ಮುಂದಿನ ಪೀಳಿಗೆ ಧರ್ಮವಂತರಾಗಿಸೋದೆ ಜೈನ ಧರ್ಮದ ಉದ್ದೇಶ: ಜೈನಮುನಿ ಕುಲರತ್ನಭೂಷಣ ಮಹಾರಾಜರು

KannadaprabhaNewsNetwork |  
Published : Feb 07, 2026, 04:15 AM IST
ರಬಕವಿ-ಬನಹಟ್ಟಿ ತಾಲೂಕಿನ ಹಳಿಂಗಳಿ ಗ್ರಾಮದ ಭದ್ರಗಿರಿ ಬೆಟ್ಟದಲ್ಲಿ ಶ್ರೀ ಜಿನ ಸಹಸ್ರಷ್ಟ ನಾಮ ಅರ್ಚನೆ ಆರಾಧನಾ ಮಹೋತ್ಸವ, ಭವ್ಯ ಜೀವಂತ ಸಮವಶರಣ ಜರುಗಿತು. | Kannada Prabha

ಸಾರಾಂಶ

ಮುಂದಿನ ಪೀಳಿಗೆಗೆ ಧರ್ಮದ ಅರಿವು ಮೂಡಿಸುವ ಕುರಿತು ಜೈನ ಧರ್ಮದಲ್ಲಿ ಅನೇಕ ಧಾರ್ಮಿಕ ಕಾರ್ಯಗಳು ಆಗಾಗ ನಡೆಯುತ್ತಿರುತ್ತವೆ. ಇದರ ಉದ್ದೇಶವೇ ಮುಂದಿನ ಪೀಳಿಗೆಗೂ ಜೈನ ಧರ್ಮದ ಶ್ರೇಷ್ಠತೆ, ಆಚಾರ ವಿಚಾರ ಗೊತ್ತಾಗಲಿ ಎನುವುದೇ ಮೂಲ ಉದ್ದೇಶವಾಗಿದೆ. ಧರ್ಮ ಮರೆತರೆ ಬದುಕಿಲ್ಲ, ಸುಂದರ ಮತ್ತು ಮಹೋನ್ನತ ಬದುಕಿಗೆ ಧರ್ಮವೇ ಮೂಲ ಸೆಲೆಯಾಗಿದೆ. ನಾವು ಧರ್ಮ ಪಾಲಿಸಿದರೆ ನಮ್ಮನ್ನು ಧರ್ಮವೇ ಸಂರಕ್ಷಿಸುತ್ತದೆ ಎಂದು ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನಮುನಿ ಕುಲರತ್ನಭೂಷಣ ಮಹಾರಾಜರು ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ತಾಲೂಕಿನ ಭದ್ರಿಗಿರಿ ಬೆಟ್ಟದಲ್ಲಿ ಹಮ್ಮಿಕೊಂಡ ಜಿನ ಸಹಸ್ರಷ್ಟ ನಾಮ ಅರ್ಚನೆ ಆರಾಧನಾ ಮಹೋತ್ಸದಲ್ಲಿ ಪ್ರವಚನ ನೀಡಿ ಅವರು ಮಾತನಾಡಿದರು. ಹಳಿಂಗಳಿ ಭದ್ರಗಿರಿ ಬೆಟ್ಟ ಜೈನರ ಕಾಶಿಯಾಗಿದ್ದು, ಇಲ್ಲಿ ಸಾವಿರಾರು ವರ್ಷಗಳ ಹಿಂದೆ ೭೭೨ ಮುನಿಗಳು ಚಾತುರ್ಮಾಸ ಗೈದ ಪುಣ್ಯ ಭೂಮಿಯಾಗಿದೆ. ಈ ಸ್ಥಳದಲ್ಲಿ ಇಂಥಹ ಪುಣ್ಯ ಕಾರ್ಯಗಳನ್ನು ಮಾಡುವುದು ಮತ್ತು ಭಾಗಿಯಾಗುವುದರಿಂದ ಅಗಣಿತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.

೨೦ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಪೂಜೆಯಲ್ಲಿ ಭಾಗವಹಿಸಿದ್ದರು. ರಾಜ್ಯ ಸೇರಿದಂತೆ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಶ್ರಾವಕ-ಶ್ರಾವಕಿಯರು ಆಗಮಿಸಿ ಕೃತಾರ್ಥರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಕ್ಷ್ಮೀ ಹೆಬ್ಬಾಳಕರ್‌ ಬ್ಯಾಟಿಂಗ್‌ಗೆ ಶಾಸಕ ಆಸೀಫ್ ಸೇಠ್ ಬೋಲ್ಡ್‌
ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ : ಸಿಎಂ ಸಿದ್ದರಾಮಯ್ಯ