- ಜಗದೀಶ್ವರ ಶ್ರೀ ನೇತೃತ್ವದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಶ್ರೀಶೈಲ ಪೀಠದ ಚನ್ನಸಿದ್ದರಾಮ ಶ್ರೀ ನುಡಿ
ಹರಿಹರ ಸಮೀಪದ ಕೋಡಿಯಾಲ ಹೊಸಪೇಟೆಯ ತುಂಗಭದ್ರಾ ನದಿ ದಡದಲ್ಲಿರುವ ಅವಿಮುಕ್ತ ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ಹಮ್ಮಿಕೊಂಡಿದ್ದ ತುಂಗಭದ್ರಾರತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧಾರ್ಮಿಕ ವಿಧಿವಿಧಾನಗಳ ನೆರವೇರಿಸುವಲ್ಲಿ, ಧಾರ್ಮಿಕ ಕಲಾಪಗಳಿಗೆ ಭವ್ಯತೆ ತಂದು ಕೊಡುವುದರಲ್ಲಿ ಉತ್ತರ ಭಾರತದವರಿಗಿಂತ ನಾವು ಕಡಿಮೆ ಇಲ್ಲ ಎಂಬುದನ್ನು ತುಂಗಭದ್ರಾ ನದಿಗೆ ಶ್ರೀ ತುಂಗಭದ್ರಾರತಿ ಆಚರಣೆ ಮಾಡುವ ಮೂಲಕ ಶ್ರೀಗಳು ನಿರೂಪಿಸಿದ್ದಾರೆ ಎಂದರು.ನದಿಗೆ ಆರತಿ ಹಿಂದಿನ ಉದ್ದೇಶ ನೀರಿನ ಪಾವಿತ್ರ್ಯತೆ ಕಾಪಾಡುವುದು, ಮುಂದಿನ ಪೀಳಿಗೆ ನದಿ ಅಪವಿತ್ರಗೊಳಿಸಬಾರದು ಎಂಬುದೇ ಕಾಳಜಿ. ಸರ್ಕಾರಗಳು ನದಿಗಳ ಪಾವಿತ್ರ್ಯತೆ ಕಾಪಾಡಲು ಅಗತ್ಯ ಕಾನೂನು ರೂಪಿಸಿ, ಕಟ್ಟುನಿಟ್ಟಾಗಿ ಪರಿಪಾಲನೆ ಮಾಡಬೇಕು. ಬೇಸಿಗೆಯಲ್ಲಿ ನದಿ ನೀರು ಬತ್ತಿದಾಗ ನೀರಿರಲಿ ಎಂದು ಡ್ಯಾಮ್ ನಿರ್ಮಿಸಿದ್ದಾರೆ. ಜಲಮೂಲ ಉಳಿಸಲು ನದಿ ದಡದಲ್ಲಿ ಗಿಡಗಳನ್ನು ನೆಡುವ ಕಾರ್ಯ ಆಗಬೇಕು ಎಂದು ಸಲಹೆ ನೀಡಿದರು.
ಬಾಲಯೋಗಿ ಜಗದೀಶ್ವರ ಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿ, ಪುಣ್ಯಕೋಟಿ ಮಠಕ್ಕೆ ಭಕ್ತರೇ ಆಸ್ತಿ. ಅವರ ಆಶಯದಂತೆ ತುಂಗಾರಾತಿ ಎಂದಿದ್ದುದನ್ನು ತುಂಗಭದ್ರಾರತಿ ಎಂಬುದಾಗಿ ಬದಲಿಸಿ, ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ, ಪರಿಸರ ಮತ್ತು ನದಿಗಳನ್ನು ಸಂರಕ್ಷಣೆ ಮಾಡದೇ ಹೋದರೆ, ಮುಂದೊಂದು ದಿನ ತುಂಬಾ ಆಪತ್ತನ್ನು ಮನುಷ್ಯ ಅನುಭವಿಸಬೇಕಾಗುತ್ತದೆ. ಜೀವಜಲ ರಕ್ಷಣೆಗೆ ತುಂಗಭದ್ರಾರತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಮಾಜಮುಖಿ ಕಾರ್ಯವಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಂ. ವೀರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಐರಣಿ ಅಣ್ಣೇಶ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಸಿಂಡಿಕೇಟ್ ಮಾಜಿ ಸದಸ್ಯ ಕೆ.ಎನ್. ಪಾಟೀಲ್, ಎಚ್.ವಿಶ್ವನಾಥ್, ವಾಣಿ ಬಕ್ಕೇಶ್, ಶಶಿಕುಮಾರ್ ಮೆಹರ್ವಾಡೆ, ಚೇತನ್, ಎಂ.ಕರಿಯಪ್ಪ, ಹಿರೇಮಠ ಕುಮಾರಸ್ವಾಮಿ. ರವೀಂದ್ರ ಪಾಟೀಲ್ ಇತರರಿದ್ದರು.
ಕೋಟ್ ಮಾಜಿ ಶಾಸಕ ಅರುಣಕುಮಾರ್ ಮಾತನಾಡಿ. ಶ್ರೀಮಠದ ಭಕ್ತರಾಗಿರುವ ರುದ್ರಪ್ಪ ಲಮಾಣಿ ಅವರು ಮುಂದೆ ಸಚಿವರಾಗಿ ಶ್ರೀಮಠಕ್ಕೆ ₹5 ಕೋಟಿ ಅನುದಾನ ನೀಡಲಿ. ಯಡಿಯೂರಪ್ಪನವರು ರಾಜ್ಯದ ಮಠಗಳಿಗೆ ಅನುದಾನ ಆಯಾ ಸಮುದಾಯದ ಶೈಕ್ಷಣಿಕ ಮತ್ತು ಸಾಮಾಜಿಕ ಧಾರ್ಮಿಕ ಅಭಿವೃದ್ಧಿಗೆ ಹೆಚ್ಚು ಒತ್ತುಕೊಟ್ಟವರು
- - - -16ಎಚ್‍ಆರ್‍ಆರ್03-3ಎ: