ಒಕ್ಕಲಿಗರ ಭವನದ ರಸ್ತೆಗೆ ಕೆ ಸಿ ಪುಟ್ಟೇಗೌಡ ಹೆಸರು ನಾಮಕರಣ

KannadaprabhaNewsNetwork | Published : Feb 28, 2024 2:36 AM

ಸಾರಾಂಶ

ಸ್ವಾತಂತ್ರ್ಯ ಹೋರಾಟಗಾರ ಕೆ ಸಿ ಪುಟ್ಟೇಗೌಡರ ಹೆಸರನ್ನು ಪಟ್ಟಣದ ಒಕ್ಕಲಿಗರ ಭವನದ ರಸ್ತೆಗೆ ಪುರಸಭೆ ವತಿಯಿಂದ ನಾಮಕರಣ ಮಾಡಲಾಯಿತು

ನಾಮಫಲಕ ಉದ್ಘಾಟಿಸಿದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ

ಕನ್ನಡಪ್ರಭ ವಾರ್ತೆ ಬೇಲೂರು

ಸ್ವಾತಂತ್ರ್ಯ ಹೋರಾಟಗಾರ ಕೆ ಸಿ ಪುಟ್ಟೇಗೌಡರ ಹೆಸರನ್ನು ಪಟ್ಟಣದ ಒಕ್ಕಲಿಗರ ಭವನದ ರಸ್ತೆಗೆ ಪುರಸಭೆ ವತಿಯಿಂದ ನಾಮಕರಣ ಮಾಡಲಾಯಿತು ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿದ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾನುಭಾವರ ಹೆಸರನ್ನು ಚಿರಸ್ಮರಣೆಯಾಗಿ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅದರಂತೆ ನಮ್ಮ ತಾಲೂಕಿನವರಾದ ಕುಶಾವರ ಗ್ರಾಮದ ದಿವಂಗತ ಕೆಸಿ ಪುಟ್ಟೇಗೌಡ ಅವರು ನಿಜವಾದ ಸ್ವಾತಂತ್ರ್ಯ ಹೋರಾಟಗಾರರು ೧೯೦೮ ರಲ್ಲಿ ಜನಿಸಿದ ಇವರು ೩೮ ರಲ್ಲಿ ಹಾಸನ ಜಿಲ್ಲೆಯ ಬೋರ್ಡ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ೧೯೪೨ ರಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಸುಮಾರು ೬ ತಿಂಗಳ ಕಾಲ ಸ್ವಾತಂತ್ರ್ಯ ಕ್ಕಾಗಿ ಸೆರೆವಾಸ ಅನುಭವಿಸಿ ನಮ್ಮ ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ಕೆ ಸಿ ರೆಡ್ಡಿ, ಕೆಂಗಲ್ ಹನುಮಂತಯ್ಯ ಹಾಗೂ ಹೆಚ್ ಸಿ ದಾಸಪ್ಪ, ರೈಲ್ವೆ ಮಾಜಿ ಸಚಿವರೊಂದಿಗೆ ಸೆರೆಮನೆ ವಾಸದೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇಂತಹ ಮಹಾನ್ ನಾಯಕರ ಹೆಸರನ್ನು ನಾವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದ್ದರಿಂದ ಈ ಒಂದು ಅಂಬೇಡ್ಕರ್ ವೃತ್ತದಿಂದ ದೇವಾಲಯದ ಭಾಗದ ರಸ್ತೆಗೆ ಅವರ ಹೆಸರನ್ನು ಇಂದಿನಿಂದ ನಾಮಕರಣ ಮಾಡಲಾಗಿದ್ದು, ಇಂತಹ ಮಹಾನ್ ಹೋರಾಟಗಾರರ ಹೆಸರನ್ನು ಮುಂದಿನ ದಿನಗಳಲ್ಲಿ ನಾವೆಲ್ಲರೂ ಹಚ್ಚಹಸಿರಾಗುವಂತೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಉಷಾ ಸತೀಶ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ ಆರ್ ವೆಂಕಟೇಶ್ ಒಕ್ಕಲಿಗ ಸಂಘದ ಅಧ್ಯಕ್ಷ ಕೆಪಿ ಶೈಲೇಶ್, ಡಾ ರಘು ಚರಣ್, ಬ್ಲಾಂಕ್ ಕಾಂಗ್ರೆಸ್ ಅಧ್ಯಕ್ಷ ನಿಶಾಂತ್, ಕಾರ್ಯದರ್ಶಿ ಇಕ್ಬಾಲ್ ಅಹಮದ್, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪುನೀತ್ ಗೌಡ ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು.

Share this article