ರೋಣ: ಸಮಾಜದಲ್ಲಿರುವ ಅಜ್ಞಾನ, ಅಂಧಕಾರವನ್ನು ತೊಲಗಿಸಿ ಉತ್ತಮ ಸಮಾಜವನ್ನು ರೂಪಿಸುವಲ್ಲಿ ಗುರುಗಳ ಪಾತ್ರ ಅನುಪಮವಾಗಿದೆ ಎಂದು ನಿವೖತ್ತ ಮುಖ್ಯೋಪಾಧ್ಯಾಯ ಎಸ್. ಎನ್. ಹಕಾರಿ ಹೇಳಿದರು.
ಶಿಕ್ಷಕರದ್ದು ನಿಸ್ವಾರ್ಥ ಸೇವೆ, ವಿದ್ಯಾರ್ಥಿಗಳನ್ನು ತನ್ನ ಮಕ್ಕಳೆಂದು, ಅವರ ಭವಿಷ್ಯದ ಜೀವನ ಉಜ್ವಲಗೊಳ್ಳಬೇಕು, ಸಮಾಜಕ್ಕೆ ಅವರಿಂದ ಏನಾದರು ಕೊಡುಗೆ ಸೀಗುವಂತಾಗಬೇಕು ಎಂದು ತನ್ನಲ್ಲಿರುವ ಸರ್ವ ವಿದ್ಯೆಯನ್ನು ಧಾರೆ ಎರೆದು ವಿದ್ಯಾರ್ಥಿಗಳನ್ನು ಸುಂದರ ಮೂರ್ತಿಯನ್ನಾಗಿ ತಿದ್ದು ಶಿಕ್ಷಕ ಕಾಯಕಕ್ಕೆ, ಸೇವೆಗೆ ಸಮಾನವಾದದ್ದು ಮತ್ತೊಂದು ಇಲ್ಲ. ಆದ್ದರಿಂದ ವಿದ್ಯಾರ್ಥಿಗಳು ಶಿಕ್ಷಕರ ಆಶಯದಲ್ಲಿ ನಿಷ್ಠೆ, ಶಿಸ್ತಿನಿಂದ ವಿದ್ಯಾರ್ಜನೆ ಮಾಡಬೇಕು. ವಿದ್ಯಾರ್ಥಿಗಳ ಬೆಳವಣಿಗೆಯೇ ಶಿಕ್ಷಕನಿಗೆ ಸಂತಸ ತರುತ್ತದೆ ಎಂದರುಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಜಿ. ಎ.ಪಟ್ಟಣಶೆಟ್ಟಿ ಮಾತನಾಡಿ, ಸಮಾಜದ ಪರಿವರ್ತನೆಯಲ್ಲಿ ಶಿಕ್ಷಕರ, ವಿದ್ಯಾರ್ಥಿಗಳು ಪಾತ್ರ ಹಿರಿದಾಗಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮುದಾಯ ಒಂದೇ ನಾಣ್ಯದ ಎರಡು ಮುಖಗಳಾಗಿವೆ, ಶಿಕ್ಷಣ ಕ್ಷೇತ್ರದ ಬೆಳವಣಿಗೆಯಲ್ಲಿ ಇವರಿಬ್ಬರ ಪಾತ್ರ ಅಪಾರವಾಗಿದೆ ಎಂದರು.
ಹನಮಂತ ಸಂಧಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಮಾರಂಭದಲ್ಲಿ ಶಿಕ್ಷಕ ಹಾಗೂ ಸಹಾಯಕ ಸಿಬ್ಬಂದಿಗಳು, ಅಂಗನವಾಡಿ ಹಾಗೂ ಪ್ರೌಢ ಶಾಲೆಯ ಎಲ್ಲ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕ ಎಸ್. ಜಿ. ಅಗಸಿಮುಂದಿನ, ಎ. ಜಿ. ಅನಗವಾಡಿ, ಎಸ್. ಎಸ್. ತಳ್ಳಿಹಾಳ. ವಿ.ಎ. ಮಠ ,ಶಾರದಾ ಹಡಪದ, ಸದಾಶಿವಯ್ಯ ಮಲ್ಲಾಪೂರ, ಸವಿತಾ ಮೇಟಿ, ಭೀಮವ್ವ ತೆಗ್ಗಿನಕೇರಿ, ಸವಿತಾ ಮೇಟಿ, ಭೀಮವ್ವ ತೆಗ್ಗಿನಕೇರಿ, ಚಂದ್ರಕಲಾ ಕಟ್ಟಿಮನಿ, ಶರಣಮ್ಮ ವಸ್ತ್ರದ, ರೇಣುಕಾ ತಳವಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಶಿವಕುಮಾರ ಇಟಗಿ ನಿರೂಪಿಸಿದರು. ಅನಿಲ ಕಂಚಿ ಸ್ವಾಗತಿಸಿದರು. ರವೀಂದ್ರ ಇಟಗಿ ವಂದಿಸಿದರು.