ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ‘ತಿಥಿ’ ಸಿನಿಮಾದ ನಟ ಸೆಂಚುರಿಗೌಡ (ಸಿಂಗ್ರೀಗೌಡ) (101) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲು ಗ್ರಾಮದ ನಿವಾಸಿ
ಪಾಂಡವಪುರ: ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕನ್ನಡದ ‘ತಿಥಿ’ ಸಿನಿಮಾದ ನಟ ಸೆಂಚುರಿಗೌಡ (ಸಿಂಗ್ರೀಗೌಡ) (101) ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಸಿಂಗ್ರೀಗೌಡನಕೊಪ್ಪಲು ಗ್ರಾಮದ ನಿವಾಸಿಯಾದ ನಟ ಸಿಂಗ್ರೀಗೌಡ ಅವರು ತಿಥಿ ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿ, ಸೆಂಚುರಿಗೌಡ ಎಂಬ ಪಾತ್ರದ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದರು.
ತರ್ಲೆವಿಲೇಜ್ ಸೇರಿದಂತೆ ಹಲವಾರು ಮೂವಿಗಳಲ್ಲಿ ನಟಿಸಿದ್ದಾರೆ.
ಬಳಿಕ ತರ್ಲೆವಿಲೇಜ್ ಸೇರಿದಂತೆ ಹಲವಾರು ಮೂವಿಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸೊಂಟದ ಮೂಳೆ ಮುರಿದು ಅನಾರೋಗ್ಯಕ್ಕೆ ಒಳಗಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗಿದೆ ಭಾನುವಾರ ರಾತ್ರಿ ನಿಧನರಾದರು.
ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ
ಮಕ್ಕಳಾದ ಕೆಂಪಮ್ಮ, ಬೆಟ್ಟಮ್ಮ, ಸಣ್ಣತಾಯಮ್ಮ ಹಾಗೂ ಕೆಂಪೇಗೌಡ ಅವರನ್ನು ಅಗಲಿದ್ದಾರೆ. ಗಣ್ಯರು ಅಂತಿಮ ದರ್ಶನಪಡೆದ ಬಳಿಕ ಸೋಮವಾರ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರ ನಡೆಯಿತು.

