ಉತ್ತಮ ಸಮಾಜ ನಿರ್ಮಾಣದ ಹೊಣೆ ನಮ್ಮೆಲ್ಲರ ಮೇಲಿದೆ

KannadaprabhaNewsNetwork |  
Published : Nov 30, 2026, 02:45 AM IST
29ಎಚ್ಎಸ್ಎನ್4 :  | Kannada Prabha

ಸಾರಾಂಶ

15ನೇ ಶತಮಾನದ ಶ್ರೇಷ್ಠ ಕೀರ್ತನೆಕಾರರಾದ ಕನಕದಾಸರು ಭಕ್ತಿ,ಕಾಯಕ, ಆಧ್ಯಾತ್ಮ ಮತ್ತು ವೈರಾಗದ ಮೂಲಕ ಸಮಾಜದಲ್ಲಿದ್ದ ಮೌಡ್ಯ ಕಂದಾಚಾರಗಳನ್ನು ತೊಡೆದು ಹಾಕುವಲ್ಲಿ ಶ್ರಮಿಸಿದ ಮಹಾನ್ ಸಂತರಾಗಿದ್ದರು ಎಂದು ತಾಲೂಕು ದಂಡಾಧಿಕಾರಿ ಮಲ್ಲಿಕಾರ್ಜುನ ಅವರು ಅಭಿಪ್ರಾಯಪಟ್ಟರು. ಕನಕದಾಸರು ಸಮಾಜದ ಒಳಿತಿಗಾಗಿ ನೀಡಿದ ತತ್ವ ಸಂದೇಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ಅವರ ನೀತಿ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಕನ್ನಡಪ್ರಭ ವಾರ್ತೆ ಆಲೂರು

15ನೇ ಶತಮಾನದ ಶ್ರೇಷ್ಠ ಕೀರ್ತನೆಕಾರರಾದ ಕನಕದಾಸರು ಭಕ್ತಿ,ಕಾಯಕ, ಆಧ್ಯಾತ್ಮ ಮತ್ತು ವೈರಾಗದ ಮೂಲಕ ಸಮಾಜದಲ್ಲಿದ್ದ ಮೌಡ್ಯ ಕಂದಾಚಾರಗಳನ್ನು ತೊಡೆದು ಹಾಕುವಲ್ಲಿ ಶ್ರಮಿಸಿದ ಮಹಾನ್ ಸಂತರಾಗಿದ್ದರು ಎಂದು ತಾಲೂಕು ದಂಡಾಧಿಕಾರಿ ಮಲ್ಲಿಕಾರ್ಜುನ ಅವರು ಅಭಿಪ್ರಾಯಪಟ್ಟರು.

ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ 539ನೇ ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನಕದಾಸರು ಸಮಾಜದ ಒಳಿತಿಗಾಗಿ ನೀಡಿದ ತತ್ವ ಸಂದೇಶಗಳು ಎಲ್ಲಾ ಕಾಲಕ್ಕೂ ಪ್ರಸ್ತುತವಾಗಿವೆ. ಅವರ ನೀತಿ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಸಾಹಿತಿ ಎಂ. ಜಿ. ಪರಮೇಶ್ ಮಡಬಲು, 15ನೇ ಶತಮಾನದಲ್ಲಿ ಪ್ರವರ್ಧಮಾನಕ್ಕೆ ಬಂದ ಕನಕದಾಸರು ಶ್ರೀಹರಿಯ ಪರಮ ಭಕ್ತರಾಗಿದ್ದರು.ಮೇಲು-ಕೀಳು, ಜಾತಿಯ ತಾರತಮ್ಯವನ್ನು ಹೋಗಲಾಡಿಸಲು ಜೀವನದುದ್ದಕ್ಕೂ ಸಾಮಾಜಿಕ ಕ್ರಾಂತಿ ಗೈದವರು. ಇಂತಹ ಮಹಾನೀರ ಜಯಂತಿಗಳು ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ವರ್ಗದ ಜನರು ಆಚರಿಸಿದಾಗ ಮಾತ್ರ ಸಾರ್ಥಕತೆ ಪಡೆಯುತ್ತವೆ ಎಂದು ಹೇಳಿದರು.

ಸಮಾರಂಭದಲ್ಲಿ ಉಪಸ್ಥಿರಿದ್ದ ತಾಲೂಕು ಜೆಡಿಎಸ್ ಅಧ್ಯಕ್ಷ ಕೆ. ಎಸ್. ಮಂಜೇಗೌಡ ಮಾತನಾಡಿ ಕನಕದಾಸರ ತತ್ವ ಸಂದೇಶಗಳು ಮನುಕುಲದ ಒಳಿತಿಗೆ ಹಾಗೂ ಸಮಾಜದ ಅಭಿವೃದ್ಧಿಗೆ ಪೂರಕವಾಗಿವೆ ಅವರ ತತ್ವ ಸಂದೇಶಗಳನ್ನು ಅಳವಡಿಸಿಕೊಂಡು ಎಲ್ಲರೂ ಉತ್ತಮ ಸಮಾಜ ನಿರ್ಮಿಸಬೇಕು ಎಂದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಚಿಕ್ಕೇಗೌಡ ಮಾತನಾಡಿದರು.

ಮರಸು ಗ್ರಾಮದಿಂದ ಬೆಳ್ಳಿರಥದಲ್ಲಿ ಕನಕದಾಸರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ತಾಲೂಕು ಕಚೇರಿ ಅವರಿಗೆ ಕಲಾತಂಡಗಳೊಂದಿಗೆ ಕರೆತರಲಾಯಿತು.

ಸಮಾರಂಭದಲ್ಲಿ ಮರಸು ಎಂ.ಕೆ. ರಾಜಶೇಖರ್, ಚೌಡೇಗೌಡ, ನಿಂಗರಾಜು ಎಮ್. ಎ, ಮಡಬಲು ಚಿದಾನಂದ, ಗಂಗಾಧರ, ಮಂಜೇಗೌಡ, ಕ್ಯಾತನಹಳ್ಳಿಯ ಸ್ವಾಮಿಗೌಡ, ನಿಂಗರಾಜು, ತಿಮ್ಮನಹಳ್ಳಿಯ ಗೋಪಾಲಗೌಡ, ತಾಳೂರು ಮಂಜೇಗೌಡ, ರಾಜಶೇಖರ್‌, ಹರೀಶ್, ಶಾಂತರಾಜು, ಜಿ. ಕೆ. ವೆಂಕಟೇಶ, ಚಂದ್ರೇಗೌಡ, ಅಜ್ಜೇನಹಳ್ಳಿ ರಂಗಯ್ಯ, ಅರಸಪ್ಪ, ಬಸವರಾಜು, ಕಾರ್ಜುವಳ್ಳಿ ರವಿ, ಮಹಾದೇವಿ, ಮಂಜುಳಾ, ಕಾಂಚನ, ಭವಾನಿ, ರಾಧಾ, ಅಶ್ವಿನಿ, ಉಷಾ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾಲೀಕರ ಮನೆ ಬೀಗ ಕದ್ದು ನಕಲಿಕೀ ಮಾಡಿಸಿ ಚಿನ್ನ ದೋಚಿದ ದಂಪತಿ
1154 ಮಸಾಜ್ ಪಾರ್ಲರ್, ಸ್ಪಾ ಮೇಲೆ ದಾಳಿ