- ಧುಳೆಹೊಳೆಯಲ್ಲಿ ಮಕ್ಕಳ ಕಲಿಕಾ ಹಬ್ಬ ಕಾರ್ಯಕ್ರಮ- - - ಮಲೇಬೆನ್ನೂರು: ಶೈಕ್ಷಣಿಕ ಬಲವರ್ಧನೆಗಾಗಿ ಮಕ್ಕಳಿಗೆ ಪಠ್ಯಕ್ಕೆ ಸೀಮಿತವಾದ ಕಲಿಕೆಗೆ ಆದ್ಯತೆ ನೀಡಲಾಗಿದ್ದು, ವಿಶೇಷ ಕಲಿಕಾ ಹಬ್ಬವಾಗಿ ಆಚರಿಸಲಾಗುತ್ತದೆ ಎಂದು ಶಿಕ್ಷಣ ಸಂಯೋಜಕ ಕೆ.ತೀರ್ಥಪ್ಪ ಅಭಿಪ್ರಾಯಪಟ್ಟರು.
ಇಲ್ಲಿಗೆ ಸಮೀಪದ ಧೂಳೆಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಳೆಸಿರಿಗೆರೆ ಸಮೂಹ ಸಂಪನ್ಮೂಲ ವ್ಯಾಪ್ತಿಯ ಕಲಿಕಾ ಹಬ್ಬದಲ್ಲಿ ಅವರು ಮಾತನಾಡಿದರು. ೧ರಿಂದ ೩ನೇ ತರಗತಿವರೆಗೆ ಆರು ಚಟುವಟಿಕೆಗಳು, ೪-೫ನೇ ತರಗತಿವರೆಗೆ ಏಳು ಮತ್ತು ೫-೭ನೇ ತರಗತಿಯ ಮಕ್ಕಳಿಗೆ ಏಳು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ತಲಾ ಶಾಲೆಯಿಂದ ಇಬ್ಬರು ಮಕ್ಕಳು ಭಾಗವಹಿಸಲು ಅವಕಾಶವಿದೆ. ಆ ಮಕ್ಕಳಿಗೆ ಪ್ರತ್ಯೇಕ ಸ್ಥಳದಲ್ಲಿ ರಸ ಪ್ರಶ್ನೆ, ಗಟ್ಟಿ ಓದು, ಕಥೆ ಹೇಳುವುದು, ಕೈ ಬರಹ, ಸಂತೋಷದ ಗಣಿತ, ನೆನಪಿನ ಶಕ್ತಿ ಮತ್ತು ಮಕ್ಕಳು ಹಾಗೂ ಪೋಷಕರ ಸಹ ಸಂಬಂಧ ಇವುಗಳ ಚಟುವಟಿಕೆಗಳನ್ನು ಹಾಕಿಕೊಳ್ಳಲಾಗಿದೆ ಎಂದರು.ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ಮಠ ಮಾತನಾಡಿ, ಶಾಲೆಯಲ್ಲಿ ಮಕ್ಕಳು ಹಾಗೂ ಶಿಕ್ಷಕರ ಸಂಖ್ಯೆ ಇದೆ. ಆದರೆ, ಮಕ್ಕಳು ಆಟವಾಡಲು ಮೈದಾನವೇ ಇಲ್ಲದಾಗಿದೆ. ಗ್ರಾಮಸ್ಥರು ಮೈದಾನಕ್ಕೆ ಸೂಕ್ತ ನಿವೇಶನ ಸೌಲಭ್ಯ ಒದಗಿಸಿಕೊಡಲು ಕೋರಿದರು.
ಎಸ್‌ಡಿಎಂಸಿ ಅಧ್ಯಕ್ಷ ಎಸ್.ನಿಜಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ನಂದಿಗಾವಿ ಗ್ರಾಪಂ ಅಧ್ಯಕ್ಷೆ ಕವಿತಾ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಷಕ ಶರಣ್ ಕುಮಾರ್ ಹೆಗಡೆ, ಮುಖಂಡರಾದ ತೀರ್ಥಪ್ಪ, ರಾಜು, ಪ್ರಕಾಶ್, ಕುಬೇರಪ್ಪ, ರಾಮಪ್ಪ, ಪ್ರಭುಗೌಡ, ಚಂದ್ರಪ್ಪ, ವಿವಿಧ ಸಂಘಟನೆಗಳ ರಾಘವೇಂದ್ರ, ಪೀರು ನಾಯ್ಕ್, ರಮೇಶ್, ಚನ್ನಕೇಶವ್, ಭೀಮಪ್ಪ, ಗದಿಗೆಪ್ಪ ಹಳಿಮನಿ, ಶಶಿಕುಮಾರ್ ಹಾಗೂ ಎಳೆಹೊಳೆ, ಬಿಳಸನೂರು, ಹೊಳೆಸಿರಿಗೆರೆ, ಮಳಲಹಳ್ಳಿ, ಹೊಸಹಳ್ಳಿ, ಇಂಗಳಗೊಂದಿ,ನಂದಿಗಾವಿ ಗ್ರಾಮಗಳ ಮಕ್ಕಳು, ಶಿಕ್ಷಕರು, ಪೋಷಕರು ಇದ್ದರು.ಸಂಜೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಕಲಿಕಾ ಹಬ್ಬ ಕಾರ್ಯಕ್ರಮಕ್ಕಾಗಿ ಶಾಲೆಯನ್ನು ಅಂದವಾಗಿ ಸಿಂಗರಿಸಲಾಗಿತ್ತು.
- - - -೧೭ಎಂಬಿಆರ್೧: ಗ್ರಾ.ಪಂ ಅಧ್ಯಕ್ಷೆ ಕವಿತಾ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿದರು.