ನಗರ ಸ್ವಾಸ್ಥ್ಯ ಕಾಪಾಡುವ ಪೌರಕಾರ್ಮಿಕರ ಪಾತ್ರ ದೊಡ್ಡದು

KannadaprabhaNewsNetwork |  
Published : Sep 26, 2025, 01:01 AM IST
23ಎಚ್‌ಯುಬಿ32ನವಲಗುಂದ ಪೌರಕಾರ್ಮಿಕರನ್ನು ಸನ್ಮಾನಿಸಿ ಅಭಿನಂದನಾ ಪತ್ರ ನೀಡಲಾಯಿತು. | Kannada Prabha

ಸಾರಾಂಶ

ಮನೆಯಿಲ್ಲದ ಪೌರ ಕಾರ್ಮಿಕರಿಗೆ ಶೀಘ್ರದಲ್ಲಿ ವಸತಿ ಯೋಜನೆ ಅಡಿ ಮನೆಗಳ ಹಕ್ಕು ಪತ್ರ ವಿತರಿಸಲಾಗುವುದು. ಅವರ ಮಕ್ಕಳಿಗೆ ವಸತಿ ಶಾಲೆಗೆ ನೇರವಾಗಿ ಪ್ರವೇಶ ಕೊಡಿಸಲಾಗುವುದು.

ನವಲಗುಂದ:

ಪೌರ ಕಾರ್ಮಿಕರ ಸೇವೆಗೆ ಬೆಲೆ ಕಟ್ಟಲಾಗದು. ನಗರದ ಸ್ವಾಸ್ಥ್ಯ ಕಾಪಾಡುವಲ್ಲಿ ಪೌರ ಕಾರ್ಮಿಕರ ಪಾತ್ರ ದೊಡ್ಡದಿದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ಪುರಸಭೆಯಿಂದ ಹಮ್ಮಿಕೊಂಡಿದ್ದ 16ನೇ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮನೆಯಿಲ್ಲದ ಪೌರ ಕಾರ್ಮಿಕರಿಗೆ ಶೀಘ್ರದಲ್ಲಿ ವಸತಿ ಯೋಜನೆ ಅಡಿ ಮನೆಗಳ ಹಕ್ಕು ಪತ್ರ ವಿತರಿಸಲಾಗುವುದು. ಅವರ ಮಕ್ಕಳಿಗೆ ವಸತಿ ಶಾಲೆಗೆ ನೇರವಾಗಿ ಪ್ರವೇಶ ಕೊಡಿಸಲಾಗುವುದು. ಗ್ರೇಟರ್‌ ಬೆಂಗಳೂರು ಮಾದರಿಯಲ್ಲಿ ನವಲಗುಂದ ಸಮೀಪದ 5 ಹಳ್ಳಿಗಳನ್ನು ಸೇರಿಸಿಕೊಂಡು ಈಗಿರುವ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡುವ ಯೋಚನೆ ಇದೆ ಎಂದು ಕೋನರಡ್ಡಿ ತಿಳಿಸಿದರು. ತಹಸೀಲ್ದಾರ್ ಸುಧೀರ ಸಾಹುಕಾರ ಮಾತನಾಡಿ, ಅತಿಯಾದ ಮಳೆಯಿಂದ ಹಲವು ವಾರ್ಡ್‌ಗಳಲ್ಲಿ ನೀರು ನುಗ್ಗಿದ ವೇಳೆ ಪೌರಕಾರ್ಮಿಕರು ಹಗಲು-ರಾತ್ರಿ ಕಾರ್ಯನಿರ್ವಸಿದ್ದರಿಂದ ಪಟ್ಟಣದಲ್ಲಿ ಯಾವುದೇ ತೊಂದರೆಯಾಗಲಿಲ್ಲ ಎಂದರು. ಇದೇ ವೇಳೆ ಎಲ್ಲ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು

ಮುಖ್ಯಾಧಿಕಾರಿ ಶರಣು ಪೂಜಾರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಉಪಾಧ್ಯಕ್ಷೆ ಪರೀದಾಬೇಗಂ ಬಬರ್ಚಿ, ಪೌರಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಶಿವಾನಂದ ಕದಂ, ತಾಲೂಕು ಅಧ್ಯಕ್ಷ ಬಸವರಾಜ ರಾಮಗಿರಿ, ಪ್ರವೀಣ ಅಗಸಿಮನಿ ಅಶೋಕ ಹುಳಕನ್ನವರ, ನಿಂಗಪ್ಪ ದೊಡಮನಿ, ಬಸವರಾಜ ಹುನಸಿಮರದ, ಅರ್ಜುನ ಗುತ್ತೇಪ್ಪನವರ, ಲಲಿತಾ ಹುಳಕನ್ನವರ, ಉಡಚಮ್ಮ ಹೋನಕುದರಿ, ಕನಕವ್ವ ದೊಡಮನಿ, ಮುದಕವ್ವ ಹೊಸರನ್ನವರ, ಶರಣಪ್ಪ ದಾಸರ, ಮೈಲಾರಿ ಗುತ್ತೇಪ್ಪನವರ, ದಾವಲ ಹುಗ್ಗಿ, ಸುರೇಶ ತಳವಾರ, ಸೈಪು ಪುಲಾರಿ, ಬಸವರಾಜ ಕಾಡಮ್ಮನವರ ಸೇರಿದಂತೆ ಎಲ್ಲ ಪುರಸಭೆ ಎಲ್ಲ ಸದಸ್ಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಷೇತ್ರದ ಕೆಲಸವನ್ನು ತಲೆಮೇಲೆ ಹೊತ್ತು ಮಾಡುವೆ
ಜಾತಿ ವೈಷಮ್ಯಕ್ಕೆ ಅವಕಾಶವಿಲ್ಲ:ಡಾ. ತೌಫೀಕ್‌ ಪಾರ್ಥನಳ್ಳಿ