ಹಿರಿಯ ನಾಗರಿಕರಿಗೆ ಕ್ಷಮಾಗುಣ ವರದಾನವಾಗಬೇಕು

KannadaprabhaNewsNetwork |  
Published : Oct 15, 2026, 02:30 AM IST
ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ ಈರ್ವರಿಗೆ ಶುಭಾಶಯ ತಿಳಿಸಿ ಗೌರವಿಸಲಾಯಿತು | Kannada Prabha

ಸಾರಾಂಶ

ವಯಸ್ಸಾದ ಮೇಲೆ ಮಕ್ಕಳ, ಸೊಸೆಯಂದಿರ, ಮೊಮ್ಮಕ್ಕಳ ಜತೆ ಬದುಕು ಸಾಗಿಸಬೇಕಾದ ಹಿರಿಯರು ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಹೋಗಬೇಕಲ್ಲದೇ ನಮ್ಮದೇ ನಡೆಯಬೇಕೆಂಬ ಭಾವನೆಯಿಂದ ದೂರ ಸರಿಯಬೇಕು.

ಹುಬ್ಬಳ್ಳಿ:

ವಯಸ್ಸಾದ ಮೇಲೆ ಮಕ್ಕಳ, ಸೊಸೆಯಂದಿರ, ಮೊಮ್ಮಕ್ಕಳ ಜತೆ ಬದುಕು ಸಾಗಿಸಬೇಕಾದ ಹಿರಿಯರು ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು ಹೋಗಬೇಕಲ್ಲದೇ ನಮ್ಮದೇ ನಡೆಯಬೇಕೆಂಬ ಭಾವನೆಯಿಂದ ದೂರ ಸರಿಯಬೇಕೆಂದು ಜೀವಿಕಲಾ ಬಳಗದ ಅಧ್ಯಕ್ಷ ಗದಿಗೆಯ್ಯ ವಿ. ಹಿರೇಮಠ ಹೇಳಿದರು.

ನವನಗರದ ಪ್ರೊಬಸ್ ಕ್ಲಬ್‌ನ ಹಿರಿಯ ನಾಗರಿಕರ ಕಲ್ಯಾಣ ಟ್ರಸ್ಟ್ ವೇದಿಕೆ ವತಿಯಿಂದ ನಡೆದ ಮಾಸಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಮನಶಾಂತಿಯನ್ನು ಮುಖ್ಯವಾಗಿಟ್ಟುಕೊಳ್ಳುವುದಾದರೆ ಕ್ಷಮಾಗುಣವನ್ನು ನಾವು ದೇವರಿಂದ ವರದಾನವಾಗಿ ಪಡೆಯಬೇಕು, ಇದು ಅನಿವಾರ್ಯ ಎಂದರು. ತಾರತಮ್ಯಗಳು ದೂರವಾಗಿ ಸಾಮರಸ್ಯ ಬೆಳೆಯಬೇಕೆಂದರೆ, ಅಸಮರ್ಥರಾದ ನಾವುಗಳು ನಮ್ಮ ಮಕ್ಕಳ ಖುಷಿಯಲ್ಲಿ ಪಾಲ್ಗೊಂಡು ಅವರ ಪ್ರೀತಿ , ವಿಶ್ವಾಸಗಳಿಸಿಕೊಳ್ಳಬೇಕಾಗಿದೆ. ಚಿಕ್ಕಮಕ್ಕಳಿದ್ದಾಗ ಸಂಸ್ಕಾರ ಕೊಟ್ಟು ಸಂಸ್ಕೃತಿ ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಮಾರ್ಗದರ್ಶನ ಮಾಡದೇ ಇದ್ದರೆ ಗುರು-ಹಿರಿಯರ ಮೇಲೆ ಮಕ್ಕಳಿಗೆ ಗೌರವ ಬರದೇ ಹೋಗಬಹುದು. ಹಾಗೇನಾದರೂ ಆದರೆ ಅದಕ್ಕೆ ಸಂಸ್ಕಾರ ಕಲಿಸದ ಪಾಲಕರೇ ಹೊಣೆಗಾರರು. ಕಾರಣ ಅವರ ಶಿಕ್ಷಣಕ್ಕಾಗಿ ಏನೆಲ್ಲ ಸೌಲಭ್ಯ ಕೊಡುವ ನಾವುಗಳು ಸಂಸ್ಕಾರ ಕೊಡುವಲ್ಲಿ ಹಿಂದೇಟು ಹಾಕಬಾರದು ಎಂದು ಹೇಳಿದರು.

ಪ್ರೊಬಸ್ ಕ್ಲಬ್ ಅಧ್ಯಕ್ಷ ಶಿವಪ್ಪ ಚಂದಪ್ಪ ನೀರಾವರಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ ಈರ್ವರಿಗೆ ಶುಭಾಶಯ ತಿಳಿಸಿ ಗೌರವಿಸಲಾಯಿತು. ನಿವೃತ್ತ ಪಿಎಸ್‌ಐ ಸಂಗನಗೌಡ ಜಕ್ಕನಗೌಡ್ರ ಪರಿಚಯಿಸಿದರು. ಫಕೀರಪ್ಪ ಸೋಮಗೊಂಡ, ನಾಗಪ್ಪ ಕುರ್ತಕೋಟಿ, ಬಸಪ್ಪ ಹಂಚಿನಾಳ, ಎಂ.ಕೆ. ನಾಡಗೇರ, ಕುಬೇರಪ್ಪ ಸವಡಿ, ಪಿ.ಪಿ. ಗಾಯಕವಾಡ, ಎಸ್‌.ಜಿ. ಹುಬ್ಬಳ್ಳಿ, ರಾಚಯ್ಯ ಚಿಕ್ಕಮಠ, ಜಿ.ಸಿ. ಹತ್ತಿಕಾಳ ಇನ್ನೂ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಸ್ಕೃತಿ, ಸಂಪ್ರದಾಯ ಮುಂದಿನ ಪೀಳಿಗೆಗೆ ಪರಿಚಯಿಸಿ: ಸುರೇಶ್ ನಂಜಪ್ಪ
ಎನ್‌ಡಿಎ ಪರೀಕ್ಷೆ: ಎಕ್ಸ್‌ಪರ್ಟ್‌ನ ೪೧ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಬಿ ಅರ್ಹತೆ