ಗ್ರಾಮೀಣ ಕ್ರೀಡಾ ವೈಭವದ ಪುನರುತ್ಥಾನ ಈಗ ಅತ್ಯವಶ್ಯವಾಗಿದೆ: ಶ್ರೀನಿವಾಸ್ ಮಾನೆ

KannadaprabhaNewsNetwork |  
Published : Nov 29, 2026, 02:15 AM IST
ಹಾನಗಲ್ ಉತ್ಸವದ ಅಂಗವಾಗಿ ಆಡೂರು ಗ್ರಾಮದಲ್ಲಿ ಕಬ್ಬಡ್ಡಿ ಪಂದ್ಯಾವಳಿಗೆ ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶ್ರೀನಿವಾಸ ಮಾನೆ ಚಾಲನೆ ನೀಡಿದರು. | Kannada Prabha

ಸಾರಾಂಶ

ಹಾನಗಲ್ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕ್ರೀಡಾ ಮಹೋತ್ಸವದ ಅಂಗವಾಗಿ ಶನಿವಾರ ಆಡೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಆಡೂರು ಜಿಲ್ಲಾ ಪಂಚಾಯಿತಿ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾನೆ ಶ್ರೀನಿವಾಸ ಅವರು ಚಾಲನೆ ನೀಡಿದರು.

ಹಾನಗಲ್ಲ: ಹಾನಗಲ್ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಕ್ರೀಡಾ ಮಹೋತ್ಸವದ ಅಂಗವಾಗಿ ಶನಿವಾರ ಆಡೂರು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಆಡೂರು ಜಿಲ್ಲಾ ಪಂಚಾಯಿತಿ ಮಟ್ಟದ ಕಬಡ್ಡಿ ಪಂದ್ಯಾವಳಿಗೆ ಶಾಸಕ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾನೆ ಶ್ರೀನಿವಾಸ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು, ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವುದು ಹಾಗೂ ಗ್ರಾಮೀಣ ಕ್ರೀಡೆಗಳ ವೈಭವವನ್ನು ಮರುಜೀವಗೊಳಿಸಿ ಪುನರುತ್ಥಾನಗೊಳಿಸುವುದು ಹಾನಗಲ್ ಉತ್ಸವದ ಆಶಯವಾಗಿದೆ. ಕಬಡ್ಡಿಯಂತಹ ಮಣ್ಣಿನ ಸೊಗಡಿನ ಕ್ರೀಡೆಗಳು ದೈಹಿಕ ಸಾಮರ್ಥ್ಯದ ಜೊತೆಗೆ ಧೈರ್ಯ, ಶಿಸ್ತು, ಸಮಯಪ್ರಜ್ಞೆ ಮತ್ತು ತಂಡದ ಒಗ್ಗಟ್ಟನ್ನು ಬೆಳೆಸುತ್ತವೆ. ಕ್ರೀಡಾಪಟುಗಳು ಗೆಲುವಿನ ಗುರಿಯೊಂದಿಗೆ ಕ್ರೀಡಾಸ್ಫೂರ್ತಿಯನ್ನೂ ಮೈಗೂಡಿಸಿಕೊಂಡು ಆಡಬೇಕು ಎಂದರು.

