ಅಂಕೋಲಾ: ಜೀವನದ ಯಶಸ್ಸಿಗೆ ಗುರುವಿನ ಪಾತ್ರ ಮಹತ್ವವಾದದ್ದು ಎಂದು ಗಿರೀಶ ನಾಯಕ ಅಭಿಪ್ರಾಯಪಟ್ಟರು.
ಶಿಕ್ಷಕನಾದವನು ಕೇವಲ ಪುಸ್ತಕಕ್ಕೆ ಸೀಮಿತವಾದ ಶಿಕ್ಷಣ ಮಾತ್ರವಲ್ಲದೇ ಬದುಕು ನಡೆಸಲು ಅಗತ್ಯವಿರುವ ಶಿಕ್ಷಣ ನೀಡಿ ಗುರುವಾಗಬೇಕು ಎಂದರು.
ಈ ವೇಳೆ ಅತಿಥಿಗಳಾಗಿ ಆಗಮಿಸಿದ್ದ ಮಂಜುನಾಥ ಇಟಗಿ ಗುರುವಿನ ಮಹತ್ವವನ್ನು ತಿಳಿಸಿದರು.ಗಿರೀಶ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪತಂಜಲಿ ಸಮಿತಿಯ ಪ್ರಭಾರಿ ವಿನಾಯಕ ಗುಡಿಗಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಭಾರತ ಸ್ವಾಭಿಮಾನ್ ಟ್ರಸ್ಟ್ ನ ಪ್ರಭಾರ ಡಾ.ವಿಜಯದೀಪ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಯುವ ಭಾರತದ ಪ್ರಭಾರಿ ಸತೀಶ ನಾಯ್ಕ ಹಾಗೂ ಜಿಲ್ಲಾ ಸಂವಾದ ಪ್ರಭಾರಿ ರಾಧಿಕಾ ಆಚಾರಿ ಇದ್ದರು.
ಕಾರ್ಯಕ್ರಮವು ಅಗ್ನಿಹೋತ್ರ ಹವನದೊಂದಿಗೆ ಪ್ರಾರಂಭವಾಯಿತು. ಸಿಂಚನಾ ಕುರ್ಡೇಕರ್ ಪ್ರಾರ್ಥಿಸಿದರು. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಎಚ್.ಕೆ. ನಾಯ್ಕ ವಂದಿಸಿದರು. ಸಿಂಚನಾ ಗೌಡ ಕಾರ್ಯಕ್ರಮ ನಿರ್ವಹಿಸಿದರು.