ರಾಮಾಯಣ ಸರ್ವಕಾಲಕ್ಕೂ ಸರ್ವರಿಗೂ ಅನ್ವಯ

KannadaprabhaNewsNetwork |  
Published : Oct 27, 2026, 01:15 AM IST
ವಾಲ್ಮೀಕಿ  | Kannada Prabha

ಸಾರಾಂಶ

ರಾಮಾಯಣ ಮಹಾಕಾವ್ಯವು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ಆಚರಣೆಗಳ ಬಗ್ಗೆ ಇಂದಿನ ಕಾಲಘಟ್ಟಕ್ಕೂ ಪ್ರಚಲಿತವಾಗಿದೆ ಮಹಾನ್ ಕಾವ್ಯವಾಗಿದೆ.

ಚಿಂತಾಮಣಿ: ಮಹರ್ಷಿ ವಾಲ್ಮೀಕಿರವರು ಆದಿಕವಿಯಾಗಿದ್ದು, ಅವರು ಒಂದು ಸಮಾಜಕ್ಕೆ ಸೇರಿದ ನಾಯಕರಲ್ಲ, ಇಡೀ ಮಾನವಕುಲಕ್ಕೆ ಜ್ಞಾನದ ಬೆಳಕನ್ನು ನೀಡಿದಂತಹ ಮಹಾನ್ ಮೇರುವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯೇ ಮಹರ್ಷಿ ವಾಲ್ಮೀಕಿರವರಾಗಿದ್ದಾರೆಂದು ಜೆಡಿಎಸ್ ಯುವಮುಖಂಡ ಜಂಗಮಪುರ ನಾರಾಯಣಮೂರ್ತಿ ನುಡಿದರು.

ನಗರದ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಅವರ ಗೃಹ ಕಚೇರಿಯಲ್ಲಿ ಜೆಡಿಎಸ್ ಮುಖಂಡರು ಹಾಗೂ ಸಮುದಾಯದ ಮುಖಂಡರು ಮಹರ್ಷಿ ವಾಲ್ಮೀಕಿರ ಭಾವಚಿತ್ರಕ್ಕೆ ಪೂಜೆ, ಪುಷ್ಪ ನಮನ ಸಲ್ಲಿಸಿ, ಮಹರ್ಷಿ ವಾಲ್ಮೀಕಿರ ಜಯಂತಿಯನ್ನು ಆಚರಣೆ ಮಾಡಿದ ನಂತರ ಮಾತನಾಡಿ, ನಮ್ಮ ನಾಯಕರಾದ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿರ ನಿರ್ದೇಶನದಂತೆ ಇಂದು ಗೃಹ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದು ಮಹರ್ಷಿ ವಾಲ್ಮೀಕಿರವರು ರಚಿಸಿದಂತಹ ರಾಮಾಯಣ ಮಹಾಕಾವ್ಯವು ನಮ್ಮ ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ ಆಚರಣೆಗಳ ಬಗ್ಗೆ ಇಂದಿನ ಕಾಲಘಟ್ಟಕ್ಕೂ ಪ್ರಚಲಿತವಾಗಿದೆ ಮಹಾನ್ ಕಾವ್ಯವಾಗಿದೆಯೆಂದರು.

ಮಹರ್ಷಿ ವಾಲ್ಮೀಕಿ ಮಹರ್ಷಿಗಳು ಹಲವು ಮಹರ್ಷಿಗಳಿಗೆ ನೆಲಹಾಕಿಕೊಟ್ಟವರು, ದ್ವಾಪರಯುಗ, ತ್ರೇತಾಯುಗ, ಕಲಿಯುಗದಲ್ಲೂ ಎಲ್ಲಾ ಯುಗಗಳಲ್ಲಿ ಸಾವಿರಾರು ಮಹರ್ಷಿಗಳು ಬಂದು ಹೋದರು. ವಿಶ್ವಾಮಿತ್ರ, ಕಣ್ವ ಮಹರ್ಷಿ, ವಶಿಷ್ಟ ಮಹರ್ಷಿ, ಪರಶುರಾಮ ವೇದವ್ಯಾಸರು ಸೇರಿದಂತೆ ಎಲ್ಲ ಮಹರ್ಷಿಗಳಿಗೆ ತಮ್ಮ ಸರಳತೆ, ಜ್ಞಾನ ಮತ್ತು ತಾಳ್ಮೆಯ ಮೂಲಕ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಂತಹ ಮಹರ್ಷಿಯೇ ವಾಲ್ಮೀಕಿ ಮಹರ್ಷಿಗಳೆಂದು ನುಡಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರಾದ ತೌಡು ಮಂಜುನಾಥ್, ರಾಧಾಕೃಷ್ಣ, ಪೊಟೋ ನಾರಾಯಣಪ್ಪ, ಕಟಮಾಚನಹಳ್ಳಿ ಮಂಜುನಾಥ್, ದೊಡ್ಡಕೊಂಡ್ರಹಳ್ಳಿ ಬಾಲಾಜಿ, ಸಿದ್ದೇಪಲ್ಲಿ ಮನು, ಚಿಮೂಲ್ ನಿರ್ದೇಶಕ ಆವುಲಪ್ಪ, ಜೆಡಿಎಸ್ ಮುಖಂಡರಾದ ಸಿ.ಎನ್.ವೆಂಕಟೇಶ್, ದೇವಳಂ ಶಂಕರ್, ವಕೀಲರಾದ ಮಂಜುನಾಥರೆಡ್ಡಿ, ಗೋಪಿ, ಸಮದ್, ಜೆಡಿಎಸ್ ಎಸ್ಸಿ ಘಟಕದ ಜಿಲ್ಲಾದ್ಯಕ್ಷ ಮಾದಮಂಗಲ ಆಂಜಿ, ಜೆಡಿಎಸ್ ತಾಲೂಕು ಯುವ ಘಟಕದ ಅದ್ಯಕ್ಷ ವೆಂಕಟಾಚಲಪತಿ, ಲೊಕೇಶ್, ರಾಮಾಂಜಿ, ಅಪ್ಸರ್ ಪಾಷಾ, ಗೋವರ್ದನ್, ವೇಣು, ವೆಂಕಟೇಶ್ ಇದ್ದರು.

ಚಿತ್ರಶೀರ್ಷಿಕೆ: ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿರ ಗೃಹ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನದಿ ತೀರ ಕಲುಷಿತ ಆತಂಕಕಾರಿ: ಶಾಂತ ಮಲ್ಲಿಕಾರ್ಜುನ ಶ್ರೀ
ಕಡಲತಡಿಯಿಂದ ಕಾಶ್ಮೀರಕ್ಕೆ ಆಟೋ ಜೈತ್ರ ಯಾತ್ರೆ!