ಹಿಂದುಗಳ ನಂಬಿಕೆಗಳಿಗೆ ಘಾಸಿ ಮಾಡುವುದೇ ಕಾಂಗ್ರೆಸ್ ಉದ್ದೇಶ: ಸಿ.ಟಿ.ರವಿ

KannadaprabhaNewsNetwork |  
Published : Jan 30, 2025, 12:33 AM IST
30 | Kannada Prabha

ಸಾರಾಂಶ

ತಾಲಿಬಾಲಿನಿಗಳು ತಮ್ಮ ಧಾರ್ಮಿಕ ನಂಬಿಕೆಗೆ ಘಾಸಿಯಾದ್ರೆ ತಲ್ವಾರ್ ಎತ್ತುತ್ತಾರೆ. ನಾವು ಹಿಂದುಗಳು ದುಷ್ಟರನ್ನ ಕಂಡರೇ ದೂರ ಇರಿ ಎಂಬ ರೀತಿ ಇದ್ದು ಬಿಡುತ್ತೇವೆ. ಹೀಗಾಗಿ ಕಾಂಗ್ರೆಸ್ ನವರು ಪದೇ ಪದೇ ನಮ್ಮ ಧಾರ್ಮಿಕ ನಂಬಿಕೆಗೆ ಘಾಸಿ ಮಾಡುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರು

ಹಿಂದುಗಳ ನಂಬಿಕೆಗಳಿಗೆ ಘಾಸಿ ಮಾಡುವುದೇ ಕಾಂಗ್ರೆಸ್ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕಂದರೆ ನಾವು ತಾಲಿಬಾನಿಗಳ ರೀತಿ ಅವರಿಗೆ ತಿರುಗೇಟು ಕೊಡುವುದಿಲ್ಲ. ತಾಲಿಬಾನಿಗಳ ರೀತಿ ಪ್ರತಿಕ್ರಿಯಿಸಿದರೇ ಹಿಂದೆ ಮುಂದೆ ಮುಚ್ಚಿಕೊಂಡಿರುತ್ತಾರೆ ಎಂದರು.

ತಾಲಿಬಾಲಿನಿಗಳು ತಮ್ಮ ಧಾರ್ಮಿಕ ನಂಬಿಕೆಗೆ ಘಾಸಿಯಾದ್ರೆ ತಲ್ವಾರ್ ಎತ್ತುತ್ತಾರೆ. ನಾವು ಹಿಂದುಗಳು ದುಷ್ಟರನ್ನ ಕಂಡರೇ ದೂರ ಇರಿ ಎಂಬ ರೀತಿ ಇದ್ದು ಬಿಡುತ್ತೇವೆ. ಹೀಗಾಗಿ ಕಾಂಗ್ರೆಸ್ ನವರು ಪದೇ ಪದೇ ನಮ್ಮ ಧಾರ್ಮಿಕ ನಂಬಿಕೆಗೆ ಘಾಸಿ ಮಾಡುತ್ತಿದ್ದಾರೆ ಎಂದರು.

ಮಲ್ಲಿಕಾರ್ಜುನ ಖರ್ಗೆ ಮೊದಲು ಈ ರೀತಿ ಇರಲಿಲ್ಲ: ಕುಂಭ ಮೇಳದಲ್ಲಿ ಸ್ನಾನ ಮಾಡಿದರೆ ಬಡತನ ಹೋಗುತ್ತಾ? ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮಾತಿಗೆ ಪ್ರತಿಕ್ರಿಯಿಸಿದ ಅವರು, ಖರ್ಗೆ ಅವರು ಮೊದಲು ಈ ರೀತಿ ಇರಲಿಲ್ಲ. ಇದೇ ರೀತಿ ಇದಿದ್ದರೇ ಎಂಟು ಭಾರಿ ಅವರು ಗೆಲ್ಲುತ್ತಿರಲಿಲ್ಲ ಎಂದರು.ಈಗ ಕಾಂಗ್ರೆಸ್ ಪಕ್ಷ ತಮ್ಮ ನಿಲ್ಲುವನ್ನ ಅವರ ಬಾಯಿಯಿಂದ ಹೇಳಿಸುತ್ತಿದೆ. ಮುಖ್ಯಮಂತ್ರಿ ಕೂಡ ಅದನ್ನ ಸಮರ್ಥಿಸಿದ್ದಾರೆ. ಹಾಗಾದರೇ ಕಾಂಗ್ರೆಸ್ ನವರು ಹಜ್ ಯಾತ್ರೆಗೆ ಯಾಕೆ ದುಡ್ಡು ಕೊಡುತ್ತಾರೆ. ಹಜ್ ಯಾತ್ರೆಗೆ ಹೋದರೆ ಬಡತನ ನಿರ್ಮೂಲನೆಯಾಗುತ್ತಾ?, ಹಜ್ ಯಾತ್ರೆಗೆ ಯಾಕೆ ಸರ್ಕಾರ ದುಡ್ಡು ಕೊಡಬೇಕು ಎಂದು ಪ್ರಶ್ನಿಸಿದರು.

