ಮತದಾರ ಪಟ್ಟಿ ತಯಾರಿಯಲ್ಲಿ ಬಿಎಲ್‌ಒಗಳ ಪಾತ್ರ ಪ್ರಮುಖ

KannadaprabhaNewsNetwork |  
Published : Jul 17, 2025, 12:30 AM IST
ತೇರದಾಳ ಮತಕ್ಷೇತ್ರದ ಬೂತ್ ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಕ್ರಮವನ್ನು ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ಉದ್ಘಾಟಿಸಿದರು. | Kannada Prabha

ಸಾರಾಂಶ

ದೋಷರಹಿತವಾದ, ನಿಷ್ಪಕ್ಷಪಾತ ಮತ್ತು ಪರಿಶುದ್ಧವಾದ ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳು ಬಹಳಷ್ಟು ಮುಖ್ಯವಾಗಿವೆ ಎಂದು ತೇರದಾಳ ತಹಸೀಲ್ದಾರ ವಿಜಯಕುಮಾರ ಕಡಕೋಳ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ದೋಷರಹಿತವಾದ, ನಿಷ್ಪಕ್ಷಪಾತ ಮತ್ತು ಪರಿಶುದ್ಧವಾದ ಮತದಾರರ ಪಟ್ಟಿ ತಯಾರು ಮಾಡುವಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಜವಾಬ್ದಾರಿ ಮತ್ತು ಕರ್ತವ್ಯಗಳು ಬಹಳಷ್ಟು ಮುಖ್ಯವಾಗಿವೆ ಎಂದು ತೇರದಾಳ ತಹಸೀಲ್ದಾರ ವಿಜಯಕುಮಾರ ಕಡಕೋಳ ತಿಳಿಸಿದರು.ಬುಧವಾರ ಇಲ್ಲಿನ ಎಸ್ ಆರ್ ಎ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡ ಬೂತ್ ಮಟ್ಟದ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೂತ್ ಮಟ್ಟದ ಅಧಿಕಾರಿಗಳು ತರಬೇತುದಾರರಿಂದ ಸೂಕ್ತವಾದ ಸಲಹೆ ಮತ್ತು ಮಾಹಿತಿ ಪಡೆದುಕೊಂಡು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಮತದಾರರನ್ನು ಗುರುತಿಸುವ ಕಾರ್ಯ ಮಾಡಬೇಕು ಎಂದು ತಹಸೀಲ್ದಾರ್ ಕಡಕೋಳ ತಿಳಿಸಿದರು.

ಜಿಲ್ಲಾ ಸಂಪನ್ಮೂಲ ವ್ಯಕ್ತಿ ಎ.ಬಿ.ಡೇಂಗ್ರೆ ಮಾತನಾಡಿ, ಅರ್ಹ ವ್ಯಕ್ತಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದರ ಜೊತೆಗೆ ಅನರ್ಹರಾದ ವ್ಯಕ್ತಿಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಪ್ರಜಾಪ್ರಭುತ್ವ ಯಶಸ್ವಿಗೆ ಮತದಾನ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಬೂತ್ ಮಟ್ಟದ ಅಧಿಕಾರಿಗಳ ಕಾರ್ಯ ಪ್ರಾಮಾಣಿಕತೆಯಿಂದ ಕೂಡಿರುತ್ತದೆ ಎಂದು ತಿಳಿಸಿದರು.

ಕಂದಾಯ ಇಲಾಖೆಯ ಅಧಿಕಾರಿಗಳಾದ ಪ್ರಕಾಶ ಮಠಪತಿ, ಸದಾಶಿವ ಕುಂಬಾರ, ರವಿ ಹುಲ್ಲನ್ನವರ, ಮಂಜುನಾಥ ನೀಲನ್ನವರ, ತರಬೇತುದಾರರಾದ ಎಚ್.ವೈ. ಆಲಮೇಲ, ಶ್ರೀಶೈಲ ಆಲ್ಯಾಳ, ಎಂ.ಎಂ.ನಾಯಕವಾಡಿ, ಸುರೇಶ ಗಡಾಲೋಟಿ, ಎಫ್.ಬಿ.ತಳವಾರ ಸೇರಿದಂತೆ ಮತಕ್ಷೇತ್ರದ ಗ್ರಾಮ ಆಡಳಿತಾಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