ಕ್ಲಾಸಿಕ್ ಸಂಸ್ಥೆ ಆಯೋಜಿಸಿದ್ದ ಯುಗಾದಿ ಸಂಭ್ರಮದಲ್ಲಿ ರಾಘವೇಂದ್ರ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಸಮರಸದ ಜೀವನವೇ ಯುಗಾದಿ ಉದ್ದೇಶವಾಗಿದೆ ಎಂದು ಶಿಕ್ಷಕ ಕೆ.ಎಂ.ರಾಘವೇಂದ್ರ ಹೇಳಿದರು.ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಆಯೋಜಿಸಿದ್ದ ಯುಗಾದಿ ಸಂಭ್ರಮದಲ್ಲಿ ಮಾತನಾಡಿದರು. ಉತ್ತಮ ಕಾರ್ಯ ಹಾಗೂ ಹೊಸತನದ ಮೂಲಕ ಬದಲಾವಣೆ ಮಾಡಿಕೊಂಡು ಉತ್ತಮ ಜೀವನ ಸಾಗಿಸುವುದೇ ಯುಗಾದಿ ಅರ್ಥ. ಭಾರತ ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ. ಇಲ್ಲಿ ನೂರಾರು ಹಬ್ಬಗಳು ನಡೆಯುತ್ತವೆ. ಪ್ರತಿಯೊಂದು ಹಬ್ಬಕ್ಕೂ ವಿಶೇಷ ಮಹತ್ವವಿದೆ. ಇದರಲ್ಲಿ ಯುಗಾದಿ ಹಬ್ಬಕ್ಕೆ ಪ್ರಾಕೃತಿಕ, ವೈಜ್ಞಾನಿಕ, ಧಾರ್ಮಿಕ, ಸಾಂಸ್ಕೃತಿ, ಪೌರಾಣಿಕ ಮಹತ್ವವಿದೆ.
ಯುಗಾದಿ ಪ್ರಾಕೃತಿಕವಾಗಿ ಪ್ರಕೃತಿಗೆ ಹೊಸತನ ತರುವ ಕಾಲ, ಧಾರ್ಮಿಕವಾಗಿ ಬ್ರಹ್ಮ ತನ್ನ ಸೃಷ್ಠಿ ಆರಂಭಿಸಿದ ದಿನ, ಪಂಚಾಗ ಶ್ರವಣ, ಚಂದ್ರದರ್ಶನದ ಮೂಲಕ ನಮ್ಮ ಸಂಸ್ಕೃತಿಯನ್ನು ತಿಳಿದುಕೊಳ್ಳುವ ದಿನ, ವೈಜ್ಞಾನಿಕವಾಗಿ ಬೇವು-ಬೆಲ್ಲ ಸೇವನೆ ಮೂಲಕ ಆರೋಗ್ಯಯುತ ಜೀವನಕ್ಕೆ ಮುಂದಡಿಯಿಡುವ ದಿನ. ಬೇವು ಬೆಲ್ಲ ಯುಗದ ಆದಿಯಲ್ಲಿ ಕಷ್ಟ-ಸುಖಗಳು ಸಮನಾಗಿ ದೊರೆಯಲಿ ಎಂದು ಸ್ವೀಕರಿಸುವ ದಿನವಾದರೂ ಸಹ ವೈಜ್ಞಾನಿಕವಾಗಿ ಆರೋಗ್ಯದ ಉದ್ದೇಶವೂ ಇದೆ ಎಂದರು.ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ ಮಾತನಾಡಿ, ಕೇವಲ ಕುಟುಂಬದಲ್ಲಿ ಮಾತ್ರ ನಡೆಯುವ ಹಬ್ಬ. ಸಂಘ ಸಂಸ್ಥೆಗಳಲ್ಲಿ ನಡೆಸಿ ಅದರ ಮಹತ್ವ ತಿಳಿಸುವ ಕಾರ್ಯ ಮಾಡಲಾಗುತ್ತಿದೆ. ಸಾರ್ವಜನಿಕವಾಗಿ ಇಂತಹ ಕಾರ್ಯಕ್ರಮ ನಡೆದಾಗ ಒಗ್ಗಟ್ಟು, ರಾಷ್ಟ್ರೀಯತೆ ಮೂಡಲು ಸಾಧ್ಯವಿದೆ ಎಂದರು.ಜೇಸಿ ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಸುರೇಂದ್ರ, ಸುಧಾಕರ್, ಚೈತನ್ಯ ವೆಂಕಿ, ಯಶವಂತ್, ಸದಸ್ಯರಾದ ಕೆ.ಪ್ರಸಾದ್, ಕೆ.ಪ್ರಶಾಂತ್‌ಕುಮಾರ್, ಶಾಹಿದ್, ರಾಮ್‌ಪ್ರಸಾದ್ ಮತ್ತಿತರರು ಹಾಜರಿದ್ದರು.೦೨ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಜೇಸಿಐ ಸಂಸ್ಥೆಯ ವತಿಯಿಂದ ಯುಗಾದಿ ಅಂಗವಾಗಿ ಬೇವು ಬೆಲ್ಲ ಹಂಚಿ ಸಂಭ್ರಮಿಸಲಾಯಿತು. ಇಬ್ರಾಹಿಂ ಶಾಫಿ, ಕೆ.ಎಂ.ರಾಘವೇಂದ್ರ, ಎನ್.ಶಶಿಧರ್, ಅಶೋಕ್, ಸುರೇಂದ್ರ, ಸುಧಾಕರ್, ಚೈತನ್ಯ ವೆಂಕಿ ಇದ್ದರು.