ವಿಜೃಂಭಣೆಯ ಬನ್ನೂರು ಶ್ರೀಹೇಮಾದ್ರಾಂಬ ದೇವಿ ಬಂಡಿ ಜಾತ್ರೋತ್ಸವ-

KannadaprabhaNewsNetwork | Published : Feb 25, 2024 1:50 AM

ಸಾರಾಂಶ

ದೇವಾಲಯಕ್ಕೆ ಬನ್ನೂರು ಶ್ರೀ ಹೇಮಾದ್ರಾಂಬ ದೇವಿಯ ಚಿನ್ನದ ವಿಗ್ರಹವನ್ನು ಟಿ, ನರಸೀಪುರದ ಟ್ರೆಜರಿಯಿಂದ ಮೂರು ದಿವಸದ ಮೊದಲೇ ಗ್ರಾಮಕ್ಕೆ ತಂದು ದೇವಿಯನ್ನು ಪೂಜಾರಿಯ ಮನೆಯಲ್ಲಿ ಇರಿಸಿ ದೇವಿಗೆ ಪೂಜೆ ಪುರಸ್ಕಾರದೊಂದಿಗೆ ದೇವಾಲಯಕ್ಕೆ ಹಬ್ಬದ ಹಿಂದಿನ ದಿವಸ ದೇವಿಯನ್ನು ತಂದು ಅಭಿಷೇಕ, ಅರ್ಚನೆ ಜರುಗಿದ ನಂತರ ತಲೆ ಮೇಲೆ ಹೊತ್ತುಕೊಂಡು ದಲಿತರ ಹೆಬ್ಬಾರೆ ನಾದದೊಂದಿಗೆ ತೇರಿನ ಬೀದಿ ಮೂಲಕ ರತ್ನ ಮಹಲ್ ಸಿನಿಮಾ ಮಂದಿರದ ಹತ್ತಿರವರೆಗೆ ಮೆರೆದು ಹಾದಿ ಯುದ್ದಕ್ಕೂ ಭಕ್ತರು ಚೌಕಗಳನ್ನು ಮೇಲಕ್ಕೆ ಎಸೆದು ಚೌಕ ಚೌಕ ಎಂಬುವುದನ್ನು ಹೇಳುತ್ತಲೆ ಮುನ್ನಡೆಯುತ್ತಾರೆ.

ಫೋಟೋ- 24ಎಂವೈಎಸ್ 63-

ಬನ್ನೂರು ಶ್ರೀ ಹೇಮಾದ್ರಾಂಬ ದೇವಿಯನ್ನು ತಲೆ ಮೇಲೆ ಹೊತ್ತುಕೊಂಡು ಹೆಬ್ಬಾರೆ ನಾದದೊಂದಿಗೆ ಸಂಭ್ರಮ ಸಡಗರದೊಂದಿಗೆ ದೇವಿತೋಪಿಗೆ ತೆರಳುತ್ತಿರುವುದು.

24ಎಂವೈಎಸ್64- ಬನ್ನೂರು ರತ್ನಮಹಲ್ ಚಿತ್ರಮಂದಿರ ಹತ್ತಿರ ಭಕ್ತರು ಹಸು, ಎತ್ತುಗಳನ್ನು ಕಟ್ಟಿ ಬಂಡಿ ಓಡಿಸುತ್ತಿರುವುದು.