ಪಂದ್ಯಾವಳಿ ಆರಂಭವಾಗುತ್ತಿದ್ದಂತೆ ಅಂಕಣದ ತುಂಬೆಲ್ಲಾ ಆಟಗಾರರ ಅಬ್ಬರ, ರೈಡರ್‌ಗಳ ಚುರುಕುತನ, ಎದುರಾಳಿಗಳ ಹಿಡಿತದ ತಂತ್ರ ಹಾಗೂ ಪ್ರೇಕ್ಷಕರ ಚಪ್ಪಾಳೆ-ಶಿಳ್ಳೆಗಳ ಸಂಭ್ರಮ ಮನೆಮಾಡಿತು. ಗ್ರಾಮೀಣ ಕ್ರೀಡಾ ಪ್ರತಿಭೆಗಳ ಸಾಮರ್ಥ್ಯ ಅನಾವರಣಕ್ಕೆ ವೇದಿಕೆಯಾದ ಪಂದ್ಯಾವಳಿ ಕ್ರೀಡಾಭಿಮಾನಿಗಳ ಗಮನ ಸೆಳೆಯಿತು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ೧೬ ತಂಡಗಳು ಪಂದ್ಯಾವಳಿಯಲ್ಲಿ ಭಾಗಹಿಸಿದ್ದವು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ವೀರಪ್ಪ ಬೈಲವಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ತಾಪಂ ಮಾಜಿ ಅಧ್ಯಕ್ಷರಾದ ಶಿವಬಸಪ್ಪ ಪೂಜಾರ, ರಾಜೇಂದ್ರ ಬಾರ್ಕಿ ಮುಖಂಡರಾದ ಭರಮಣ್ಣ ಶಿವೂರ, ರಾಮಣ್ಣ ಮಾದಪ್ಪನವರ, ಪ್ರಕಾಶ ಹುಲಗೂರ, ಮಲ್ಲಿಕಾರ್ಜುನ ಕಳ್ಳಿ, ಅಶೋಕ ಮೋರೆ, ಸಂತೋಷ ದುಂಡಣ್ಣನವರ. ಅರುಣ ಮಣ್ಣಮ್ಮನವರ, ಬಸವರಾಜ ಡುಮ್ಮಣ್ಣನವರ, ಬಾಬು ನಿಕ್ಕಂ, ಮಾರ್ತಾಂಡಪ್ಪ ಬಾರ್ಕಿ, ಶಿವರಾಜ ಬಾಗಸರ, ಶಿವು ತಳವಾರ, ಅಶೋಕ ಹಲಸೂರ, ಮೈಲಾರಿ ಬಾರ್ಕಿ, ಗುಡ್ಡಪ್ಪ ಪೋಲೇಶಿ, ಶರಣಪ್ಪ ಬಳಿಗಾರ, ರವಿ ಜಾಲಗೇರಿ, ಸಂತೋಷ ಹೋತನಹಳ್ಳಿ, ಮಾಲತೇಶ ವಾಲಿಕಾರ, ಹರೀಶ ಗುಮಗಂಡಿ, ಪುಟ್ಟಪ್ಪ ಬಸಾಪುರ, ಪ್ರಕಾಶ ಮಾಸಣಗಿ, ಬಂಗಾರೆಪ್ಪ ಹರಿಜನ, ಯಲ್ಲಪ್ಪ ದೊಡ್ಡಚಿಕ್ಕಣ್ಣನವರ, ಲಕ್ಕಪ್ಪ ಗಂಟೇರ, ರಾಮಪ್ಪ ದೊಡ್ಡಮನಿ, ಕುಮಾರ ಗೂರನವರ, ಬಸಲಿಂಗಪ್ಪ ದೊಡ್ಡಮನಿ, ಅನಂತಗೌಡ ಪಾಟೀಲ, ಚಂದ್ರಗೌಡ ಪಾಟೀಲ, ನಿಸ್ಸೀಮಪ್ಪ ಬೆಳಗಾಲ, ಮೈಲಾರಿ ಕೆಂಚಣ್ಣನವರ, ವೀರುಪಾಕ್ಷ ತಳವಾರ, ಶಂಭಣ್ಣ ಕಳಸದ ಸೇರಿದಂತೆ ಇನ್ನಿತರರು ಇದ್ದರು.

ಕಬಡ್ಡಿ ನಮ್ಮ ಮಣ್ಣಿನ ಸೊಗಡಿನ ಕ್ರೀಡೆ. ಇದು ಕೇವಲ ಗೆಲುವು-ಸೋಲಿನ ಆಟವಲ್ಲ; ಧೈರ್ಯ, ಶಿಸ್ತು, ಸಮಯಪ್ರಜ್ಞೆ ಮತ್ತು ತಂಡದ ಒಗ್ಗಟ್ಟಿನ ಪ್ರತೀಕ. ಗ್ರಾಮೀಣ ಭಾಗದಲ್ಲಿ ಅಪಾರ ಕ್ರೀಡಾ ಪ್ರತಿಭೆಗಳಿದ್ದು, ಅವರಿಗೆ ಸೂಕ್ತ ವೇದಿಕೆ ಮತ್ತು ಪ್ರೋತ್ಸಾಹ ನೀಡುವ ಉದ್ದೇಶದಿಂದ ಹಾನಗಲ್ ಉತ್ಸವದ ಮೂಲಕ ಜಿಲ್ಲಾ ಪಂಚಾಯಿತಿ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ಕ್ರೀಡೆಯಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ, ಕ್ರೀಡಾಸ್ಫೂರ್ತಿ ಮತ್ತು ಸಾಧಿಸುವ ಛಲ ಮುಖ್ಯ. ನಮ್ಮ ಯುವಕರು ಕ್ರೀಡೆಯಲ್ಲಿಯೂ ಸಾಧನೆ ಮಾಡಿ ಹಾನಗಲ್‌ನ ಕೀರ್ತಿ ಹೆಚ್ಚಿಸಲಿ ಎಂಬುದು ನಮ್ಮ ಆಶಯ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕ್ಕರೆ ಕನಿಷ್ಠ ಮಾರಾಟ ಬೆಲೆ ಕೆ.ಜಿ.ಗೆ ₹60ಕ್ಕೆ ಹೆಚ್ಚಿಸಿ
ಸೈನಿಕ ಶಾಲೆ ಪ್ರವೇಶಾತಿಗೆ ಜ.31ರಂದು ಪರೀಕ್ಷೆ