-ಜಾನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಸಾಧಕರ ಸನ್ಮಾನ
ಕನ್ನಡಪಭ ವಾರ್ತೆ ಶಹಾಪುರನಮ್ಮ ನಾಡು-ನುಡಿ, ಸಂಸ್ಕೃತಿಗೆ ದೊಡ್ಡ ಪರಂಪರೆ ಇದೆ. ಅದನ್ನು ಉಳಿಸಿ-ಬೆಳೆಸಲು ಕಂಕಣಬದ್ಧರಾಗಬೇಕು. ನಾಡು-ನುಡಿಯ ಸಂರಕ್ಷಣೆ ಸಂಘ-ಸಂಸ್ಥೆಗಳ ಹೊಣೆಯಾಗಿದೆ ಎಂದು ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ. ಗದ್ದುಗೆ ಹೇಳಿದರು.
ನಗರದ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಕಲ್ಯಾಣ ಮಂಟಪದಲ್ಲಿ ಭುವನೇಶ್ವರಿ ಬುರ‍್ರಕಥಾ ಜಾನಪದ ಕಲಾವಿದರ ಸಂಘದ ವತಿಯಿಂದ ಜರುಗಿದ ಜಾನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವೈವಿಧ್ಯಮಯ ಕಲೆ, ನಾಟಕ, ನೃತ್ಯ, ಕಥನಗೀತೆ, ಭಾಷೆ, ಸಂಗೀತ ಮುಂತಾದವನ್ನು ಒಳಗೊಂಡಿರುವ ಬುಡ್ಗಜಂಗಮ ಸಮುದಾಯ ವಿಶಿಷ್ಟ ಸಾಂಸ್ಕೃತಿಕ ಪರಂಪರೆ ಹೊಂದಿದೆ. ಬುಡ್ಗಜಂಗಮ ಸಮುದಾಯದ ಕಲೆ, ಸಂಸ್ಕೃತಿಯ ಬೆಳವಣಿಗೆಗೆ ಎಲ್ಲಾ ರೀತಿಯ ಪ್ರೋತ್ಸಾಹ, ಸಹಕಾರ ನೀಡಲಾಗುವುದು. ಬಡತನ ಪರಿಸ್ಥಿತಿಯಲ್ಲಿರುವ ಈ ಸಮುದಾಯ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದೆ ಎಂದು ಹಲವು ನಿರ್ದೇಶನಗಳ ಮೂಲಕ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವೀಂದ್ರನಾಥ ಎಸ್. ಹೊಸ್ಮನಿ ಅವರು ಅಲೆಮಾರಿ ಸಮುದಾಯದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ನಾರಾಯಣ ಸಗರ, ಶರಣು ಗದ್ದುಗೆ, ಪ್ರಕಾಶ ದೊರೆ, ಮಂಜುನಾಥ್ ಬಿರಾದಾರ್ ಸೇರಿದಂತೆ ವಿವಿಧ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಲ್ಲಯ್ಯ ಸಿ. ಹಿರೇಮಠ ಸುಗಮ ಸಂಗೀತ, ಬೂದಯ್ಯ ಜಿ. ಹಿರೇಮಠ ಸಂಗೀತ ಗಾಯನ, ನೀಲಪ್ಪ ಡಿ. ಚೌದರಿ ಜಾನಪದ ಗಾಯನ, ಸಿದ್ರಾಮಪ್ಪ ಮಾಸ್ತರ್ ವಚನ ಗಾಯನ, ಮಲ್ಲಿಕಾರ್ಜುನ್ ತಬಲವಾದಕರು, ಪ್ರಾಣೇಶ್ ಶಂಕು, ಹಾರ್ಮೋನಿಯಂ, ಆನಂದ ರೆವಲ್ ಡ್ಯಾನ್ಸ್ ಮತ್ತು ಗಾಯನ, ಅಂಜಲಿ ಭರತನಾಟ್ಯ, ಸ್ನೇಹ ಪಾಟೀಲ್ ಭಕ್ತಿ ಗೀತೆ, ಭಾಗ್ಯಲಕ್ಷ್ಮಿ ಕಲಾತಂಡದಿಂದ ನೃತ್ಯ, ಗಾಯನ ಶರಣಮ್ಮ ಕೆ. ಸಾಂಪ್ರದಾಯಿಕ ಪದಗಳ ಪ್ರಸ್ತುತ ಪಡಿಸಿದರು. ಮಲ್ಲಯ್ಯ ಸ್ವಾಮಿ ನಿರೂಪಿಸಿ, ವಂದಿಸಿದರು.
22ವೈಡಿಆರ್4: ಶಹಾಪುರ ನಗರದ ಚರಬಸವೇಶ್ವರ ಗದ್ದುಗೆ ಸಂಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಜಾನಪದ ಸಂಗೀತೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಸಾಧಕರನ್ನು ಸನ್ಮಾನಿಸಲಾಯಿತು.