ಕೂಡಲೇ ಹಜ್ ಯಾತ್ರೆಯ ಸಬ್ಸಿಡಿಯನ್ನ ನಿಲ್ಲಿಸಿ ಬಿಡಿ ನೋಡೊಣಾ? ಎಂದು ಸವಾಲು ಹಾಕಿದರು..

ನೀವು ನಮ್ಮನ್ನ ಕೆಣಕಿದ್ದಕ್ಕೆ ನಾವು ಇದನ್ನ ಕೇಳುತ್ತಿದ್ದೇವೆ. ಆಚಾರವೇ ಸ್ವರ್ಗ ಎಂದು ಸಿಎಂ ಹೇಳಿದ್ದಾರೆ. ಭ್ರಷ್ಟಾಚಾರ ಮಾಡುವುದು, ಅವ್ಯವಹಾರ ಮಾಡುವುದು, ಸುಳ್ಳು ಹೇಳುವುದು ಸ್ವರ್ಗ ಎಂದು ಸಿಎಂ ಅಂದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು

ಮಹಾ ಕುಂಭಮೇಳಕ್ಕೆ ಯಾರನ್ನ ಒತ್ತಾಯದಿಂದ ಕರೆಯುತ್ತಿಲ್ಲ. ಎಲ್ಲರೂ ಅವರ ನಂಬಿಕೆಯಿಂದ ಹೋಗುತ್ತಿದ್ದಾರೆ. ಅದನ್ನ ಯಾಕೆ ನೀವು ಪ್ರಶ್ನೆ ಮಾಡುತ್ತೀರಾ? ಎಂದರು.

ಕುಂಭ ಮೇಳದಲ್ಲಿ ಕಾಲ್ತುಳಿತ ಪ್ರಕರಣದ ಬಗ್ಗೆ ಮಾತನಾಡಿದ ಅವರು, ಒಬ್ಬ ಮನುಷ್ಯ 50 ಕೆಜಿ ತೂಕ ಎತ್ತಬಹುದು. ಅದು 70 ಕೆಜಿ ಆದರೂ ಹೇಗೋ ನಿಭಾಯಿಸುತ್ತಾನೆ. 100 ಕೆಜಿ ಆದರೆ ಕಷ್ಟ ಆಗುತ್ರೆ ಅಲ್ವಾ. ಇದು ಕೂಡ ಅದೇ ರೀತಿ ಎಂದರು.

ನಾನು ಕೂಡು ಕುಂಭಮೇಳಕ್ಕೆ ಹೋಗಿದ್ದೆ. ವ್ಯವಸ್ಥೆಯನ್ನ ತುಂಬಾ ಚೆನ್ನಾಗಿ ಮಾಡಿದ್ದಾರೆ. ಜನ ಹೆಚ್ಚಾದ ಕಾರಣ ಸ್ವಲ್ಪ ಸಮಸ್ಯೆಯಾಗಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಿಥಿ ಚಿತ್ರದ ನಟ ‘ಸೆಂಚುರಿ’ಗೌಡ ಸೊಂಟದ ಮೂಳೆ ಮುರಿದು ನಿಧನ
ರಾಜ್ಯ ರಾಜಕಾರಣದಲ್ಲಿ ನನ್ನ ಕ್ಷೇತ್ರ ಚಾಮರಾಜನಗರ : ಪ್ರತಾಪ್‌ ಸಿಂಹ