ಸೌಲಭ್ಯ ಕಲ್ಪಿಸುವುದೇ ‘ಜನಸ್ಪಂದನಾ’ ಉದ್ದೇಶ

KannadaprabhaNewsNetwork | Published : Aug 3, 2024 12:40 AM

ಸಾರಾಂಶ

ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ,ಅವರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗ ಸಮ್ಮುಖದಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಸಲಾಗುತ್ತದೆ

ಕನ್ನಡಪ್ರಭ ವಾರ್ತೆ ಚೇಳೂರು

ಜನರು ವಿವಿಧ ಕೆಲಸಗಳ ನಿಮಿತ್ತ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ ಸ್ಥಳದಲ್ಲಿಯೇ ಸಾರ್ವಜನಿಕರ ವಿವಿಧ ಇಲಾಖೆಗಳಿಗೆ ಸಂಭವಿಸಿದ ಸಮಸ್ಯೆಗಳನ್ನ ಬಗೆಹರಿಸುವ ಹಾಗೂ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವುದೇ ಜನಸ್ಪಂದನಾ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಹೇಳಿದರು.

ತಾಲೂಕಿನ ಪಾಳ್ಯಕರೆ ಗ್ರಾಮದಲ್ಲಿ ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಅಲೆದಾಟ ತಪ್ಪಿಸುವ ಉದ್ದೇಶ

ವಿವಿಧ ಕೆಲಸಗಳಿಗಾಗಿ ದೂರದ ಗ್ರಾಮಗಳಿಂದ ತಾಲೂಕು ಕೇಂದ್ರದಲ್ಲಿರುವ ಸರ್ಕಾರಿ ಕಚೇರಿಗಳಿಗೆ ಬಂದು ಕೆಲಸವಾಗದೆ ವಾಪಸ್ ಹೋಗುವಂತಹ ಪರಿಸ್ಥಿತಿ ಅಲ್ಲದೆ ಪ್ರತಿನಿತ್ಯವೂ ಕೆಲಸ ಕಾರ್ಯಗಳನ್ನು ಬಿಟ್ಟು ಕಚೇರಿಗಳ ಸುತ್ತ ಅಲೆದಾಡಲು ಕಷ್ಟವಾಗುತ್ತೆ ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡುವುದನ್ನು ತಪ್ಪಿಸಿ, ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಕಲ್ಪಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ.ಗ್ಯಾರಂಟಿ ಯೋಜನೆಗಳಲ್ಲಿ ಕೆಲವರಿಗೆ ಗೃಹ ಲಕ್ಷೀ ಹಣ ಬಂದಿಲ್ಲ, ಪಡಿತರ ಚೀಟಿ ತೊಂದರೆಯಿಂದ ಕೆಲವರಿಗೆ ಅಕ್ಕಿ ಸಿಗುತ್ತಿಲ್ಲ ಎಂಬ ಮಾಹಿತಿ ಇದೆ. ರೇಷನ್ ಕಾರ್ಡ್ ಮತ್ತು ಗೃಹಲಕ್ಷೀ ಹಣ ಮಹಿಳೆಯರಿಗೆ ತಲುಪಿಸುವ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.ಪಾಳ್ಯಕರೆ ಮುಖ್ಯ ಅಭಿವೃದ್ಧಿ

ಚೇಳೂರು ತಾಲೂಕಿನ ಪಾಳ್ಯಕೆರೆ ಗ್ರಾ.ಪಂ ವ್ಯಾಪ್ತಿಯ ಬಹುತೇಕ ರಸ್ತೆಗಳ ಅಭಿವೃದ್ದಿಯಾಗಿದೆ. ೫ ಕೋಟಿ ರೂ.ಗಳ ವೆಚ್ಚದಲ್ಲಿ ಪಾಳ್ಯಕರೆ ಮುಖ್ಯ ಅಭಿವೃದ್ದಿಪಡಿಸಲಾಗುವುದು. ೧೦ ವರ್ಷಗಳ ಹಿಂದೆ ದರಖಾಸ್ತುನಲ್ಲಿ ೩೫೪೮ ಮಂದಿ ಸಾಗುವಳಿ ಚೀಟಿ ಪಡೆದುಕೊಂಡಿದ್ದಾರೆ ಜಮೀನು ತಂದೆ, ತಾತ ರವರ ಹೆಸರಿನಲ್ಲಿ ಮಂಜೂರಾಗಿದೆ ಆದರೆ ಇದುವರೆವಿಗೂ ಖಾತೆ ಮಾಡಿಕೊಂಡಿಲ್ಲ. ಸಾಗುವಳಿ ಚೀಟಿ ಮಾಡಿಸಿಕೊಂಡು ಮನೆಯಲ್ಲಿ ಇಟ್ಟುಕೊಂಡರೆ ಯಾವುದೇ ಪ್ರಯೋಜವಾಗಲ್ಲ, ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಹ ಸಾಧ್ಯವಾಗಲ್ಲ ತಕ್ಷಣ ನಿಮ್ಮ ಹೆಸರಿಗೆ ಖಾತೆ ಮಾಡಿಸಿಕೊಳ್ಳುವಂತೆ ತಿಳಿಸಿದರು.

ರೇಷನ್ ಕಾಡ್. ದರಖಾಸ್ತು, ಒಂದು ಜಮೀನಿಂದ ಇನ್ನೊಂದು ಜಮೀನಿಗೆ ದಾರಿ, ಮನೆ, ಬಸ್ ವ್ಯವಸ್ಥೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಅಹವಾಲುಗಳು ಬಂದಿದ್ದು ಒಂದು ತಿಂಗಳ ಒಳಗೆ ಈ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಕೆಲಸವನ್ನು ಮಾಡಲಾಗುವುದು. ನಿಯಮಾನುಸಾರವಾಗಿದ್ದರೆ ಕೆಲಸ ಮಾಡಲಾಗುವುದು ಇಲ್ಲದಿದ್ದರೆ ಹಿಂಬರಹ ಬರೆದುಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್, ತಾ.ಪಂ ಇಒ ರಮೇಶ್, ಸಿಡಿಪಿಓ ರಾಮಚಂದ್ರಪ್ಪ, ಟಿಹೆಚ್‌ಓ ಡಾ.ಸತ್ಯನಾರಾಯಣರೆಡ್ಡಿ, ಬೆಸ್ಕಾಂ ಎಇಇ ಸೋಮಶೇಕರ್ ಮತ್ತಿತರರು ಇದ್ದರು.

Share this article