ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗಾಂಧಿ ಭವನದಲ್ಲಿ ಜಿ.ಮಾದೇಗೌಡ ಪ್ರತಿಷ್ಠಾನ, ಭಾರತಿ ಎಜುಕೇಷನ್ ಟ್ರಸ್ಟ್ (ಭಾರತೀನಗರ), ಮಹಾತ್ಮಗಾಂಧಿ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಡಾ. ಜಿ.ಮಾದೇಗೌಡ ಸಮಾಜ ಸೇವಾ ಮತ್ತು ಸಾವಯವ ಕೃಷಿಕ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂದಿನ ರಾಜ್ಯದ ರಾಜಕಾರಣಿಗಳಾದ ಗುಂಡೂರಾವ್, ಎಚ್.ಡಿ.ದೇವೇಗೌಡ, ರಾಮಕೃಷ್ಣ ಹೆಗಡೆ, ಜಿ.ಮಾದೇಗೌಡ ಅವರ ಜನಪರ ಅಧಿಕಾರವನ್ನು ಇವತ್ತಿನ ರಾಜಕಾರಣಕ್ಕೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅತ್ಯಂತ ಶ್ರೇಷ್ಠವಾದ ವಿಧಾನ ಪರಿಷತ್ ಸ್ಥಾನದಲ್ಲಿ ಒಮ್ಮೊಮ್ಮೆ ಯಾಕಾದರೂ ಕುಳಿತುಕೊಂಡೆನೋ ಎನ್ನಿಸುತ್ತದೆ ಎಂದು ವಿಷಾದಿಸಿದರು.ಇವತ್ತಿನ ರಾಜಕಾರಣದಲ್ಲಿ ನೆಮ್ಮದಿಯಿಲ್ಲ. ಅವತ್ತಿನ ರಾಜಕಾಣಿಗಳು ಜಿ.ಮಾದೇಗೌಡರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು.
ಚಳವಳಿಗೆ ಹಾಗೂ ರಾಜಕಾರಣಕ್ಕೆ ಪ್ರಸಿದ್ಧವಾಗಿರುವ ಜಿ.ಮಾದೇಗೌಡ ಅವರ ಜೀವನ ಚರಿತ್ರೆ ಕುರಿತು ಸಿನಿಮಾ ಮಾಡಬೇಕು. ಅವರ ಆದರ್ಶ, ಗಾಂಧಿ ತತ್ವ, ಸರಳತೆಯು ಯುವ ಸಮೂಹಕ್ಕೆ ತಿಳಿಸುವ ಕೆಲಸ ಆಗಬೇಕು. ರಾಜಕಾರಣಿಗಳ ಮಕ್ಕಳು ಶೇ.90 ರಷ್ಟು ಪ್ರಿನ್ಸಿಪಲ್ ಇಟ್ಟುಕೊಂಡಿಲ್ಲ. ಆದರೆ, ಇದಕ್ಕೆ ವಿರುದ್ಧವೆಂಬಂತೆ ಮಾದೇಗೌಡರ ಮಗ ಮಧು ಅವರು ನಂಬಿಕೆ ಇರುವಂತೆ ರಾಜಕಾರಣ ಮಾಡುತ್ತಿರುವುದು ಸಮಾಧಾನ ತರಿಸಿದೆ ಎಂದು ಶ್ಲಾಘಿಸಿದರು.
ಪ್ರಶಸ್ತಿ ಕಾರ್ಯಕ್ರಮವು ಮಾದರಿಯಾಗಿದೆ. ಯಾವುದೋ ಮೂಲೆಯಲ್ಲಿರುವ ಸಾಧಕರನ್ನು ಕರೆತಂದು ಪ್ರಶಸ್ತಿ ನೀಡುವ ಮೂಲಕ ಅವರಿಗೆ ಮೌಲ್ಯ ತಂದು ಕೊಡುವ ಕೆಲಸವನ್ನು ಜಿ.ಮಾದೇಗೌಡ ಪ್ರತಿಷ್ಠಾನ ಮಾಡುತ್ತಿರುವುದು ಮೆಚ್ಚುವ ಕೆಲಸ ಎಂದು ತಿಳಿಸಿದರು.
ಜಿ.ಮಾದೇಗೌಡರು ಒಂದು ಮೇರು ಪರ್ವತ ಇದ್ದಂತೆ. ಇವರ ಆದರ್ಶಗಳನ್ನು ನನ್ನ ಬದುಕಿಗೆ ಮಾದರಿಯಾಗಿ ತೆಗೆದುಕೊಳ್ಳುತ್ತೇನೆ. ಕಾವೇರಿ ಹೋರಾಟದಲ್ಲಿ ಅವರ ವ್ಯಕ್ತಿತ್ವವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಜನರ ಮೇಲಿದ್ದ ಅವರ ಪ್ರೀತಿಯನ್ನು ಕಂಡಿದ್ದೇನೆ ಎಂದು ಶ್ಲಾಘಿಸಿದರು.
ಸಾವಯವ ಕೃಷಿಕ ಪ್ರಶಸ್ತಿ ಸ್ವೀಕರಿಸಿದ ಕೃಷಿ ತಜ್ಞ ವಿಜಯ್ ಅಂಗಡಿ ಮಾತನಾಡಿ, ಮಣ್ಣು ಜೀವ ಮತ್ತು ಮಣ್ಣೇ ಜೀವಾಳ ಎಂಬುವಂತೆ ಸಾಗಬೇಕಿದೆ. ಕಡಿಮೆ ನೀರು ಬಳಸಿಕೊಂಡು ಬೆಳೆಬೆಳೆಯುವುದೇ ಕಾಯಕವಾಗಿದೆ. ಪ್ರತಿಯೊಬ್ಬರೂ ಕೃಷಿಯಲ್ಲಿ ತೊಡಗಬೇಕು. ಸಹಜ ಕೃಷಿಗೆ ಒಗ್ಗಿಕೊಳ್ಳುವುದು ಮುಖ್ಯ. ಗುಳೆ ಹೋಗುವವರ ನಡುವೆ ಕೃಷಿಯೇ ಶ್ರೇಷ್ಠ ಎನ್ನುವ ಮೂಲಕ ನಂಬಿ ಜೀವನ ನಡೆಸುತ್ತಿರುವ ಜನರನ್ನು ನೋಡಿದ್ದೇವೆ. ನನ್ನ 14 ಪುಸ್ತಕಗಳನ್ನು ಭಾರತಿ ಎಜುಕೇಷನ್ ಟ್ರಸ್ಟ್‌ಗೆ ನೀಡುತ್ತಿದ್ದೇನೆ ಎಂದರು.