------

ಕನ್ನಡಪ್ರಭ ವಾರ್ತೆ ಬನ್ನೂರು

ಟಿ. ನರಸೀಪುರ ತಾಲೂಕಿನ ಬನ್ನೂರಿನಲ್ಲಿ ಶನಿವಾರ ಶ್ರೀ ಹೇಮಾದ್ರಾಂಬ ದೇವಿ ಬಂಡಿ ಜಾತ್ರಾ ಮಹೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಶ್ರೀ ಹೇಮಾದ್ರಾಂಬ ದೇವಾಲಯಕ್ಕೆ ಬನ್ನೂರು ಶ್ರೀ ಹೇಮಾದ್ರಾಂಬ ದೇವಿಯ ಚಿನ್ನದ ವಿಗ್ರಹವನ್ನು ಟಿ, ನರಸೀಪುರದ ಟ್ರೆಜರಿಯಿಂದ ಮೂರು ದಿವಸದ ಮೊದಲೇ ಗ್ರಾಮಕ್ಕೆ ತಂದು ದೇವಿಯನ್ನು ಪೂಜಾರಿಯ ಮನೆಯಲ್ಲಿ ಇರಿಸಿ ದೇವಿಗೆ ಪೂಜೆ ಪುರಸ್ಕಾರದೊಂದಿಗೆ ದೇವಾಲಯಕ್ಕೆ ಹಬ್ಬದ ಹಿಂದಿನ ದಿವಸ ದೇವಿಯನ್ನು ತಂದು ಅಭಿಷೇಕ, ಅರ್ಚನೆ ಜರುಗಿದ ನಂತರ ತಲೆ ಮೇಲೆ ಹೊತ್ತುಕೊಂಡು ದಲಿತರ ಹೆಬ್ಬಾರೆ ನಾದದೊಂದಿಗೆ ತೇರಿನ ಬೀದಿ ಮೂಲಕ ರತ್ನ ಮಹಲ್ ಸಿನಿಮಾ ಮಂದಿರದ ಹತ್ತಿರವರೆಗೆ ಮೆರೆದು ಹಾದಿ ಯುದ್ದಕ್ಕೂ ಭಕ್ತರು ಚೌಕಗಳನ್ನು ಮೇಲಕ್ಕೆ ಎಸೆದು ಚೌಕ ಚೌಕ ಎಂಬುವುದನ್ನು ಹೇಳುತ್ತಲೆ ಮುನ್ನಡೆಯುತ್ತಾರೆ. ಭಕ್ತರಿಂದ ಹೆಜ್ಜೆಗೂ ಅಪಾರ ಪ್ರಮಾಣದ ವಿಳ್ಳೆದೆಲೆ, ಎಳನೀರು ಸಮರ್ಪಿಸುತ್ತಾ ಸಂಭ್ರಮ ಸಡಗರದೊಂದಿಗೆ ದೇವಿತೋಪಿನಲ್ಲಿ ದೇವಿಗೆ ಸ್ನಾನ ಮಾಡಿಸಿ ಹರಿಜನರಂದ ಅವಭೃತಸ್ನಾನ ಮಾಡಿಸಿ ದೇವಿಯನ್ನು ರತ್ನಮಹಲ್ ಸಿನಿಮಾ ಮಂದಿರದ ಹತ್ತಿರವಿರುವ ಮಂಟಪದಲ್ಲಿ ಕೂರಿಸಿ ಭಕ್ತರಿಗೆ ಪೂಜೆಗೆ ಅನುವು ಮಾಡಿಕೊಡಲಾಯಿತು.

ಶ್ರೀ ಹೇಮಾದ್ರಾಂಬ ಸೇವಾ ಸಮಿತಿಯಿಂದ ಪ್ರಸಾದ ಮಜ್ಜಿಗೆ-ಪಾನಕವನ್ನು ಭಕ್ತಾದಿಗಳಿಗೆ ವಿತರಿಸಲಾಯಿತು.

ಮೈ ನೆವರೆಳಿಸಿದ ಎತ್ತಿನ ಓಟ

ಶ್ರೀ ಹೇಮಾದ್ರಾಂಬ ದೇವಿ ಬಂಡಿ ಜಾತ್ರಾ ಮಹೋತ್ಸವದಲ್ಲಿ ಭಕ್ತರು ತಮ್ಮ ಎತ್ತುಗಳನ್ನು, ಮರದ ಬಂಡಿಗಳನ್ನು ಶೃಂಗರಿಸಿಕೊಂಡು ಹಾಲಿನ ಡೈರಿ ಮುಂಭಾಗ ಒಡಾಡಿಸಲಾಯಿತು. ಸಹಸ್ರಾರು ಸಂಖ್ಯೆ ಯಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ಎತ್ತಿನ ಬಂಡಿ ಓಟವನ್ನು ವೀಕ್ಷಿಸಿ ಸಂಭ್ರಮಿಸಿದರು.

ಪಟ್ಟಣದ ಸರ್ವ ಧರ್ಮಿಯರು ಒಳಗೊಂಡಂತೆ ಶ್ರೀ ಹೇಮಾದ್ರಾಂಬ ದೇವಿ ಜಾತ್ರೆ ಮುಗಿಯುವತನಕ ಮಾಂಸ ಮಾರಾಟ ನಿಷೇಧ ಮಾಡಲಾಗುವುದು.

ಇಂದು ರಥೋತ್ಸವ

ಪಟ್ಟಣದ ಶ್ರೀ ಹೇಮಾದ್ರಾಂಬ ದೇವಿ ಬಂಡಿ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಬೆಳಗ್ಗೆ 9.40 ರಿಂದ 10.15 ಸಲ್ಲುವ ಮೇಷ ಲಗ್ನದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಲಿದೆ.

Share this article