ಸಮಾನತೆ ಹಕ್ಕು ಸಂವಿಧಾನ ನೀಡಿದ ಕೊಡುಗೆ

KannadaprabhaNewsNetwork |  
Published : Nov 05, 2024, 12:52 AM IST
೪ಕೆಎಲ್‌ಆರ್-೫ಕೋಲಾರ ತಾಲೂಕಿನ ಹೊನ್ನೇನಹಳ್ಳಿ ಗ್ರಾಪಂ ಆವರಣದಲ್ಲಿ ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿಶ್ವದ ಅತೀ ದೊಡ್ಡ ಪ್ರಜ್ಞಾಪ್ರಭುತ್ವ ರಾಷ್ಟ್ರ ಭಾರತ. ಇಂದಿಗೂ ಶಾಂತಿ ಸುವ್ಯವಸ್ಥೆಯಿಂದ ದೇಶವು ಮುನ್ನೆಡೆಯುತ್ತಿದೆ ಎಂದರೆ ಅದಕ್ಕೆ ಭದ್ರ ತಳಪಾಯ ಹಾಕಿಕೊಟ್ಟಿರುವ ಶ್ರೇಷ್ಠ ಸಂವಿಧಾನವೇ ಕಾರಣ. ದೇಶದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟು ಮತ್ತು ಸಾಮರಸ್ಯದಿಂದ ನಡೆದುಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಕೋಲಾರ ದೇಶದ ಪ್ರತಿಯೊಬ್ಬರೂ ಸಮಾನತೆಯಿಂದ ಜೀವಿಸುವ ಹಕ್ಕನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ, ಪ್ರತಿಯೊಂದು ಧರ್ಮಕ್ಕೂ ಒಂದೊಂದು ಗ್ರಂಥ ಇದೆ, ಆದರೆ ಎಲ್ಲಾ ಧರ್ಮಗಳಿಗೂ ಸಂವಿಧಾನವೇ ಪವಿತ್ರ ಗ್ರಂಥ ಎಂದು ಎಂಎಲ್‌ಸಿ ಎಂ.ಎಲ್.ಅನಿಲ್ ಕುಮಾರ್ ತಿಳಿಸಿದರು.ತಾಲೂಕಿನ ಹೊನ್ನೇನಹಳ್ಳಿ ಗ್ರಾಪಂ ಆವರಣದಲ್ಲಿ ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರ ಹೆಜ್ಜೆಗುರುತುಗಳನ್ನು ಅರಿತುಕೊಂಡು ಅವರ ಮಾರ್ಗದರ್ಶನದಲ್ಲಿ ನಾವು ಎಲ್ಲರೂ ನಡೆಯಬೇಕು ಎಂದರು.

ದೇಶಕ್ಕೆ ಸಂವಿಧಾನವೇ ಶ್ರೇಷ್ಠ

ವಿಶ್ವದ ಅತೀ ದೊಡ್ಡ ಪ್ರಜ್ಞಾಪ್ರಭುತ್ವ ರಾಷ್ಟ್ರ ಭಾರತ. ಇಂದಿಗೂ ಶಾಂತಿ ಸುವ್ಯವಸ್ಥೆಯಿಂದ ದೇಶವು ಮುನ್ನೆಡೆಯುತ್ತಿದೆ ಎಂದರೆ ಅದಕ್ಕೆ ಭದ್ರ ತಳಪಾಯ ಹಾಕಿಕೊಟ್ಟಿರುವ ಶ್ರೇಷ್ಠ ಸಂವಿಧಾನವೇ ಕಾರಣ. ದೇಶದ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟು ಮತ್ತು ಸಾಮರಸ್ಯದಿಂದ ನಡೆದುಕೊಳ್ಳಬೇಕು. ಭಾರತ ದೇಶದಲ್ಲಿ ಸಂವಿಧಾನ ಮೀಸಲಾತಿಯು ಇಲ್ಲದ ಸಂದರ್ಭದಲ್ಲಿ ಯಾರು ಓದದೇ ಇರುವಷ್ಟು ಪದವಿಗಳನ್ನು ಅಂಬೇಡ್ಕರ್ ಪಡೆದಿದ್ದರು. ಆದರೆ ಇವತ್ತು ಮೀಸಲಾತಿಯಲ್ಲಿ ಎಲ್ಲಾ ಅವಕಾಶಗಳು ಇದ್ದರೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿಲ್ಲ, ಮೀಸಲಾತಿ ಒಂದು ವರ್ಗಕ್ಕೆ ಸೀಮಿತವಾಗಿಲ್ಲ, ಸಮಾಜದಲ್ಲಿನ ಬಡವರಿಗೆ ಮೀಸಲಾತಿ ನೀಡಲಾಗುತ್ತಿದ್ದು ಅಂಬೇಡ್ಕರ್‌ರನ್ನು ಅರ್ಥ ಮಾಡಿಕೊಂಡು ಸಮಾಜಕ್ಕೆ ಒಳ್ಳೆಯ ರೀತಿಯಲ್ಲಿ ತಾವುಗಳು ಕಾಣಿಕೆ ನೀಡಬೇಕಾಗಿದೆ ಎಂದರು.ಶಿಕ್ಷಣಕ್ಕೆ ಆದ್ಯತೆ ನೀಡಬೇಕು

ಸಾಹಿತಿ ಡಾ.ಕುಪ್ಪಹಳ್ಳಿ ಬೈರಪ್ಪ ಮಾತನಾಡಿ, ದೇಶದಲ್ಲಿ ಅಷ್ಟೇ ಅಲ್ಲದೇ ವಿದೇಶದಲ್ಲೂ ಸಹ ವರ್ಷದ ೩೬೫ ದಿನವು ನೆನಪು ಮಾಡಿಕೊಳ್ಳುವ ಮಹಾನ್ ಚೇತನ ಅಂಬೇಡ್ಕರ್ ಎಲ್ಲಿ ಭ್ರಷ್ಟಾಚಾರ, ಸಮಾನತೆ, ಅನ್ಯಾಯ ಕೂಡಿದೆ ಅಲ್ಲಿ ಸಂವಿಧಾನ ಪ್ರಸ್ತುತವೆನಿಸುತ್ತದೆ, ಅಂಬೇಡ್ಕರ್ ಆಶಯ ಬಲಪಡಿಸಲು ಇಂತಹ ಪುತ್ಥಳಿಗಳ ಅವಶ್ಯಕತೆ ಹೆಚ್ಚಾಗಬೇಕು, ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡನೆಗೆ ಸಹ ಮಾರ್ಗದರ್ಶನ ನೀಡಿದ್ದಾರೆ, ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷ ಮಂಜುನಾಥ್, ಪಿಡಿಒ ಹರೀಶ್ ಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಜಿಪಂ ಸಿಎ ಗಂಗಾಧರಯ್ಯ, ಮಾಜಿ ಗ್ರಾಪಂ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ನಾಗೇಂದ್ರ, ವೆಂಕಟೇಶಪ್ಪ, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಖಾದ್ರಿಪುರ ಬಾಬು, ಹೊನ್ನೇನಹಳ್ಳಿ ಗ್ರಾಪಂ ಸದಸ್ಯರಾದ ಶ್ರೀನಾಥ್, ಗಣೇಶ್, ಜಯರಾಮ್, ಯಲ್ಲಮ್ಮ, ರೇಣುಕಮ್ಮ, ಶಿಲ್ಪಾ, ಸೌಂದರ್ಯ, ಅರುಣಾ, ಗೋವಿಂದರಾಜು ಇದ್ದರು.

PREV

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