಕತೆ ನಡೆಸಿ ನೀರು ಮಲಿನವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದ ಹಿನ್ನೆಲೆ ಪ್ರತಿಭಟನೆಯನ್ನು (ಶನಿವಾರ) ಹಿಂತೆಗೆದುಕೊಳ್ಳಲಾಗಿದೆ.

ಸಮೀಪದ ಕಕ್ಕಬ್ಬೆಯ ಖಾಸಗಿ ರೆಸಾರ್ಟ್ ಒಂದರಿಂದ ಕಲುಷಿತ ನೀರು, ತೋಡಿಗೆ ಸೇರುತ್ತಿದ್ದು ಇದರಿಂದ ಗ್ರಾಮವಾಸಿಗಳು ಕೊಳಚೆ ನೀರನ್ನು ಬಳಸುವಂತಾಗಿದೆ. ಈ ಹಿನ್ನೆಲೆ ಪ್ರತಿಭಟನೆಗೆ ನಿರ್ಧರಿಸಲಾಗಿತ್ತು.

-----------------------------------

ಇಂದು ಭೀಮ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮಮಡಿಕೇರಿ : ಕೊಡ್ಲಿಪೇಟೆಯ ಬೆಸೂರು ಜೈ ಭೀಮ್ ವಿಪ್ಲವ ಯುವ ಬಳಗದ ವತಿಯಿಂದ ಬೆಸೂರಿನಲ್ಲಿ ಜ.5 ರಂದು ಭೀಮ ಕೊರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದೆ.ಬೆಸೂರು ನ್ಯಾಯದಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಜೈ ಭೀಮ್ ವಿಪ್ಲವ ಯುವ ಬಳಗದ ಅಧ್ಯಕ್ಷ ಎನ್.ಆರ್.ರಂಗಸ್ವಾಮಿ (ಪಾಂಡು) ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಅರಕಲಗೋಡು ಶಾಸಕ ಎ.ಮಂಜು, ಕಟ್ಟಾಯ ವಿಧಾನಸಭಾ ಕ್ಷೇತ್ರದ ಶಾಸಕ ಸೀಮೆಂಟ್ ಮಂಜು, ಬೆಸೂರು ಗ್ರಾ.ಪಂ ಅಧ್ಯಕ್ಷರಾದ ಕಮಲಮ್ಮ, ಎಸ್‌ಸಿ-ಎಸ್ಟಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಹೇಂದ್ರ ಪಾಲ್ಗೊಳ್ಳಲಿದ್ದು, ಖ್ಯಾತ ವಕೀಲ ಹಾಗೂ ಅಂಬೇಡ್ಕರ್ ವಿಚಾರವಾದಿ ಪ್ರೊ.ಹರಿರಾಮ್ ಮುಖ್ಯ ಭಾಷಣ ಮಾಡಲಿದ್ದಾರೆ.ಬೆಳಗ್ಗೆ 9 ಗಂಟೆಗೆ ಕೊಡ್ಲಿಪೇಟೆ ವೃತ್ತದಿಂದ ಬೆಸೂರು ವೃತ್ತದವರೆಗೆ ಬೈಕ್ ಜಾಥಾದ ಮೂಲಕ ಕೊರೆಗಾಂವ್ ವಿಜಯಸ್ತಂಭದ ಮೆರವಣಿಗೆ ನಡೆಯಲಿದೆ. ಆದ್ದರಿಂದ ಸಾರ್ವಜನಿಕರು, ಸಮುದಾಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಜೈ ಭೀಮ್ ವಿಪ್ಲವ ಯುವ ಬಳಗದ ನಿರ್ದೇಶಕ ಸುಂದರೇಶ್ ಮನವಿ ಮಾಡಿದ್ದಾರೆ.

Share this article